ಸ್ಥಳೀಯ ಸುದ್ದಿಗಳು

ಆರ್ ಅಶೋಕ್ ರಾಹುಲ್ಲಾ… ರಾಹುಲ್ಲಾ…. ಎಂದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಚುನಾವಣೆ ಮೋದಿಗೋಸ್ಕರ ನಡೆಯುತ್ತಿದೆ ಎಂದು ನನಗೆ ಹಾಗೆ ಅನಿಸೊಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಅಭಿಪ್ರಾಯಪಟ್ಟರು.

ಅವರು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸ್ನೇಹ ಮಿಲನದಲ್ಲಿ ಭಾಗಿಯಾಗಿ ಮಾತನಾಡಿ, ನಮ್ಮ ಭವಿಷ್ಯ ರಕ್ಷಣೆಯಾಗಲು ಚುನಾವಣೆ ನಡೆಯುತ್ತಿದೆ. ಅದಕ್ಕಾಗಿ ಮೋದಿ ಗೆಲ್ಲಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲೆಯಲಿ ಕರ್ಫ್ಯೂ ದಿನಾಲು ಆಗಲಿದೆ ಎಂದು ಆಗ್ರಹಿಸಿದರು.

ರಾಗಿಗುಡ್ಡದಲ್ಲಿ ಹಾಕಿದ ಔರಂಗ‌ಜೇಬ್ ಕಟೌಟ್ ಗಳು ರಾರಾಜಿಸುತ್ತವೆ. ಇದನ್ನ ತಪ್ಪಿಸಬೇಕು ಇದರಿಂದ ಎಚ್ಚೆತ್ತಗೊಳ್ಳದಿದ್ದರೆ ದಿನಾಲು ಇದೇ ದೃಶ್ಯ ಮರುಕಳಿಸುತ್ತದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ವಿಪಕ್ಷ‌ನಾಯಕ 10 ವರ್ಷದ ಹಿಂದೆ ಭಾರತದ ಮೇಲೆ ದಾಳಿ ನಡೆಸುತ್ತಿತ್ತು. ಇಂದು ಭಾರತಬಲಿಷ್ಠವಾಗಿದೆ. ಇತರೆ ದೇಶಗಳಿಗೆ ಸಾಲ ಕೊಡುತ್ತಿದೆ. ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಮೋದಿಯಿಂದ ಎಂದರು.

ಮೋದಿ ಒಬ್ಬರೇ ಕಾಶ್ಮೀರ ನಮ್ಮದು ಎಂದು ಅಧಿಕೃತ ಮುದ್ರೆ ಒತ್ತಿದೆ. ಕಾಂಗ್ರೆಸ್ ಗೆ  ಆ ತಾಕತ್ತು ಇರಲಿಲ್ವಾ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಬಂದ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗುತ್ತಿದೆ. ನಿನ್ನೆಯೂ ಕೂಗಲಾಗಿದೆ. ನರಸತ್ತ ಕಾಂಗ್ರೆಸ್ ಏನು ಮಾಡ್ತು? ಎಂದು ಪ್ರಶ್ನಿಸಿದರು‌.

ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಂಡಿದೆ. ನಮ್ಮ ಹಕ್ಕು ನಮ್ಮ ತೆರಿಗೆ ಎಂಬ ಅಭಿಯಾನ ನಡೆಸುತ್ತಿದೆ. ಒಂದು ವೇಳೆ ಶಿವಮೊಗ್ಗದವರು ನಮ್ಮ ಹಕ್ಕು ನಮ್ಮ ತೆರಿಗೆ ಎಂದರೆ ಹಳ್ಳಿಗರು ಏನು ಮಾಡಬೇಕು?

