ಬೆಳಕಿನ ಹಬ್ಬಕ್ಕೆ ಲಂಬಾಣಿ ಸಂಪ್ರದಾಯದ ಮೆರಗು-ಮಲವಗೊಪ್ಪದಲ್ಲಿ ಸಂಭ್ರಮದ ದೀಪಾವಳಿ

ಸುದ್ದಿಲೈವ್/ಶಿವಮೊಗ್ಗ

ವಿವಿಧತೆಯಲ್ಲಿ ಏಕತೆಯನ್ನ ಸಾರುವ ಭಾರತದಲ್ಲಿ ಲಂಬಾಣಿ ಸಮುದಾಯದ ಸಂಪ್ರದಾಯ, ಉಡುಗೆ ತೊಡುಗೆಗಳು ಮತ್ತು ಆಚರಣೆಯೂ ಸಹ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಲಂಬಾಣಿ ಸಂಪ್ರದಾಯದ ಉಡುಗೆ ತೊಡುಗೆ ಅವರ ಹಬ್ಬದ ಆಚರಣೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ.
ಶಿವಮೊಗ್ಗ ಮಲವಗೊಪ್ಪದಲ್ಲಿ ಲಂಬಾಣಿ ಸಮುದಾಯದ ದೀಪಾವಳಿ ಹಬ್ಬವನ್ನು ಆಚರಿಸಿದ್ದು ಎಂತಹವರನ್ನೂ ಗಮನ ಸೆಳೆಯುವಂತೆ ಮಾಡಿದೆ. ಕೇವಲ ಪಟಾಕಿಯನ್ನೇ ಸಿಡಿಸಿ ಆಚರಣೆ ಮಾಡುವುದು ದೀಪಾವಳಿ ಅಲ್ಲ, ದೀಪ ಹಚ್ಚುವ ಮೂಲಕ ನಾಡಿಗೆ ಬೆಳಕು ಚೆಲ್ಲುವುದನ್ನ ತೀರಿಸಿಕೊಡಲಾಗಿದೆ. ಈ ಹಬ್ವಕ್ಕೆ ಸಂಪ್ರದಾಯದ ಮೆರಗು ಹಚ್ಚಿ ಸಂಭ್ರಮಿಸಿರುವುದೇ ವಿಶೇಷವಾಗಿದೆ.
ದೀಪಾವಳಿಯನ್ನು ಲಂಬಾಣಿ ನಾರಿಯರು ಸಂಭ್ರಮದಿಂದ ಆಚರಣೆ ಮಾಡಿದರು. ಬಣ್ಣ-ಬಣ್ಣದ ಉಡುಗೆ ತೊಡುಗೆ ತೊಟ್ಟು ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ಬಣ್ಣ-ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಲಾಗಿದೆ, ಗಂಡು ಮಕ್ಕಳು ಸಹ ಸಂಪ್ರದಾಯ ಹಾಡಿಗೆ ಸ್ಟಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ನಮೂನೆಯ ಪಟಾಕಿ ತಂದು ಸಂಭ್ರಮಿಸುವ ಬದಲು ತಾಂಡಾ ನಿವಾಸಿಗಳು ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಹಬ್ಬ ಆಚರಿಸಿದ್ದಾರೆ.
ಸ್ನೇಹಿತರೆಲ್ಲರೂ ಸೇರಿ ಸಿಹಿತಿನಿಸುಗಳನ್ನ ಸವಿದಿದ್ದಾರೆ. ಲಂಬಾಣಿ ಸಂಪ್ರದಾಯದಲ್ಲಿ ಕಾಡಿಗೆ ಹೋಗುವಾಗ ತಾಂಡಾದ ಮುಖ್ಯಸ್ಥರೊಬ್ಬರ ಮನೆ ಮುಂದೆ ಸೇರಿಕೊಂಡು ತೆರಳುವುದನ್ನ ಹಾಡನ್ನು ಹಾಡುತ್ತಾ ತೆರಳುವ ದೃಶ್ಯದ ರೂಪಕವನ್ನ ನೃತ್ಯದ ಮೂಲಕ ಬಿಂಬಿಸುವ ಪ್ರಯತ್ನವನ್ನ ಸಮುದಾಯ ಮಾಡಿದೆ. ಈ ನೃತ್ಯದಲ್ಲಿ ಸಮುದಾಯದ ಮಹಿಳೆಯರು ಮತ್ತು ಯುವತಿಯರು ಭಾಗಿಯಾಗಿ ವೈಭವ ಮೆರಗಿದ್ದಾರೆ.
