ದನ ಕಾಯಲು ಹೋಗಿದ್ದ ವೃದ್ಧೆ ನಾಪತ್ತೆ-ತೀವ್ರಗೊಂಡ ಶೋಧಕಾರ್ಯ

ಸುದ್ದಿಲೈವ್/ಹೊಸನಗರ

ತೋಟಕ್ಕೆ ನುಗ್ಗಿದ್ದ ದನಗಳನ್ನ ಓಡಿಸಲು ಹೋಗಿದ್ದ ಅಜ್ಜಿಯೊಬ್ಬರು ನಾಪತ್ತೆಯಾಗಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಅವರ ಹುಡುಕಾಟಕ್ಕಾಗಿ ಶ್ವಾನದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಶೋಧ ಕಾರ್ಯಾಚರಣೆ ನಡೆಸ್ತಿದೆ.
ಭಾನುವಾರ ಮಧ್ಯಾಹ್ನ ಕರಿಮನೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಾದಗಲ್ ಗ್ರಾಮದಲ್ಲಿ ಮನೆಯ ಪಕ್ಕದಲ್ಲೆ ಇರುವ ತೋಟಕ್ಕೆ, ಇಲ್ಲಿನ ಚನ್ನಪ್ಪ ಗೌಡ ಅವರ ಪತ್ನಿ ಶಾರದಮ್ಮ (85)ರವರು ಹೋಗಿದ್ದಾರೆ. ದನಗಳು ಬಂದಿರಬಹುದೆಂದು ನೋಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದ ಶಾರದಮ್ಮ ಬಳಿಕ ಮನೆಗೆ ಬರಲಿಲ್ಲ. ಅವರ ಜೊತೆಗೆ ಹೋಗಿದ್ದ ಶ್ವಾನ ಸಹ ಕಾಣಿಸಿರಲಿಲ್ಲ.
ಆದರೆ ನಿನ್ನೆ ಸೋಮವಾರ ನಾಯಿಯು ಮನೆಗೆ ವಾಪಸ್ ಬಂದಿದೆ. ಆದರೆ ಶಾರದಮ್ಮರವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಆತಂಕಗೊಂಡ ಸ್ಥಳೀಯರು ತೋಟ, ಗದ್ದೆ, ಹಳ್ಳ, ಕೊಳ್ಳ, ಕಾಡಲ್ಲಿ ಹುಡುಕಾಡಿದ್ದಾರೆ. ಎಲ್ಲಿಯು ಶಾರದಮ್ಮ ಪತ್ತೆಯಾಗಿಲ್ಲ.ಹೀಗಾಗಿ ಇಂದು ನಗರ ಠಾಣೆ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ಬದಲ್ಲಿ ಶ್ವಾನದಳ ಶೋಧಕಾರ್ಯಾಚರಣೆ ನಡೆಯುತ್ತಿದೆ.
ಶ್ವಾನ ದಳದ ARSI ಚಂದ್ರಪ್ಪ, HC ಪ್ರಸನ್ನ, ಪೊಲೀಸ್ ಸಿಬ್ಬಂದಿಗಳಾದ HC ವೆಂಕಟೇಶ್, HC ಪ್ರವೀಣ್, HC ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್, ಸುಜಯಕುಮಾರ್, ಅರಣ್ಯ ಇಲಾಖೆಯ ARFO ಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ನಡೆಯುತ್ತಿರುವ ಜಂಟಿಕಾರ್ಯಾಚರಣೆಯಲ್ಲಿ 30 ಕ್ಕು ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
