ರಾಜಕೀಯ ಸುದ್ದಿಗಳು

ಕಾಂಗ್ರೆಸ್ ನಿಂದ ಚಿಪ್ಪು ಗ್ಯಾರೆಂಟಿ-ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ಗ್ಯಾರೆಂಟಿಗಾಗಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನ ನಿರ್ಲಕ್ಷಿಸುತ್ತಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ ಎಸ್ಟಿ ಫಂಡ್ ನಲ್ಲಿ 23, 496 ಕೋಟಿ ಹಣವನ್ನ ಗ್ಯಾರೆಂಟಿಗೆ ಬಳಸಿಕೊಳ್ಳುತ್ತಿದೆ. ಇದರ ಜೊತೆಗೆ ಕಾಙಗ್ರೆಸ್ ಸತ್ತನಂತರವೂ ಆಸ್ತಿ ತೆರಿಗೆಗೆ ಕೈಹಾಕಿದೆ. ಪಿತ್ರಾರ್ಜಿತ ಆಸ್ತಿ ವರ್ಗಾಯಿಸಲು ತೆರಿಗೆ ಹಾಕಲು ಹೊರಟಿದೆ ಎಂದು ದೂರಿದರು.

ಹೈನುಗಾರಿಕೆ ಮಾಡುವರಿಗೆ ಹೆಚ್ಚು ಹಣ ಕೊಡಬೇಕು ಎಂದು ಬಿಜೆಪಿ ತೀರ್ಮಾನಿಸಿ 7 ರೂ. ಸಹಾಯಧನ ನೀಡಿತ್ತು. ಕಾಂಗ್ರೆಸ್ ಈ ಹಣವನ್ನ‌ಕೊಡುವುದಾಗಿ ಭರವಸೆ ನೀಡಿದರೂ ಕೊಡ್ತಾ ಇಲ್ಲ. ರೈತರಿಗೆ 7 ತಿಂಗಳ ಹಾಲಿನ ಸಹಾಯಧನ ನೀಡಲಿಲ್ಲ ಎಂದು ದೂರಿದರು.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಹಣ ಕೊಡುವ ಭರವಸೆಯನ್ನ‌ ಕಾಂಗ್ರೆಸ್ ನೀಡಿದೆ.‌ ಜಾಲು ಉತ್ಪಾದಕರ ವಿರೋಧಿಗಳು ಕಾಂಗ್ರಸ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 21,900 ಕೋಟಿ ಹಣ ನೀಡಿದರೆ ಕಾಂಗ್ರೆಸ್ 12 ಸಾವಿರ ಕೋಟಿ ನೀಡಿದೆ. ಇದು ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಮಾತ್ರವಲ್ಲ ದಲಿತರ ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ ಎಂದು ದೂರಿದರು.

ಸಾಮಾನ್ಯ ವ್ಯಕ್ತಿಗಳ ಮೇಲೂ‌ ಬರೆ ಎಳೆದಿದೆ. ಡ್ರೈವಿಂಗ್ ಲೈಸೆನ್ಸ್ ನ್ನ 1½ ಸಾವಿರ ಇದ್ದ ಶುಲ್ಕ 3 ಸಾವಿರ ದರ ಕ್ಕೆ ಏರಿಸಿತು. ಆಟೋ, ಲಾರಿ, ಕಾರು ಚಾಲಕನ ಪರವಾನಗಿ ಪಡೆಯಲು ಶುಲ್ಕ ಹೆಚ್ಚಿಸಿದೆ.‌

ಸಾರ್ವಜನಿಕರಿಗೆ ದರ ಹೆಚ್ಚಿಸಿ ಕಾಂಗ್ರೆಸ್ ಚಿಪ್ಪು ನೀಡಿದೆ. ತಮಿಳುನಾಡಿಗೆ ನೀರು ಬಿಟ್ಟು ಬೆಂಗಳೂರಿಗೆ ಕುಡಿಯುವ ನೀರಿಲ್ಲದಂತೆ ಮಾಡಿರುವುದು ಕಾಂಗ್ರೆಸ್ ಪಕ್ಷದ ನಡೆಯಾಗಿದೆ. ಒಬಿಸಿಯಲ್ಲಿರುವ ಮೀಸಲಾತಿಯನ್ನ ಕಿತ್ತು ಮುಸ್ಲೀಂಗೆ ಕೊಡುವ ಮೂಲಕ ಕುತಂತ್ರ ರಾಜಕಾರಣವನ್ನ ಕಾಙಗ್ರೆಸ್ ಮಾಡುತ್ತಿದೆ ಎಂದು ದೂರಿದರು.

ಆರ್ಥಿಕ ವ್ಯವಸ್ಥೆ ಧೂಳಿಪಟವಾಗಿದೆ.‌ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಉತ್ತರ ಕರ್ನಾಟಕಕ್ಕೆ ಹಣ ನೀಡದೆ ಇರುವುದು ಕಾಂಗ್ರೆಸ್ ನ ನೀತಿಯಾಗಿದೆ. ಗ್ಯಾರೆಂಟಿ ನೀಡಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಮರಣ ಶಾಸನ ಬರೆದಿದೆ. ಬರಪರಿಹಾರಕ್ಕೆ, ವಿಮ್ಸ್ ಗೆ, ಪ.ಪಂ, ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಕಾಂಗ್ರೆಸ್ ಚಿಪ್ಪು ನೀಡಿದೆ ಎಂದು ಆರೋಪಿಸಿದರು.

ಇದನ್ನೂ ಓದಿ-https://suddilive.in/archives/14025

Related Articles

Leave a Reply

Your email address will not be published. Required fields are marked *

Back to top button