ರಾಜ್ಯದಲ್ಲಿ ಬೆಂಗಳೂರಿನಿಂದ 65% ಹಣ ಖಜಾನೆಗೆ ಹರಿದು ಬರುತ್ತೆ. ಅದನ್ನ ಬೆಂಗಳೂರಿನವರು ನಮ್ಮ ತೆರಿಗೆನಮ್ಮ ಹಕ್ಕು ಎಂದರೆ ಎಲ್ಲಿ್ಎ ಹೋಗ್ತೀರ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅಮೂಲ್ ಬೇಬಿ ಎಂದಿದ್ರು ಕೇರಳ ಸಿಎಂ

ಕೇರಳದ ಮುಖ್ಯಮಂತ್ರಿ ರಾಹುಲ್ ರನ್ನ ಅಮೂಲ್ ‌ಬೇಬಿ ಎಂದು ಕರೆದಿದ್ದಾರೆ. ಬಿಜೆಪಿ ತಮ್ಮ ಕ್ಯಾಪ್ಟನ್ ಮೋದಿ ಎನ್ನುತ್ತಾರೆ. ಕಾಂಗ್ರೆಸ್ ನ ಕ್ಯಾಪ್ಟನ್ ಯಾರು? ಕಮಾನ್ ಹೇಳಿ ಎಂದು ಮುಗಿಬಿದ್ದರು. ಮಾತು ಎತ್ತಿದ್ರೆ ಐದು ಗ್ಯಾರೆಂಟಿ ಎನ್ನುತ್ತಾರೆ. ದೇಶದ ಭದ್ರತೆ ಬಗ್ಗೆ ಮಾತನಾಡೊಲ್ಲ ಎಂದು ಆರೋಪಿಸಿದರು.

ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ನರಸಿಂಹರಾವ್ ಅವರ ಫೋಟೊ ಹಾಕೋದಿಲ್ಲ. ನಾಯಕರಿಲ್ಲದೆ ಆಟವಾಡಲು ಕಾಂಗ್ರೆಸ್ ಇಳಿದಿದೆ. ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಹಣಹೊಂದಿಸಲು ಮ್ಯಾಜಿಕ್ ಮಾಡ್ತಾರೆ ಎಂದುಕೊಂಡಿದ್ವಿ  ಆದರೆ ಇತರೆ ಅಗತ್ಯ ವಸ್ತುಗಳ ತೆರಿಗೆ ಹೆಚ್ಚಿಸಿದರು. ಕ್ವಾಟರ್ ಗೆ 60 ರೂ ಹೆಚ್ಚಿಸಿದರು. ಇದರಿಂದ ಗಂಡನಿಂದ ಕಿತ್ತು ಹೆಂಡತಿಗೆ ಕೊಡುವ ಸ್ಕೀಮ್ ಆಗಿದೆ ಎಂದರು.

ಸಿದ್ದರಾಮ್ಯ ಬಂದ ಬರ ಬಂತು

3.72 ಲಕ್ಷ ಕೋಟಿ ಹಣ ಬಜೆಟ್ ನಲ್ಲಿ ಪದರತಿ ವರ್ಷ ಉಳಿಯೋದು 60 ಸಾವಿರಕೋಟಿ. ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ. ಎಲ್ಲವೂ ಗ್ಯಾರೆಂಟಿಗೆ ಸುರಿದು ಹೋಗ್ತಾ ಇದೆ. ‘ಸಿದ್ದರಾಮಯ್ಯ ಬಂದ ಬರಗಾಲ ಬಂತು’ 2013 ರಲ್ಲಿ ಬಂದಾಗಲೂ ಬರಗಾಲ ಬಿತ್ತು. ಯಡಿಯೂರಪ್ಪ ದೇವರಹೆಸರಿನಲ್ಲಿ ಬಂದು ಮಳೆ ಸುರಿದು ಹೋಗಿದೆ. ಸಿದ್ದರಾಮಯ್ಯನವರ ಚೊಂಬಲ್ಲಿ ಮುಖ ತೊಳೆಯೋಣ ವೆಂದರೆ ನೀರು ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ಸಲಹೆಗಾರ ಸ್ಯಾಮ್ ಪಿತ್ರೋಡ ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನ  ಸ್ಕ್ಯಾನ್ ಮಾಡಿ ಸರ್ಕಾರ ನಿಗದಿ ಪಡಿಸಿದ ಹಣವನ್ನ ಕಟ್ಟಿದರೆ ಆಸ್ತಿ ನಿಮಗೆ ಬರುತ್ತದೆ. ಇಲ್ಲವೆಂದರೆ ಸರ್ಕಾರಕ್ಕೆ ಹೋಗುತ್ತದೆ ಎಂದಿದ್ದಾರೆ. ಇಂತಹ ತೆರಿಗೆ ಸರ್ಕಾರ ನಿಮಗೆ ಬೇಕಾ ಎಂದರು.

