ಶೈಕ್ಷಣಿಕ ಸುದ್ದಿಗಳು

ಮಧ್ಯಾಹ್ನ 3 ಕ್ಕೆ 58.04% ಮತದಾನ

ಸುದ್ದಿಲೈವ್/ಶಿವಮೊಗ್ಗ

ಮಧ್ಯಾಹ್ನ 3:00 ಗಂಟೆ ವರೆಗೆ‌ ಚಲಾವಣೆಯಾದ ಮತದಾನದ ಶೇಕಡವಾರು ವಿವರ ಹೀಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 58.04% ಮತದಾನವಾಗಿದೆ. ಒಟ್ಟು ಮತಗಳು 1752885 ಮತಗಳಿದ್ದು, 1014226 ಮತ ಚಲಾವಣೆಯಾಗಿದೆ.

ಬೆಳಗ್ಗೆ 7 ರಿಂದ 9 ಗಂಟೆಯ ವರೆಗೆ ಚುರುಕುಗೊಂಡಿದ್ದ ಮತದಾನ 11:00 ಗಂಟೆಗೆ ಬೈಂದೂರು ಹೊರತು ಪಡಿಸಿ ಉಳಿದ ಎಲ್ಲಾ 7 ಕ್ಷೇತ್ರಗಳಲ್ಲಿ ಶೇ. 30 ಕ್ಕಿಂತ ಕಡಿಮೆ ಮತದಾನವಾಗಿತ್ತು.

ಮಧ್ಯಾಹ್ನ 1 ಗಂಟೆಯ ವೇಳೆಗೆ ಉತ್ತಮ‌ ಮತದಾನವಾಗಿದೆ. ಶೇ.45.19 ರಷ್ಟು ಮತದಾನವಾಗಿದೆ.11 ಗಂಟೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 27.21% ಮತ ಚಲಾವಣೆಯಾಗಿತ್ತು, 1752885 ಒಟ್ಟು ಮತಗಳಲ್ಲಿ 473585 ಮತಗಳು ಚಲಾವಣೆಗೊಂಡಿತ್ತು. ಈಗ ಮಧ್ಯಾಹ್ನ 1:00 ಗಂಟೆ ವರೆಗೆ‌ 788545 ಮತಗಳು ಚಲಾವಣೆಯಾಗಿತ್ತು. ಮಧ್ಯಾಹ್ನ 3‌ಕ್ಕೆ ಒಟ್ಟು 58.04%ಮತದಾನವಾಗಿದೆ.

ಬೈಂದೂರಿನಲ್ಲಿ 58.41% , ತೀರ್ಥಹಳ್ಳಿ 60.01% ಶಿವಮೊಗ್ಗ 53.16% ಶಿಕಾರಿಪುರದಲ್ಲಿ 60.75%, ಸಾಗರ 59.26%, ಶಿವಮೊಗ್ಗ ಗ್ರಾಮಾಂತರ 61.63%, ಸೊರಬ 59.58% ಭದ್ರಾವತಿ 53.28% ಮತದಾನ ಆಗಿದೆ.

ಇದನ್ನೂ ಓದಿ-https://suddilive.in/archives/14403

Related Articles

Leave a Reply

Your email address will not be published. Required fields are marked *

Back to top button