ರಾಜಕೀಯ ಸುದ್ದಿಗಳು

ಪ್ರಜ್ವಲ್ ರೇವಣ್ಣ ವಿಷಯ ಇಲ್ಲಿ ನಿಮಿತ್ತ, ಟಾರ್ಗೆಟ್ ದೇವೇಗೌಡ-ಆರ್ ಅಶೋಕ್

ಸುದ್ದಿಲೈವ್/ಶಿವಮೊಗ್ಗ

ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಯಾರು ಪ್ರಧಾನಿ ಆಗಬೇಕು ಎಂಬ ಚರ್ಚೆ ನಡೆಯುತ್ತಿದ್ದರು ಕಾಂಗ್ರೆಸ್ ಎಲ್ಲೂ ರಾಹುಲ್ ಪ್ರಧಾನಿ ಆಗಬೇಕೆಂಬ ವಿಷಯನ್ನ ಪ್ರಸ್ತಾಪಿಸದೆ ಇರುವುದು ವಿಪರ್ಯಾಸ ಎಂದು ಮಾಜಿ ಗೃಹ ಸಚಿವ‌ ಆರ್ ಅಶೋಕ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಗೆ ಗೊಂದಲವಿದೆ. ಇನ್ನೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದರೆ.ಇಲ್ಲಿ ಪ್ರಧಾನಿ ಯಾರು ರಾಹುಲ್ ಅಥವಾ ಸಿದ್ದರಾಮಯ್ಯನವರ ಎಂಬುದೇ ಗೊಂದಲವಿದೆ ಎಂದರು.

ರಾಹುಲ್ ಗಾಂಧಿ ಅವರು ಪ್ರಜ್ವಲ್ ರೇವಣ್ಣನವರನ್ನ ಮಾಸ್ ರೇಪಿಸ್ಟ್ ಎಂದು ಕರೆದಿರುವ ಬಗ್ಗೆ ರಾಂಗ್ ಆದ ಮಾಜಿ ಸಚಿವರು. ಇವರಿಗೆ ನಾಚಿಗೆ ಆಗಬೇಕು. ಪ್ರಜ್ವಲ್ ರೇವಣ್ಣನಿಗೆ ಗನ್ ಮ್ಯಾನ್ ಇದ್ದಾರೆ. ವಿದೇಶಕ್ಕೆ ಬಿಟ್ಟಿದ್ದು ಯಾಕೆ? ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಹಾಗಾದರೆ ಇವರ ಇಂಟಲಿಜೆನ್ಸಿ ಫೈಲ್ಯೂರ್ ಎಂದು ವಾಗ್ದಾಳಿ ನಡೆಸಿದರು.

ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಆದರೆ ಇಲ್ಲಿ ಪ್ರಜ್ವಲ್ ರೇವಣ್ಣ ವಿಷಯವೇ ಅಲ್ಲ. ದೇವೇಗೌಡರನ್ನ ಸಿಕ್ಕಿಸಲು ಕಾಂಗ್ರೆಸ್ ಆಡುತ್ತಿರುವ ನಾಟಕವಾಗಿದೆ. ಇವರ ಇಂಟಲಿ ಜೆನ್ಸಿ ಫೈಲ್ಯೂರ್ ಇಟ್ಟುಕೊಂಡು ಹೇಗೆ ಪ್ರಧಾನಿ ಮೋದಿ ವಿರುದ್ಧ ಮಾತಾಡುತ್ತೀರಿ ಎಂದು ಆಕ್ರೋಶ ಹೊರಹಾಕಿದರು‌

ಮಾಜಿ ಡಿಸಿಎಂ ಈಶ್ವರಪ್ಪನವರ ಸ್ಪರ್ಧೆಯಿಂದ ಯಾವ ಬದಲಾವಣೆ ಆಗುವುದಿಲ್ಲ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮೂರು ಲಕ್ಷ ಅಂತರದಿಂದ ಗೆಲ್ಲಲಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/14048

Related Articles

Leave a Reply

Your email address will not be published. Required fields are marked *

Back to top button