ಇದನ್ನ ಕೇಳಬೇಕೋ ಬೇಡವೋ ಗೊತ್ತಿಲ್ವಾ, ಆದರೆ  ಪ್ರಿಯಾಂಕ ಗಾಂಧಿಯ ಕೊರಳಲ್ಲಿ ತಾಳಿ ಕಾಣಲ್ಲ. ಹಾಗಾಗಿ ಪ್ರಧಾನಿ‌ಮೋದಿ ಸ್ಯಾಮ್ ಪಿತ್ರೋಡ ಅವರ ಸಲಹೆ ನೀಡಿರುವುದನ್ನ‌ನೋಡಿ  ತಾಳಿ ಬಗ್ಗೆ ಮಾತನಾಡಿರೋದು.

ರಾಹುಲ್ಲಾ… ರಾಹುಲ್ಲಾ..

ಕಾಂಗ್ರೆಸ್ ನಿಮ್ಮ ತಾಳಿಯನ್ನೂ  ಕಸಿದುಕೊಳ್ಳುತ್ತಾರೆ ಎಂದು ಮೋದಿ ಹೇಳಿರೋದು ಎಂದ‌ ಮಾಜಿ ಸಚಿವರಿಗೆ ಸಭೀಕರು. ಕರಿಮಣಿ ಮಾಲಿಕ ನೀನಲ್ಲ ಎಂದು ಹಾಡನ್ನ ನೆನಪಿಸಿ ಬೆಂಬಲಿಸಿದರು. ತಕ್ಷಣವೇ ಸಚಿವರು  ರಾಹುಲ್ಲಾ… ರಾಹುಲ್ಲಾ… ಎಂದು ವೈರಲ್ ಆದ ವಿಡಿಯೋ ಹಾಡನ್ನ ಹಾಡಿದರು. ಹೀಗೆ ಸ್ನೇಹ‌ಮಿಲನದಲ್ಲಿ ಇಂಹತ ಘಟನೆ ನಡೆದಿದೆ. ಸಿದ್ದರಾಮಯ್ಯನವರು ಬಂದರೆ ಬರಗಾಲ ಬರಲಿದೆ ಎಂಬ ಆಶೋಕ್ ಹೇಳಿಕೆ ಸಭೀಕರೊಬ್ಬರು ಹೀಗಲಿ ಬಿಡಿ ಸಾರ್ಅವರ ಹೆಸರು ಹೇಳಿದರೆ ಬೀಗೋ ಗಾಳಿಯೂ ಬಂದ್ ಆಗಲಿದೆ ಎಂಬ ಹೇಳಿಕೆ ಹಾಸ್ಯವನ್ನುಂಟು ಮಾಡಿದೆ.‌

ಭಾಷಣದಲ್ಲಿ ಮುಂದು ವರೆದು,  ರಾಘವೇಂದ್ರರನ್ನ ಗೆಲ್ಲಿಸುವುದು ನನ್ನ ಜವಬ್ದಾರಿಯಾಗಿದೆ. ರಾಘಣ್ಣನನ್ನ ಗೆಲ್ಲಿಸಿ ನನ್ನನ್ನಬೆಂಬಲಸಬೇಕು. 90% ರಷ್ಟು ಒಕ್ಕಲಿಗ ಸಮುದಾಯ ನರೇಂದ್ರ ಮೋದಿಯನ್ನ ಗೆಲ್ಲಿಸಿ ಎಂದರು.

ಇದನ್ನು ಓದಿ-https://suddilive.in/archives/14054

Related Articles

Leave a Reply

Your email address will not be published. Required fields are marked *

Back to top button