ಮರಳು ತುಂಬಿದ ಟ್ರ್ಯಾಕ್ಟರ್ ಮೇಲೆ ಎಂ ಸ್ಯಾಂಡ್ ಲೇಪನ-ವಶಕ್ಕೆ ಪಡೆದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್ ನಲ್ಲಿ ಮರಳು ಫಿಲ್ಟ್ರು ಮಾಡಿ ಸಂಗ್ರಹಿಸುತ್ತಿದ್ದ ಪ್ರಕರಣವೊಂದು ಬೊಮ್ಮನ್ ಕಟ್ಟೆಯಲ್ಲಿ ಪತ್ತೆಯಾದ ಬೆನ್ನಲ್ಲೆ ಮತ್ತೊಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೊನ್ಮನ್ ಕಟ್ಟೆಯ ಜಿ ಬ್ಲಾಕ್ ನಲ್ಲಿ ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಿ ಕಟ್ಟಡದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಳಿನ ರಾಯಲ್ಟಿ ವಿಚಾರದಲ್ಲಿ ಟ್ರ್ಯಾಕ್ಟರ್ ನಲ್ಲಿ ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಲಾಗಿತ್ತು. ಲಾರಿಯ ರಾಯಲ್ಟಿ ಪಡೆದಿದ್ದ ಸ್ಥಳೀಯರೊಬ್ಬರು ಟ್ರ್ಯಾಕ್ಟರ್ ನಲ್ಲಿ ಮರಳು ತುಂಬಿ ಅದರ ಮೈಮೇಲೆ ಎಂಸ್ಯಾಂಡ್ ಮುಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಬೊಮ್ಮನ್ ಕಟ್ಟೆಯ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಗಣಿಮತ್ತು ಭೂ ವಿಜ್ಞಾನಕ್ಕೆ ಪತ್ರ ಬರೆದಿದ್ದಾರೆ. ಈಗ ಮರಳು ಮತ್ತು ಮರಳಿನ ರಾಯಲ್ಟಿಯನ್ನ ಕೊಡುವುದನ್ನ ನಿಲ್ಲಿಸಿದ್ದರಿಂದ ಈ ಪ್ರಕರಣ ಪ್ರಾಮುಖ್ಯತೆ ಪಡೆದಿದೆ.
ಮರಳು ತುಂಬಿದ ಟ್ರ್ಯಾಕ್ಟರ್ ನ್ನ ವಿನೋಬ ನಗರ ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಯ ಮುಂದೆ ನಿಲ್ಲಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನದಿಂದ ಏನು ವರದಿ ಬರಲಿದೆ ಆದರ ಮೇಲೆ ಕ್ರಮ ಜರುಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/1949
