ಈದ್ ಮೆರವಣಿಗೆಗೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಈದ್ ಹಬ್ಬದ ಪ್ರಯುಕ್ತ ಇಂದು ನಡೆಯಬೇಕಿದ್ದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸೌಹಾರ್ಧವೇ ಹಬ್ಬ ಸಮಿತಿಯು ಗಾಂಧಿ ಬಜಾರ್ ನಲ್ಲಿರುವ ಸುನ್ನಿ ಜಮಾಯತ್ ಉಲ್ಮ ಮಸೀದಿಗೆ ಬಂದು ಸಹಿ ಹಂಚಿ ಶುಭಾಶಯವನ್ನ ತಿಳಿಸಲಾಯಿತು. ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮುಸ್ಲೀಂ ಮುಖಂಡರಾದ ಟಿ ಅಬ್ದುಲ್ ರಜಾಕ್, ಎಂ..ಡಿ.ಟಿ.ಶಫಿ, ಸುನ್ನಿ ಜಮಾಯತ್ ಉಲ್ಮ ಕಮಿಟಿಯ ಅಧ್ಯಕ್ಷ ಅಬ್ದುಲ್ ಸತ್ತರ್ ಬೇಗ್, ಕಾರ್ಯದರ್ಶಿಗಳಾದ ಎಜಾಸ್ ಪಾಶ, ಕಮಿಟಿ ಮುಖಂಡ ಆಫ್ತಾಬ್ ಪರ್ವೇಜ್, ಅವರಿಗೆ ಸಮಿತಿಯ ಮುಖಂಡರಾದ ಫಾದರ್ ರೋಷನ್ ಪಿಂಟೋ, ವಕೀಲ ಶ್ರೀಪಾಲ, ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಡಿಎಸ್ ಎಸ್ ಗುರುಮೂರ್ತಿ, ಶ್ರೀಕಾಂತ್ ಮೊದಲಾದವರು ಸಹಿ ಹಂಚಿ ಹಬ್ಬದ ಶುಭಾಯ ತಿಳಿಸಿದರು. ಈ ವೇಳೆ ಕಲೀಂ ಪಾಶ, ವಕೀಲರಾದ ನಯಾಜ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಈದ್ ಮೆರವಣಿಗೆಗೆ ಬಂದು ಸಿಹಿ ಹಂಚಿ ಶುಭಕೋರಿದರು. ಶುಭಕೋರಿದ ನಂತರ ಈದ್ ಮೆರವಣಿಗೆಗೆ ಚಾಲನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಪ್ತಾಬ್ ಪರ್ವೇಜ್ ಪ್ತವಾದಿ ಮೊಹ್ಮದ್ ಪೈಗಂಬರ್ ಅವರ ಹುಟ್ಟು ಹಬ್ಬವನ್ನ ಈದ್ ಆಗಿ ಆಚರಿಸಲಾಗುತ್ತಿದೆ.
ಹಬ್ಬವನ್ನ ನಾವೆಲ್ಲಾ ಸೆ.28 ರಂದು ಆಚರಿಸಲಾಗುದೆ. ಆದರೆ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ಅಂಗವಾಗಿ ನಮ್ಮಈದ್ ಮೆರವಣಿಗೆ ಯನ್ನ ಮುಂದು ಹಾಕಲಾಗಿತ್ತು. ಇಂದು ಹಿಂದು, ಮುಸ್ಲೀಂ ಮತ್ತು ಕ್ರೈಸ್ತ ಮುಖಂಡರ ಜೊತೆ ಸೇರಿ ಸೌಹಾರ್ಧವಾಗಿ ಮೆರವಣಿಗೆ ಮಾಡಲಾಗುತ್ತಿದೆ ಎಂದರು.
ಲಷ್ಕರ್ ಮೊಹಲ್ಲಾ ಪೆನ್ಷನ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲಾ ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತದ, ಗೋಪಿ ವೃತ್ತ, ಅಮೀರ್ ಅಹ್ಮದ ವೃತ್ತ, ಬಸ್ ಸ್ಟ್ಯಾಂಡ್ ವೃತ್ತ, ಮಾರನಮಿ ಬೈಲು, ಆಜಾದ್ ನಗರ, ಕೆ ಆರ್ ಪುರಂ ರಸ್ತೆ ಮೂಲಕ ಎಎ ವೃತ್ತದಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ-https://suddilive.in/2023/10/01/ಈದ್-ಮೆರವಣಿಗೆಗೆ-ನಗರದಾದ್ಯಂ/
