65 ಪತ್ರಿಕಾ ವಿತರಕರಿಗೆ ಸಾಲ ವಿತರಣೆ

ಸುದ್ದಿಲೈವ್/ಶಿವಮೊಗ್ಗ

ಡೇ-ನಲ್ಮ್ ಯೋಜನೆ ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ, ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ, ಶಿವಮೊಗ್ಗ, ಇವರ ಸಹಯೋಗದಲ್ಲಿ ಪಿ.ಎಂ.ಸ್ವ-ನಿಧಿ ಕಿರು ಸಾಲ ಸೌಲಭ್ಯಕ್ಕೆ ಪತ್ರಿಕೆ ಮತ್ತು ಹಾಲು ವಿತರಕರ ಸಾಲ ಬಿಡುಗಡೆ ಮಾಡುವ ವಿಶೇಷ ಸಾಲ ಮೇಳಾ “ ಮೇ ಬಿ ಡಿಜಿಟಲ್ “ ಮತ್ತು ಸ್ವ ನಿಧಿ ಸೇ ಸಮೃದ್ಧಿ ಕಾರ್ಯಕ್ರಮದಲ್ಲಿ 65 ಪತ್ರಿಕೆ ವಿತರಕರಿಗೆ ಸಾಲ ವಿತರಣೆ, ಮತ್ತು QR ಕೋಡ್ ನೀಡಲಾಯ್ತು.
ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ.ಬಿ.ವೈ.ರಾಘವೇಂದ್ರ, ರವರು ಮಾನ್ಯ ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಶಿವಮೊಗ್ಗ. ಸನ್ಮಾನ್ಯ ಶ್ರೀ.ಎಸ್.ಎನ್.ಚನ್ನಬಸಪ್ಪ (ಚನ್ನಿ) ರವರು ಮಾನ್ಯ ಶಾಸಕರು,ವಿಧಾನಸಭಾ ಕ್ಷೇತ್ರ, ಶಿವಮೊಗ್ಗ. ಹಾಗೂ ಮೇಯರ್ ಶಿವಕುಮಾರ್, ಪೂಜ್ಯ ಮಹಾಪೌರರು, ಲಕ್ಷ್ಮೀ ಶಂಕರ್ ನಾಯ್ಕ್, ಉಪ ಮಹಾಪೌರರು, ಗೌರವಾನ್ವಿತ ಪಾಲಿಕೆಯ ಸದಸ್ಯರು ಹಾಗೂ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ,
ಸುರೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ವಿಜಯ್ ಸಾಯಿ.M. ಪ್ರಾದೇಶಿಕ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್,ಪ್ರಾದೇಶಿಕ ಕಛೇರಿ, ಶಿವಮೊಗ್ಗ ಶ್ರೀ ಅಮರನಾಥ್ ವ್ಯವಸ್ಥಾಪಕರು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್, ಶಿವಮೊಗ್ಗ.ಶ್ರೀ ಜಿತೇಂದ್ರ ಕುಮಾರ್, ರಾಜ್ಯ ಅಭಿಯಾನ ವ್ಯವಸ್ಥಾಪಕರು, ಡೇ-ನಲ್ಮ್ ಇಲಾಖೆ,ಬೆಂಗಳೂರು. ಮತ್ತು T.V.C ಸಮಿತಿ ಸದಸ್ಯರುಗಳು.DAY-NULM CAO ಅನುಪಮ.T.R, CO ರತ್ನಾಕರ್ ಹಾಗೂ ಆರೀಫ್, ಸಿಬ್ಬಂಧಿಗಳು ಹಾಜರಿದ್ದರು.
ಇದನ್ನೂ ಓದಿ-https://suddilive.in/archives/936
