ಸೈಲೆನ್ಸರ್ ಮತ್ತು ಹಾಫ್ ಹೆಲ್ಮೆಟ್ ನಾಶ
ಸುದ್ದಿಲೈವ್/ಶಿವಮೊಗ್ಗ
ನಗರದ ಗೋಪಿ ವೃತ್ತದಲ್ಲಿ ಹಾಫ್ ಹೆಲ್ಮೆಟ್ ಮತ್ತು ಕರ್ಕಷ ಸೈಲನ್ಸರ್ ಗಳನ್ನ ನಾಶಪಡಿಸಲಾಯಿತು. ಕಳೆದ ಎರಡು ತಿಂಗಳಿಂದ ಈ ಹಾಫ್ ಹೆಲ್ಮೆಟ್ ಮತ್ತು ಕರ್ಕಷ ಸೈಲನ್ಸರ್ ಗಳ ಕಾರ್ಯಾಚರಣೆ ನಡೆಸಲಾಗಿದ್ದು ಇಂದು ಅವುಗಳನ್ನ ಸಾರ್ವಜನಿಕರ ಮುಂದೆ ನಾಶ (destroy) ಪಡಿಸಲಾಯಿತು.
ಸುಮಾರು 3000 ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಮತ್ತು 70 ಕರ್ಕಷ ಸೈಲನ್ಸರ್ ಗಳನ್ನ ಸಂಗ್ರಹಿಸಲಾಗಿದ್ದು ಇಂದು ಬುಲ್ಡೇಜರ್ ಮೂಲಕ ನಾಶಪಡಿಸಲಾಯಿತು.
ಈ ಕುರಿತು ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಕಳೆದ ಎರಡು ತಿಂಗಳಿಂದ ಹಾಫ್ ಹೆಲ್ಮಟ್ ಮತ್ತು ಕರ್ಕಷ ಸೈಲನ್ಸರ್ ಕಾರ್ಯಾಚರಣೆ ಮಾಡಲಾಗಿತ್ತು. ಹಾಫ್ ಹೆಲ್ಮಟ್ ಹಾಕುವುದರಿಂದ ನಾಮಕಾವಸ್ಥೆಗೆ ಧರಿಸುವಂತಾಗುತ್ತದೆ.
ಈ ಕಾರ್ಯಾಚರಣೆಯನ್ನಸಾರ್ವಜನಿರರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಾಶಪಡಿಸಲಾಗಿದೆ. ಪಿಐ ಸಂತೋಷ ಕುಮಾರ್ ನೇತೃತ್ವದಲ್ಲಿ ಕರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆಯನ್ನ ಮುಂದಿನದಿನಗಳಲ್ಲಿ ಮುಂದುವರೆಸುವುದಾಗಿ ತಿಳಿಸಿದರು.
ಇದನ್ನೂ ಓದಿ-https://suddilive.in/archives/8185