ಕ್ರೈಂ ನ್ಯೂಸ್

ಬೆಳ್ಳಂಬೆಳಿಗ್ಗೆ ತೀರ್ಥಹಳ್ಳಿಯಲ್ಲಿ ಇಡಿ ದಾಳಿ

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿಯ ‌ನ್ಯಾಷನಲ್ ಸಂಸ್ಥೆ ಮೇಲೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ದಾಳಿ ನಡೆದಿದೆ. ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಸುಲೈಮಾನ್ ಎಂಬುವರಿಗೆ ಸೇರಿದ ನ್ಯಾಷನಲ್ ಸಂಸ್ಥೆಯ ಮೇಲೆ ಇಡಿ ದಾಳಿಯಾಗಿದೆ. ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್, ಹಾಗು ಸುಲೈಮಾನ್ ವಾಸದ ಮನೆ ಮೇಲೆ ದಾಳಿ ನಡೆದಿದೆ.

ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸಾಗುತ್ತಿದೆ. ಬೆಳಂ ಬೆಳಗ್ಗೆ 10 ವಾಹನಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಇನ್ನೂ ಸಿಬ್ಬಂದಿಗಳು ಅಂಗಡಿ ಹಾಗು ಕಚೇರಿ‌ಯ ಬಾಗಿಲು ತೆರೆದಿಲ್ಲ. ಆಗಲೆ ಅಧಿಕಾರಿಗಳು ದಾಳಿ ನಡೆಸಿದರು.

ಬಾಗಿಲು ತೆರೆಸಲು ಇಡಿ ಅಧಿಕಾರಿಗಳು ಕಚೇರಿ ಮುಂದೆ ಸಿಬ್ಬಂದಿಗಳಿಗೆ ಕಾಯುತ್ತಿರುವ ದೃಶ್ಯ ಲಭ್ಯವಾಗಿದೆ. ಕನ್ ಸ್ಟ್ರಕ್ಷನ್ ವ್ಯವಹಾರ ನಡೆಸುವ ಸುಲೈಮಾನ್ ಪುತ್ರ ಷರೀಫ್ ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿ ಮಾಡಿದ್ದರು.

ಇದನ್ನೂ ಓದಿ-https://suddilive.in/archives/5999

Related Articles

Leave a Reply

Your email address will not be published. Required fields are marked *

Back to top button