ಸ್ಥಳೀಯ ಸುದ್ದಿಗಳು
ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್ ಆಗಿದೆ. ಅದ್ದೈರಿ ಮಾರಿಕಾಂಬ ಜಾತ್ರೆ ನಡೆಸಲು ಇಂದು ಬಡೆದ ಮಾರಿಕಬ ಜಾತ್ರೆ ಸಮಿತಿ ಸಭೆ ನಿರ್ಧರಿಸಿದೆ.
ಈ ಮೊದಲು ಮಾರಿಕಾಂಬ ಜಾತ್ರೆ ಮಾರ್ಚ್ 2024 12 ನೇ ತಾರೀಖಿನಿಂದ 16 ರವರೆಗೆ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿತ್ತು. ಸಮಿತಿ ಸಭೆಗೂ ಮುನ್ನ ದಿನಾಂಕ ಫಿಕ್ಸ್ ಆಗಿರುವ ಬಗ್ಗೆ ಬಹಳ ಚರ್ಚೆಗೆ ಒಳಗಾಗಿತ್ತು.
ಆದರೆ ಅದೇ ದಿನಾಂಕವನ್ನ ಫಿಕ್ಸ್ ಮಾಡಿ ಸಭೆ ನಿರ್ಣಯ ತೆಗೆದುಕೊಂಡಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ ಮಾರಿಕಾಂಬ ಜಾತ್ರೆ 2022 ರಲ್ಲಿ ನಡೆದಿತ್ತು. 2024 ರಲ್ಲಿ ಮಾರ್ಚ್ 12 ರಿಂದ 16 ರವರೆಗೆ ಐದು ದಿನಗಳ ವರಗೆ ನಡೆಯಲಿದೆ. ಮರಿಯಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಯಣ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ-https://suddilive.in/archives/3312
