ರಾಜಕೀಯ ಸುದ್ದಿಗಳು

ಶಿವಮೊಗ್ಗ ಕ್ಷೇತ್ರದಲ್ಲಿ ಶೇ.78.24 ರಷ್ಟು ಮತದಾನ

ಸುದ್ದಿಲೈವ್/ಶಿವಮೊಗ್ಗ

ಮಧ್ಯಾಹ್ನ 3:00 ಗಂಟೆ ವರೆಗೆ‌ 58.04% ಮತದಾನವಾಗಿದ್ದರೆ. ಸಂಜೆ 5 ಗಂಟೆಗೆ ಮತದಾನ 72.36%  ಮತದಾನವಾಗಿತ್ತು.‌ 6 ಗಂಟೆಗೆ  ಕೊನೆಯ ಒಂದು ಮತದಾನ ಮುಕ್ತಾಯಗೊಂಡಾಗ ಶೇ. 78.24   ರಷ್ಟು ಮತದಾನವಾಗಿದೆ.‌

ಒಟ್ಟು ಮತಗಳು 1752885 ಮತಗಳಿದ್ದು, ಸುಮಾರು 13,71457  ಮತ ಚಲಾವಣೆಯಾಗಿದೆ. ಬೆಳಗ್ಗೆ 7 ರಿಂದ 9 ಗಂಟೆಯ ವರೆಗೆ ಚುರುಕುಗೊಂಡಿದ್ದ ಮತದಾನ 11:00 ಗಂಟೆಗೆ ಬೈಂದೂರು ಹೊರತು ಪಡಿಸಿ ಉಳಿದ ಎಲ್ಲಾ 7 ಕ್ಷೇತ್ರಗಳಲ್ಲಿ ಶೇ. 30 ಕ್ಕಿಂತ ಕಡಿಮೆ ಮತದಾನವಾಗಿತ್ತು.

ಮಧ್ಯಾಹ್ನ 1 ಗಂಟೆಯ ವೇಳೆಗೆ ಉತ್ತಮ‌ ಮತದಾನವಾಗಿದೆ. ಶೇ.45.19 ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಗೆ ಒಟ್ಟು 58.04%ಮತದಾನವಾಗಿದೆ. ಸಂಜೆ 5 ಗಂಟೆಗೆ 72.07%  ಮತದಾನವಾಗಿದೆ. ಮತದಾನ ಅಂತ್ಯವಾಗುವುದರೊಳಗೆ ಶೇ. 78.24ರಷ್ಟು ಮತದಾನವಾಗಿದೆ.

ಒಟ್ಟು ಮತದಾನ 78.24, ಶಿವಮೊಗ್ಗ ಗ್ರಾಮಾಂತರ-83.61%, ಶಿಕಾರಿಪುರ-82.66%
ಸಾಗರ-80.2%, ಭದ್ರಾವತಿ-71.72%, ಸೊರಬ-83.27%, ತೀರ್ಥಹಳ್ಳಿ-82.23%
ಬೈಂದೂರು-76.4%, ಶಿವಮೊಗ್ಗ-70.33% ಮತದಾನವಾಗಿದೆ.

2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 72.60% ಮತದಾನವಾಗಿತ್ತು. ಶಿವಮೊಗ್ಗ ಗ್ರಾಮಾಂತರದಲ್ಲಿ 75.48% ಭದ್ರಾವತಿ 65.19% ಶಿವಮೊಗ್ಗ ನಗರದಲ್ಲಿ 64.84% ತೀರ್ಥಹಳ್ಳಿಯಲ್ಲಿ 76.41% ಶಿಕಾರಿಪುರದಲ್ಲಿ 77.62%, ಸೊರಬದಲ್ಲಿ 78.14%, ಸಾಗರದಲ್ಲಿ 77.14%, ಬೈಂದೂರಿನಲ್ಲಿ 72% ಮತದಾನವಾಗಿತ್ತು. 72.60 ರಷ್ಟು ಒಟ್ಟು ಮತದಾನವಾಗಿತ್ತು.

2019 ರಲ್ಲಿ,  ಶಿವಮೊಗ್ಗ ಗ್ರಾಮಾಂತರದಲ್ಲಿ 80.38%, ಭದ್ರಾವತಿ 69.66%, ಶಿವಮೊಗ್ಗ ನಗರದಲ್ಲಿ 67.59%, ತೀರ್ಥಹಳ್ಳಿಯಲ್ಲಿ 80.87% ಶಿಕಾರಿಪುರದಲ್ಲಿ 80.64%, ಸೊರಬದಲ್ಲಿ 82.51%, ಸಾಗರದಲ್ಲಿ 78.33%, ಬೈಂದೂರಿನಲ್ಲಿ 75.08% ಮತದಾನವಾಗಿತ್ತು. 76.40% ಒಟ್ಟು ಮತದಾನವಾಗಿತ್ತು.  ಇದರಿಂದ ಕಳೆದ ಬಾರಿ ಎರಡು ಪರ್ಸೆಂಟ್ ಹೆಚ್ಚಾಗಿದೆ.

ಇದನ್ನೂ ಓದಿ-https://suddilive.in/archives/14422

Related Articles

Leave a Reply

Your email address will not be published. Required fields are marked *

Back to top button