ಶಿವಮೊಗ್ಗದಲ್ಲಿ ಜೋರಾಗ್ತಾ ಇದೆ ಫೈನಲ್ ಫೀವರ್!

ಸುದ್ದಿಲೈವ್/ಶಿವಮೊಗ್ಗ

ಇಂದು ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಭಾರತ ತಂಡಕ್ಕೆ ಶುಭಾ ಹಾರೈಸಿದ್ದಾರೆ.
ಭಾರತ ಹಾಗು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಫೈನಲ್ ಪಂದ್ಯ ನಡೆಯಲಿರುವ ಇಂದು ಮಧ್ಯಾಹ್ನ ನಡೆಯಲಿದೆ. ಫೂನಲ್ ಪಙದ್ಯಾವಳಿಯ ಫೀವರ್ ಈಗ ಎಲ್ಲೆಡೆ ಆರಂಭವಾಗಿದೆ.
ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಸಙಸದ ರಾಘವೇಂದ್ರ ಶುಭ ಕೋರಿದ್ದಾರೆ. ಮೂರನೇ ಬಾರಿ ಭಾರತ ತಂಡ ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮೋದಿ ಅವರ ತವರಿನಲ್ಲಿ ನಡೆಯುತ್ತಿರುವ ಪಂದ್ಯವಳಿಯ ವೀಕ್ಷೇಗೆ ಇಡೀ ವಿಶ್ವವೇ ಕಾತುರದಿಂದ ಪಂದ್ಯಕ್ಕಾಗಿ ಕಾಯುತ್ತಿದೆ ಎಂದು ತಿಳಿಸಿದರು.
ಭಾರತ ತಂಡ ಗೆಲ್ಲುವ ವಿಶ್ವಾಸ ದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಶಾಸಕ ಚೆನ್ನಬಸಪ್ಪನವರಿಂದ ಭಾರತ ದೇಶ ಗೆದ್ದು ಬರಲಿ ಎಂದು ನೆಹರೂ ಕ್ರೀಡಾಂಗಣದಲ್ಲಿ ಸಹಿ ಅಭಿಯಾನ ನಡೆಯಲಿದೆ.ಇದಕ್ಕೂ ಮೊದಲು ಕೋಟೆಆಂಜನೇಯ ದೇವಸ್ಥಾನದಲ್ಲಿ ದೇವರಿಗೆ ವಿಶೇಷಪೂಜೆ ನಡೆದಿದೆ ಇದರಲ್ಲಿ ಶಾಸಕರು ಭಾಗಿಯಾಗಿದ್ದಾರೆ. ಇದರಿಂದ ಫೈನಲ್ ಪಂದ್ಯಾವಳಿಗೆ ಕೌಂಟ್ ಡೌನ್ ಆರಂಭವಾಗುತ್ತಿರುವ ಬೆನ್ಬಲ್ಲೇ ಫೀವರ್ ಹೆಚ್ಚಾಗಿದೆ.
ಇದನ್ನೂ ಓದಿ-https://suddilive.in/archives/3260
