ಹೋರಿ ಹಬ್ಬದ ಹೋರಿಯ ವಿಚಾರದಲ್ಲಿ ಗಲಾಟೆ-ದೂರು ಪ್ರತಿದೂರು ದಾಖಲು

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಪಾಲ್ಗೊಂಡ ಹೋರಿ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿದ್ದು ದೂರು ಪ್ರತಿದೂರು ದಾಖಲಾಗಿದೆ.
ಎರಡೂ ಕಡೆಯವರ ದೂರಿನಲ್ಲಿ ಒಟ್ಟು 22 ಜನರ ಮೇಲೆ ದೂರು ದಾಖಲಾಗಿದೆ. ದೀಪಾವಳಿ ಹಬ್ಬದ ವೇಳೆ ಹೋರಿ ವಿಚಾರದಲ್ಲಿ ಗಲಾಟೆ ಮಾಡ್ತೀಯ ಎಂದು ಶಫಿವುಲ್ಲಾ ಮತ್ತು ಮುಶೀರ್ ಅಹ್ಮದ್ ನಡುವೆ ಗಲಾಟೆಯಾಗಿದೆ.
ಶಫಿವುಲ್ಲಾದವರ 11 ಕಡೆ ಮತ್ತು ಮುಶೀರ್‌ಅಹ್ಮದ್ ಅವರ 11 ಜನರ ವಿರುದ್ಧ ದೂರು ಪ್ರತಿದೂರು ದಾಖಲಾಗಿದೆ. ಸ್ಟೇಟಸ್ ನಲ್ಲಿ ಹಬ್ಬದ ಹೋರಿ ಫೋಟೊಗಳನ್ನ ಹಾಕಿಕೊಂಡ ಕಾರಣ ಅವುಗಳನ್ನ ಕಾನೆಂಟ್ಸ್ ಮಾಡುವ ವಿಚಾರವೂ ಈ ಗಲಾಟೆಗೆ ಕಾರಣವಾಗಿದೆ ಎನ್ನಲಾಗುತ್ತಿದ್ದರು ಎಫ್ಐಆರ್ ನಲ್ಲಿ ಈ ವಿಷಯ ಉಲ್ಲೇಖವಾಗಿಲ್ಲ.
ಮಲೆನಾಡಿನಲ್ಲಿ ಧರ್ನವನ್ನ ಮೀರಿ ಹೋರಿಹಬ್ಬಗಳು ನಡೆಯುತ್ತವೆ. ದೀಪಾವಳಿಯ ಅಮಾವಾಸೆಯ ದಿನದಂದು ಕಿಚ್ಚು ಹಾರಿಸುವ ದಿನದಂದೇ ಹಬ್ಬಗಳು ಜರುಗುತ್ತವೆ. ಹೋರಿ ಹಬ್ಬ ಮಲೆನಾಡರೈತರಲ್ಲಿ ಹೊಸ ಉತ್ಸಹ ತುಂಬಲಿದೆ.
ಇದನ್ನೂ ಓದಿ-https://suddilive.in/archives/3270
