ಸ್ಥಳೀಯ ಸುದ್ದಿಗಳು

ರೈಲಿನಲ್ಲಿ ಪ್ರಯಾಣಿಸುವಾಗ ಬೋಗಿಯಲ್ಲೇ ಶವವಾಗಿ ಪತ್ತೆ-ತನಿಖೆಗೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಪ್ರಾಯಾಣಿಕರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು ಈ ಪ್ರಕರಣದ ಬಗ್ಗೆ ಮತ್ತು ರೈಲಿನಲ್ಲಿ ಪ್ರಯಾಣಿಸುವ ಮಹಿಳಾ‌ ಜಾಗೃತಿಯ ಕುರಿತು ಇಂದು ರೈಲ್ವೆ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಜ.30 ರಂದು ರಾತ್ರಿ 11:55 ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ರೈಲಿನಲ್ಲಿ ಮಹಿಳಾ ಬೋಗಿಯಲ್ಲಿ ಶಿವಮೊಗ್ಗದವರೇ ಆದ ಅನ್ನಪೂರ್ಣ ಎಂಬುವವರು ಪ್ರಯಾಣಿಸಿದ್ದರು. ಇವರು ಬೆಂಗಳೂರಿನ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನ್ನಪೂರ್ಣ ಜ.31 ರಂದು ತುಮಕೂರು ಬೆಂಗಳೂರು ನಡುವಿನ ಹಿರೇಹಳ್ಳಿ ಎಂಬ ರೈಲು ಮಾರ್ಗದ ಬಳಿ ಶವವಾಗಿ ಪತ್ತೆಯಾಗಿದ್ದರು.

ಈ ಸಂಬಂಧ ಈಕೆಯ ಧಾರುಣ ಹತ್ಯೆಗೆ ಸೂಕ್ತ ತನಿಖೆ ಹಾಗೂ ಪರಿಹಾರ ಮತ್ತು ಮಹಿಳೆ ಮತ್ತು ಸುರಕ್ಷಿತ ಪ್ರಯಾಣ ಈ ಕುರಿತು ಇಂದು ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಅನ್ನಪೂರ್ಣರಿಗೆ ಶ್ರದ್ದಾಂಜಲಿ ಮತ್ತು ರೈಲು ಪ್ರಯಾಣದಲ್ಲಿ ಮಹಿಳಾ ಸುರಕ್ಷತೆ ಕುರಿತು ನಿವೇದನಾ ಪತ್ರ ಮತ್ತು ಜಾಗೃತಿ – ಕಾರ್ಯಕ್ರಮವನ್ನು ವಿವಿಧ ಮಹಿಳಾ ಸಂಘಗಳ ಸಹಯೋಗದಲ್ಲಿ ಜರುಗಿತು.

ಮಹಿಳಾ ಸಂವೇದನೆಯ, ಮಹಿಳಾ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯ ಸಾವಿನ ಕುರಿತು ತನಿಖೆ ಪ್ರಕ್ರಿಯೆ ಚುರುಕುಗೊಳಿಸಬೇಕು. ಕೊಲೆಯಾದಾಗ ಆಕೆಯ ಮೈಮೇಲಿನ ಚಿನ್ನಾಭರಣಗಳು ಕಾಣೆಯಾಗಿದ್ದು ಆರೋಪಿತನ್ನ ಕೂಡೇ ಬಂಧಿಸುವಂತೆ ರೈಲ್ವೆ ಪೊಲೀಸರಿಗೆ ಆಗ್ರಹಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಂಜಿತಾ ದತ್ತಾತ್ರೇಯ, ಜ್ಯೋತಿ, ಶಾಶ್ವತಿ‌ಮಹಿಳಾ ಸಂಘದ ಶಾಂತಾ‌ ಸುರೇಂದ,  ಲೋಲಾಕ್ಷಿ ಎಂ.ಪಿ, ಸ್ವಪ್ನ ಮೊದಲಾದ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8772

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373