Suddi Live

ಶಿವಮೊಗ್ಗ ಸುದ್ದಿಗಳು

max

max

Saturday 27 July 2024

ಮಹಿಳೆಯ ಮೃತದೇಹಪತ್ತೆ



ಸುದ್ದಿಲೈವ್/ಶಿವಮೊಗ್ಗ


ನಗರದ ರೈಲ್ವೆ ಹಳಿಯ ಪಕ್ಕದಲ್ಲಿ ವಿವಸ್ತ್ರಗೊಂಡಿರುವ ಸ್ವರೂಪದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಸಿಟಿಯ ಸವಳಂಗ ರೋಡ್‌ನಲ್ಲಿ ಈ ಘಟನೆ ನಡೆದಿದೆ. 


ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಸೇತುವೆ ಬಳಿ ಕೃಷಿನಗರಕ್ಕೆ ಹೋಗುವ ದಾರಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸ್ತಿದ್ದಾರೆ. ಘಟನೆಯ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ.


ಇದನ್ನೂ ಓದಿ-https://www.suddilive.in/2024/07/blog-post_361.html

ಚಲಿಸುತ್ತಿದ್ದ ಬೈಕ್ ಮೇಲೆ ಆಕೇಶಿಯಾ ಮರ ಬಿದ್ದು ಯುವಕ ಸಾವು!

 


ಸುದ್ದಿಲೈವ್/ತೀರ್ಥಹಳ್ಳಿ 


ಚಲಿಸುತ್ತಿದ್ದ ಬೈಕ್ ಮೇಲೆ ಅಕೇಶಿಯಾ ಮರಬಿದ್ದು ಸ್ಥಳದಲ್ಲೇ ರಾಮಪ್ಪ ಎಂಬ ಯುವಕ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.


ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 26 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಕೋಣಂದೂರಿಗೆ ಕೆಲಸದ ನಿಮಿತ್ತ ರಾಮಪ್ಪ ತೆರಳಿದ್ದರು. ವಾಪಾಸ್ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.  ಚಲಿಸುತ್ತಿರುವಾಗಲೇ ಬೈಕ್ ಮೇಲೆ ಆಕೇಶಿಯ ಮರವೊಂದು ಅಪ್ಪಳಿಸಿದೆ. ಇದರಿಂದ ಸ್ಥಳದಲ್ಲೇ ಅಸುನೀಗಿದ್ದಾರೆ. ರಾಮಪ್ಪ ಸಕಾಲಕ್ಕೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಾತ್ರಿ 12.30 ಸುಮಾರಿಗೆ ಸ್ಥಳಕ್ಕೆ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುರಾಜ ಹೆಗ್ಡೆ ಭೇಟಿ ನೀಡಿದ್ದರು. ಈ ಹಿಂದೆ ದೇಮ್ಲಾಪುರ ಸಮೀಪ ಬೈಕ್ ಮೇಲೆ ಮರಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿತ್ತು.


ಇದನ್ನೂ ಓದಿ-https://www.suddilive.in/2024/07/blog-post_798.html

Friday 26 July 2024

ಸೂಡೂರು ಬಳಿ ರೈಲಿನ ಟ್ರ್ಯಾಕ್ ಮೇಲೆ ಬಿದ್ದ ಮರ-ಪ್ರಯಾಣಿಕರ ಪರದಾಟ


 

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನ ಅಧಿಕ ಮಳೆಗೆ ಅನಾಹುತಗಳ ಸರಮಾಲೆಯೇ ಕಂಡು ಬರುತ್ತಿದೆ. ಬಸ್ ಗಳ ಮೇಲೆ ವಿದ್ಯುತ್ ತಂತಿ ಹರಿದ ಬೆನ್ನಲ್ಲೇ ರೈಲಿನ ಅಡಿಳ‌ಮೇಲೆ ಮರ ಬಿದ್ದಿದೆ. ಪರಿಣಾಮ  ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ  ಪ್ರಯಾಣಿಕರು ಪರದಾಡುವಂತಾಗಿದೆ.


ಕುಂಸಿ ಮತ್ತು ಅರಸಾಳು ನಡುವೆ ಬರುವ ಸೂಡೂರು ಬಳಿ ರೈಲ್ವೆ ಹಳಿಯ ಮೇಲೆ ಮರ ಬಿದ್ದಿದ್ದು ಸುಮಾರು 8-20 ರಿಂದ ಇಲ್ಲಿಯವರಗೂ ತೆರವು ಕಾರ್ಯಾಚರಣೆ ಆಗದೆ ಎರಡು ಗಂಟೆಯ ವರಗೆ ರೈಲು ನಿಂತಿದೆ. ಸಾಗರ ಮತ್ತು ತಾಳಗುಪ್ಪ ಚಲಿಸುವ ಪ್ರಯಾಣಿಕರು ಪರದಾಡುವಂತಾಗಿದೆ. 



