ಸ್ಥಳೀಯ ಸುದ್ದಿಗಳು

ಮೋದಿ ಫೋಟೊ ಬಳಕೆ, ಓಂ ಶಕ್ತಿಯ ಬಗ್ಗೆ ಇ.ವಿಶ್ವಾಸ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಸ್ವತಂತ್ರ್ಯ ಅಭ್ಯರ್ಥಿಯಾಗಿ ಈಶ್ವರಪ್ಪನವರು ಸ್ಪರ್ಧಿಸಬೇಕೆಂಬ ಬಗ್ಗೆ ಬಂಜಾರ ಸಮುದಾಯ ಭವನದಲ್ಲಿ ಸಭೆ ನಡೆಸಿ ತಮ್ಮ‌ಸ್ಪರ್ಧೆಯನ್ನ ಸ್ಪಷ್ಟಪಡಿಸಿದ್ದಾರೆ. ಅದರಂತೆ ಏ.12 ರಂದು ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ಮಾಜಿ ಕಾರ್ಪೊರೇಟರ್ ವಿಶ್ವಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸ್ಪರ್ಧೆ ಬೇಡ ಅಂದರೂ ಸ್ಪರ್ಧಿಸುವುದಾಗಿ ಈಶ್ವರಪ್ಪ ತೀರ್ಮಾನಿಸಿದ ಮೇಲೆ ಮತ್ತೆ ದೆಹಲಿಗೆ ಹೋದಾಗ ಗೃಹಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಲು ಸಾಧ್ಯವಿಲ್ಲವೆಂದಾಗ ವಾಪಾಸ್ ಆಗಿ ತಮ್ಮ ಸ್ಪರ್ಧೆಯನ್ನ ಈಶ್ವರಪ್ಪನವರು ಗಟ್ಟಿ ಮಾಡಿದರು.

ಏ.12 ರಂದು 10 ಗಂಟೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಿಸಿ ಗೋಪಿವೃತ್ತದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ವೇದಿಕೆಗೆ ಅವಕಾಶವಿಲ್ಲ ವಾಹನದಲ್ಲಿ ಸ್ಪೀಕರ್ ಬಳಸಿ ಈಶ್ವರಪ್ಪನವರು ಭಾಷಣ ಮಾಡಲಿದ್ದಾರೆ. ನಂತರ ನಾಮಪತ್ರ ಸಲ್ಲಿಸಲಾಗುವುದು. ಪಕ್ಷ ಶುದ್ಧೀಕರಣದ ಮಾತನಾಡಿರುವ ಈಶ್ವರಪ್ಪ ಈ ಬಾರಿ ಚುನಾವಣೆಯಲ್ಲಿ 2½ ಲಕ್ಷ ಮತಗಳಿಂದ ಗೆಲ್ಲಿಸಲಾಗುವುದು ಎಂದರು.

ಎಲ್ಲಾ ಸಮಾಜದ ಮುಖಂಡರು,ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿಯ ಹೈಕಮಾಂಡ್ ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರು ಕಾಂಗ್ರೆಸ್ ನವರು ಬಳಸಿಕೊಳ್ಳಲಿ ಎಂದು ಹೇಳಿದ್ದಾರೆ.‌ ಹಾಗಾಗಿ ಕರಪತ್ರದಲ್ಲಿಯೂ ಮೋದಿಯವರ ಫೋಟೊ ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದರು.

ಅಮಿತ್ ಶಾ ಕರೆದಾಗ ಪ್ರಸ್ ಮೀಟ್ ನಲ್ಲಿ ಅವರ ಮನವೊಲಿಸುವುದಾಗ ದೆಹಲಿ ಗೆ ಹೋಗಿದ್ದೇವು. ಈಶ್ವರಪ್ಪನವರನ್ನ‌ ಮಾದರಿ ನಾಯಕ ಎಂದಿದ್ದ ಅಮಿತ್ ಶಾ ದೆಹಲಿಗೆ ಹೋದಾಗ ಭೇಟಿಯಾಗದೆ ಅವಮಾನಿಸಿದ್ದರು ಎಂದು ಹೇಳಿದರು.

ಈಶ್ವರಪ್ಪನವರು ಅಮಿತ್ ಶಾ ಅವಾನಿಸಿಲ್ಲ ಎನ್ನುತ್ತಾರೆ ನೀವು ಅವಮಾನಿಸಿದರು ಎನ್ನುತ್ತೀರಿ ಯಾವುದು ಸತ್ಯ ಎಂದು ಮಾಧ್ಯಮಗಳ ಪ್ರಶ್ಬೆಗೆ ಉತ್ತರಿಸಿದ ವಿಶ್ವಾಸ್ ಈಶ್ವರಪ್ಪನವರ ಅಭಿಪ್ರಾಯ ಬೇರೆ. ಇದು ನನ್ನ ಅನಿಸಿಕೆ ಎಂದರು.

ಮೋದಿ ಪೋಟೊವನ್ನ ಬಳಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಕೆವಿಟ್ ಹಾಕಲಾಗಿದೆ. ನ್ಯಾಯಾಲಯ ಏನು ಸೂಚಿಸಲಿದೆ ಆ ಮೇಲೆ ವಿಚಾರ ಮಾಡೋಣ. ನಾಮಪತ್ರ ಸಲ್ಲಿಕೆಯ ನಂತರ ಏನು ಆಗಲಿದೆ ನೋಡೋಣ. ಮೋದಿ ಫೋಟೊ ಬಳಸಬಾರದು ಎಂದರು‌ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು.

ಓಂ ಶಕ್ತಿ ಕಾರ್ಯಕರ್ತರ ಸುದ್ದಿಗೋಷ್ಠಿ ವಿಚಾರದಲ್ಲಿ ಕೆಲ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಅದರ ಮುಂದುವರೆದ ಭಾಗವೇ ಓಂ ಶಕ್ತಿ ಸಮಿತಿಯ ಸುದ್ದಿಗೋಷ್ಠಿಯಾಗಿದೆ. ಸಹಕಾರ ಸಂಘದ ಕಾನೂನು ಇದೆ. ಚುನಾವಣೆ ವೇಳೆ ಯಾಕೆ ಈ ರೀತಿ ಗೊಂದಲ ಮೂಡಿಸುತ್ತಿರುವುದು? ಇದು ಪಿತೂರಿಯ ಭಾಗ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟರ್ ಏಳುಮಲೈ, ಸುವರ್ಣ ಶಂಕರ್ ಲಕ್ಷ್ಮೀ ಶಂಕರ್, ಲತಾ ಗಣೇಶ್, ಆ.ಮಾ.ಆರತಿ ಪ್ರಕಾಶ್, ರಾಜು, ಗನ್ನಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/12472

Related Articles

Leave a Reply

Your email address will not be published. Required fields are marked *

Back to top button