ಯುವತಿಯರು ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ಬಲಿಪಾಡ್ಯಮಿ ದಿನದಂದು ಸ್ನೇಹಿತೆಯರೊಂದಿಗೆ ಹೂದೋಟಕ್ಕೆ ತೆರಳುತ್ತಾರೆ. ಇದು ದೀಪಾವಳಿಯ ವಿಶೇಷವಾಗಿರುತ್ತದೆ. ಈ ಎಲ್ಲಾ ಸಂಪ್ರದಾಯವನ್ನ ನೃತ್ಯದಮೂಲಕ ಯುವತಿಯರು ಮತ್ತು ಮಹಿಳೆಯರು ತೋರಿಸಿಕೊಟ್ಟಿದ್ದಾರೆ.
ಆಧುನಿಕ ಭರಾಟೆಯಲ್ಲಿ ಸಂಪ್ರದಾಯವನ್ನ ಮರೆಯುತ್ತಿರುವ ಯುವ ಸಮುದಾಯಗಳಿಗೆ ಕೈಗನ್ನಡಿ. ಬಲಿಪಾಡ್ಯದಂದು ಸಾಂಪ್ರದಾಯಿಕ ಉಡುಗೆ, ನೃತ್ಯ, ಆಚರಣೆಗಳು ಕಣ್ಮನ ಸೆಳೆದಿದೆ. ಪಾಂಮ್ಡಿ, ಫೆಟಿಯಾ, ಬಲಿಯಾ, ಚೊಟ್ಲಾ, ಭುರಿಯಾ, ಜಾಂಜರ್, ಸಡಕ್ ಘುಗರಿ, ಕೋಡಿ, ಪುಂದಾ, ಬುಡ್ಡಿ, ಪಟಿಯಾ, ಆಡಿ ಸಾಂಕ್ಳಿ, ಈಂಟಿ, ಇವೆಲ್ಲವೂಗಳಿಂದ ಶೃಂಗಾರಗೊಂಡು ಮಹಿಳೆಯರು ಮತ್ತು ಮಕ್ಕಳು ಭಾಗಿಯಾಗಿದ್ದಾರೆ.
ಆಧುನಿಕವಾಗಿ ಎಷ್ಟೇ ಮುಂದುವರೆದರೂ ಲಂಬಾಣಿ ಜನರು ಮೂಲ ಸಂಪ್ರದಾಯವನ್ನು ಮರೆತಿಲ್ಲ ಎಂಬುದಕ್ಕೆ ಈ ಆಚರಣೆಯೂ ಸಾಕ್ಷಿಯಾಗಿದೆ. ಹೀಗಾಗಿ ಪ್ರತಿ ವರ್ಷ ಬೆಳಕಿನ ಹಬ್ಬ ದೀಪಾವಳಿಯನ್ನ ಲಂಬಾಣಿ ಸಂಪ್ರದಾಯ ಉಡುಗೆ ತೊಟ್ಟು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡುವುದು ಇಲ್ಲಿನ ವಿಶೇಷವಾಗಿದೆ.
ಮಲವಗೊಪ್ಪ ಗ್ರಾಮಸ್ಥರು ಹೀಗಾಗಿ ಪ್ರತಿ ವರ್ಷ ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಂಪ್ರದಾಯ ಉಡುಗೆ ತೊಟ್ಟು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದ್ದು ಮಾತ್ರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ-https://suddilive.in/archives/3135
