ಸ್ಥಳೀಯ ಸುದ್ದಿಗಳು

ವೇತನ ಆಯೋಗದ ವರದಿ ಶೀಘ್ರದಲ್ಲಿಯೇ ಜಾರಿಯಾಗಬೇಕು-ಆಯನೂರು ಒತ್ತಾಯ

ಸುದ್ದಿಲೈವ್/ಶಿವಮೊಗ್ಗ

1790 ಕೋಟಿ ತುಟ್ಟಿಭತ್ಯೆಯನ್ನ ಸರ್ಕಾರಿ ನೌಕರರಿಗೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಪ್ರಕಟಿಸಿರುವುದನ್ನ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸ್ವಾಗತಿಸಿದ್ದು ಶೀಘ್ರಲ್ಲಿಯೇ ವೇತನ ಆಯೋಗದ ವರದಿ ಜಾರಿಯಾಗುವಂತೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧ್ಯಂತರ ಪರಿಹಾರವಗಿ ಶೇ.17 ರಷ್ಟು ನೀಡಿದೆ. ಪೂರ್ಣ ಪ್ರಮಾಣದ ವರದಿ ಕೈಸೇರಬೇಕಿದೆ. ವರದಿಗಾಗಿ ಸರ್ಕಾರ ಕಾಯ್ತಾಇದೆ. ಮಾ15ರ ಒಳಗೆ ವೇತನ ಆಯೋಗದ ಅಧ್ಯಕ್ಷರು ವರದಿಯನ್ನ ಸರ್ಕಾರಕ್ಕೆ ನೀಡಬೇಕೆಂದು ಹೇಳಿದರು.

ವರದಿಯ ಆಧಾರದ ಮೇಲೆ ಆದಷ್ಟು ಬೇಗ ಸರ್ಕಾರ ವೇತನ ಆಯೋಗದ ವರದಿ ಮೇಲೆ ಜಾರಿ ಮಾಡಬೇಕು. ನೀತಿ ಸಂಹಿತೆ ಜಾರಿಯಾಗುವುದರೊಳಗೆ ವರದಿ ಜಾರಿಯಾಗದಿದ್ದರೆ ಅದಕ್ಕೆ ಅಡೆತಡೆಗಳು ಬೀಳುವ ಸಾಧ್ಯತೆ ಇದೆ. ಹಾಗಾಗಿ ಶೀಘ್ರದಲ್ಲಿಯೇ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದರು.

ಕಾಂಗ್ರೆಸ್ ಈಗಾಗಲೇ ಘೋಷಣಿಸಿರುವಂತೆ ಒಪಿಎಸ್ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳು ಅನುದಾನಿತ ಶಾಲೆ, ಸರ್ಕಾರಿ‌ ನೌಕರರ ಸಂಘದ ಜೊತೆ ಮಾತನಾಡಿದ್ದಾರೆ. ಎನ್ ಪಿಎಸ್ ರದ್ದಾಗಿ ಒಪಿಎಸ್ ಜಾರಿಗೆ ಬರಬೇಕಿದೆ. ಸರ್ಕಾರ ಜಾರಿ ಮಾಡಲಿದೆ. ಅನುದಾನಿತ ಶಾಲೆ ಶಿಕ್ಷಕರನ್ನೂ ಸಹ ಒಪಿಎಸ್ ನಲ್ಲಿ ತರಬೇಕಿದೆ ಎಂದರು.

ಸರ್ಕಾರ ನೌಕರರ ನೆರವಿಗೆ ಬರಬೇಕು. ಸರ್ಕಾರಿ ನೌಕರರ ಪರವಾಗಿ ಅವರಿಗೆ ಹಲವು ಸವಲತ್ತು ಅನುಷ್ಠಾನವಾಗುವ ವರೆಗೆ ನಾನು ಧ್ವನಿಯಾಗಿರುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/10700

Related Articles

Leave a Reply

Your email address will not be published. Required fields are marked *

Back to top button