ಸಾಗರದಿಂದ ಒಂದು ರೈಲು ಮತ್ತು ಶಿವಮೊಗ್ಗದಿಂದ ಇನ್ನೂ ಎರಡು ರೈಲು ಸಙಚರಿಸಬೇಕಿದ್ದು ತೆರವು ಕಾರ್ಯಾಚರಣೆ ಮುಗಿಯುವ ವರೆಗೂ ರೈಲುಗಳು ಸಂಚರಿಸದಂತಾಗಿದೆ. ತೆರವು ಕಾರ್ಯಾಚರಣೆಗೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 


ಇನ್ನೆರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 


ಸುದ್ದಿಲೈವ್/ಶಿವಮೊಗ್ಗ


ಅಧಿಕ ಮಳೆಯಿಂದಾಗಿ ಜಿಲ್ಲೆಯ ಇನ್ನೆರಡು ತಾಲೂಕಿಗೂ ರಜೆ ಘೋಷಿಸಲಸಲಾಗಿದೆ. ಈಗಾಗಲೇ ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ರಜೆ ಘೋಷಣೆ ಬೆನ್ನೇಲ್ಲೇ ಶಾಲೆಗಳ ರಜೆ ಪಟ್ಟಿಗೆ ಇನ್ಬೆರಡು ತಾಲೂಕುಗಳು ಸೇರ್ಪಡೆಯಾಗಿದೆ.

ಸೊರಬ ಮತ್ತು ತೀರ್ಥಹಳ್ಳಿ ಶಾಲೆಗೆ ರಜೆ ಘೋಷಿಸಲಾಗಿದೆ. ಇದರಿಙದ ಜಿಲ್ಲೆ 7 ತಾಲೂಕುಗಳಲ್ಲಿ 4 ತಾಲೂಕಿನ ಶಾಲಾ ಕಾಲೇಜು ಮತ್ತು ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಾಳೆ ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 


ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನಲ್ಲಿ ಅದರಲ್ಲೂ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಈ ಮಳೆಗೆ ನಾಳೆಯೂ ಎರಡು ತಾಲೂಕಿನಲ್ಲಿ ರಜೆ ಘೋಷಿಸಲಾಗೆ. 


ಅಧಿಕ ಮಳೆಯಿಂದ ಶುಕ್ರವಾರ ಈ ಮೂರು ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆದರೆ ಇಲ್ಲಿಯ ವರೆಗೆ ಎರಡು ತಾಲೂಕಿನ ಶಾಲ ಕಾಲೇಜುಗಳಿಗೆ ಆಯಾ ತಹಶೀಲ್ದಾರರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. 


ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ರಜೆ ಘೋಷಿಸಲಾಗಿದೆ. ತೀರ್ಥಹಳ್ಳಿಯಲ್ಲೂ ಶುಕ್ರವಾರ ಮಳೆ ಸುರಿದಿದೆ. ಹವಮಾನ ಇಲಾಖೆ ಏನು ಅಲರ್ಅ್ ಇದೆ ಎಂದು ಅವಲೋಕಿಸಿ ರಜೆ ನೀಡಬೇಕೋ ಅಥವಾ‌ಬೇಡವೋ ಎಂಬ ತೀರ್ಮಾನ ಮಾಡಲಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_776.html

ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ದಿಡೀರ್ ಪ್ರತಿಭಟನೆ-ವಾರ್ಡನ್ ಗೆ ಘೇರಾವ್-ಕುತೂಹಲ ಮೂಡಿಸಿದ ವಾರ್ಡ್ ನ್ ಹೇಳಿಕೆ-

 


ಸುದ್ದಿಲೈವ್/ಶಿವಮೊಗ್ಗ


ನಗರದ ಪಾಜಪೇಯಿ ಬಡಾವಣೆಯಲ್ಲಿರುವ‌ ಬಿಸಿಎಂ ಮೆಟ್ರಕ್ ನಂತರದ ಹಾಸ್ಟೆಲ್ ನಲ್ಲಿ ಮಳೆಯನ್ನೇ ಲೆಕ್ಕಿಸದೆ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ. ತಡವಾಗಿ ಬಂದ ವಾರ್ಡನ್ ಚಂದ್ರಶೇಖರ್ ಅವರನ್ನ ವಿದ್ಯಾರ್ಥಿಗಳು ಘೇರಾವ್ ಮಾಡಿದ್ದಾರೆ. 


ಅಧಿಕಾರಿಗಳಿಗೆ ದಿಕ್ಕಾರ, ಬೇಕೇ ಬೇಕು  ನ್ಯಾಯಬೇಕು ಎಂಬ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸುಧೀರ್ಘ ಪ್ರತಿಔಟನೆ ನಡೆದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ


ಊಟ, ವಿದ್ಯುತ್ ಮತ್ತು ನೀರಿನ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಹಾಸ್ಟೆಲ್ ನಲ್ಲಿ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಸೋಲಾರ್ ಹಾಳಾಗಿದ್ದರೂ ದುರಸ್ತಿ ಮಾಡಿಸುತ್ತಿಲ್ಲ. ಕಳೆದ ಎರಡು ವರ್ಷದಿಂದ ಸೋಲಾರ್ ಕೆಟ್ಟಿದ್ದರು ರಿಪೇರಿ ಮಾಡುತ್ತಿಲ್ಲ.  ಮೇಲಧಿಕಾರಿಗಳ ಗಮನಕ್ಕೆ  ತರಲಾಗಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 


ಬಡಾವಣೆಯಲ್ಲಿ ನಾಲ್ಕು ಹಾಸ್ಟೆಲ್ ಗಳಿವೆ. ಎರಡು ಬಿಸಿಎಂ, ಒಂದು ಎಸ್ ಸಿ ಮತ್ತು  ಎಸ್ ಟಿ ಹಾಸ್ಟೆಲ್ ಗಳಿವೆ. ಎಸ್ ಸಿಎಸ್ಟಿ ಹಾಸ್ಟೆಲ್ ಗೆ ಸ್ಟಡಿ ಟೇಬಲ್ ಬೆಡ್ ನ್ನ ನೀಡಾಗಿದೆ. ಬಿಸಿಎಂ ಹಾಸ್ಟೆಲ್ ಗೆ ಬರುತ್ತಿಲ್ಲ ಏಕೆ? ಬೇಸಿದ ಅನ್ನ ನೀಡುವುದಿಲ್ಲ. ಸಾಂಬಾರ್ ಬಾಯಿಗೆ ಹಾಕಲು ಸಾಧ್ಯವಿಲ್ಲ.  ಟೀಗಳನ್ನ ಕುಡಿಯುವ ಸ್ಥಿತಿಯಲ್ಲೇ ಇರಲ್ಲವೆಂದು ವಿದ್ಯಾರ್ಥಿಗಳ ಆರೋಪವಾಗಿದೆ. 



ಬೆಳಿಗ್ಗೆ ಟಿಫನ್ ಇನ್ ಟೈಮ್ಗೆ ಬರುತ್ತಿಲ್ಲ. ವಾರಕ್ಕೊಮ್ಮೆ ನೀಡುವ ಚಿಕನ್ ಸಹ ಗುಣಮಟ್ಟದಲ್ಲಿರಲ್ಲ. ಇದನ್ನ ಮೇಲಾಧಿಕಾರಿಗಳ ಗಮನಕ್ಕೆ ತರಲಾದರೂ ಪ್ರಯೋಜನವಾಗಿಲ್ಲ. ನಮ್ಮ ಹಣದಲ್ಲೆ  ಊಟ ಮಾಡುತ್ತಿದ್ದೇವೆ ಎಂಬುದು ವಿದ್ಯಾರ್ಥಿಗಳ ದೂರಾಗಿದೆ


ಸಿಟಿ ಬಸ್ ಸಂಪರ್ಕವೂ ಸಹ ಸರಿಯಾದ ವ್ಯವಸ್ಥೆ ಇಲ್ಲ. ಎರಡು ಬಸ್ ಇಲ್ಲಿಗೆ ಬರುತ್ತೆ ಬಸ್ ಗಳಲ್ಲಿ ನಾಲ್ಕು ಹಾಸ್ಟೆಲ್ ಗಳು ಐನೂರು ಜನ ವಿದ್ಯಾರ್ಥಿಗಳು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡನ್ ಸರಿಯಾಗಿ ಸಮಸ್ಯೆ ಬಗೆಹರಿಸುತ್ತಿಲ್ಲ. ಎಂಬುದು ದೂರಾಗಿದೆ. 


ಸ್ಥಳಕ್ಕೆ ಬಂದ ವಾರ್ಡನ್ ನನ್ನ ವಿದ್ಯಾರ್ಥಿಗಳು ಮುತ್ತಿಗೆಹಾಕಿದ್ದಾರೆ. ವಾರ್ಡ್ ನ್ ಸಹ  ಅಮಾನತ್ತುಗೊಂಡರೆ ಅಬ್ಬಬ್ಬ ಎಂದರೆ  6 ತಿಂಗಳು ಮನೆಯಲ್ಲಿರುತ್ತೇನೆ. ಮತ್ತೆ ಡ್ಯೂಟಿಗೆ ಜಾಯಿನ್ ಹಾಕ್ತೀನಿ ಎಂದು ಹೇಳಿರುವುದು ಪ್ರತಿಭಟನೆಯಲ್ಲಿ ಕುತೂಹಲ ಮೂಡಿಸಿದೆ. 


ಸ್ಥಳಕ್ಕೆ 112 ಧಾವಿಸಿದೆ. ನಾಲ್ಕೂ ಹಾಸ್ಟೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ಗಂಟೆ ಕಳೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. 

ಇದನ್ನೂ ಓದಿ-https://www.suddilive.in/2024/07/blog-post_914.html

ಚಂದ್ರಗುತ್ತಿ ದೇಗುಲ ಅಭಿವೃದ್ಧಿಗೆ ಶೀಘ್ರ ಕ್ರಮ: ಡಿಸಿ ಗುರುದತ್ತ ಹೆಗಡೆ

 



ವರದಿ: ಪುರುಷೋತ್ತಮ ಎನ್. ಗದ್ದೆಮನೆ


ಸುದ್ದಿಲೈವ್/ಸೊರಬ


ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿಗೆ ಕೆಲ ಕಾನೂನಾತ್ಮಕ ತೊಡಕುಗಳಿದ್ದು, ಅವುಗಳನ್ನು ಶೀಘ್ರವೇ ನಿವಾರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. 


ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನ ಆಡಳಿತ ಮಂಡಳಿ ಕಚೇರಿಯಲ್ಲಿ ಅರಣ್ಯ, ಮುಜುರಾಯಿ, ಕಂದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 


ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ. ಆದರೆ, ದೇಗುಲವು ಪುರಾತತ್ವ ಇಲಾಖೆಯ ವ್ಯಾಪ್ತಿಗೊಳಪಡುವುದರಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿದೆ. ಇವುಗಳನ್ನು ಶೀಘ್ರವೇ ನಿವಾರಿಸಿಕೊಂಡು, ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು. 


ದೇವಸ್ಥಾನದ ಆವರಣದಲ್ಲಿ ಕಾಮಗಾರಿ ನಡೆಸಲು ಹಾಗೂ ದೇವಸ್ಥಾನವನ್ನು ದುರಸ್ತಿ ಮಾಡಲು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರು ದೇವಸ್ಥಾನದ ಬಗ್ಗೆ ಕಾಳಜಿ ಹೊಂದಿದ್ದಾರೆ. ದೇವಸ್ಥಾನ ಪ್ರಾಂಗಣದ ಸುಮಾರು 300 ಮೀಟರ್ ಆವರಣದಲ್ಲಿ ಕೆಲಸಗಳನ್ನು ಕೈಗೊಳ್ಳುವಂತಿಲ್ಲ. ಈಗಾಗಲೇ ಅಗತ್ಯವಿರುವ ಸುಮಾರು 25 ಕೆಲಸಗಳ ಕುರಿತು ಪಟ್ಟಿ ಮಾಡಲಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗುವುದು. ತದ ನಂತರದಲ್ಲಿ ಇಲಾಖೆಯ ಅನುಮತಿ ಪಡೆದು ದೇವಸ್ಥಾನ ದುರಸ್ತಿ, ಸೇವಾ ಕೌಂಟರ್, ನಾಮ ಫಲಕಗಳ ಅಳವಡಿಕೆ, ನೆರಳಿಗಾಗಿ ಶೆಡ್ ನಿರ್ಮಾಣ, ತಾಯಂದಿರಿಗಾಗಿ ಆರೈಕೆ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದು ಪ್ರಾಂಗಣದ ಸುತ್ತಲಿನ ಸುಮಾರು 10 ಎಕರೆ ಪ್ರದೇಶವನ್ನು ಸುಪರ್ಧಿಗೆ ಪಡೆದು ಪೊಲೀಸ್ ಉಪಠಾಣೆ, ಯಾತ್ರಿ ನಿವಾಸ ಸೇರಿದಂತೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಲಾಗುವುದು. ದೇವಸ್ಥಾನದ ಆದಾಯದ ಶೇ. 30 ರಷ್ಟು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಇದನ್ನು ಬಳಸಿಕೊಂಡು ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. 


ಇದಕ್ಕೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನಾಶೀರ್ವಾದ ಪಡೆದ ಜಿಲ್ಲಾಧಿಕಾರಿಗಳು ದೇವಸ್ಥಾನ ಮಳೆಯಿಂದ ಸೂರುತ್ತಿರುವುದು ಹಾಗೂ ಅಗತ್ಯವಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು.


ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಆರ್. ಯತೀಶ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಮುಜರಾಯಿ ತಹಶೀಲ್ದಾರ್ ಪ್ರದೀಪ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಪುರಾತತ್ವ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿ ನಂದಕುಮಾರ್, ಪ್ರವಾಸೋದ್ಯಮ ಇಲಾಖೆಯ ಧರ್ಮಪ್ಪ ಸೇರಿದಂತೆ ಕಂದಾಯ, ಅರಣ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಇದನ್ನೂ ಓದಿ-https://www.suddilive.in/2024/07/blog-post_296.html