ಕ್ರೈಂ ನ್ಯೂಸ್

ಶಿಕ್ಷಕಿಯ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಜುಗಳನ್ನ ಮಹಿಳೆ ಒಡೆದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಅಜಾದ್ ನಗರದಲ್ಲಿ ಪತಿಗಾಗಿ ಇಬ್ಬರು ಶಿಕ್ಷಕಿಯರು ಬಡಿದಾಡಿಕೊಂಡಿದ್ದಾರೆ. ಮೊದಲನೆ ಪತ್ನಿ ಪತಿಯಿಂದ ವಿಚ್ಚೇಧನ ಪಡೆದರೂ, ಹಾಲಿ ಪತಿ ಮತ್ತು ಪತ್ನಿಯ ಇಬ್ಬರ ಫೋಟೊಗಳನ್ನ ಅಶ್ಲೀಲವಾಗಿ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಮತ್ತು ಮನೆಯ ಮುಂದೆ ನಿಲ್ಲಿಸಿರುವ ಕಾರನ್ನ ಜಖಂಗೊಳಿಸಿರುವ ಬಗ್ಗೆ ಮತ್ತು ಕುಟುಂಬಕ್ಕೆ ಜೀವಬೆದರಿಕೆ ಹಾಕಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ಕಾರಿ ಶಾಲೆಯ‌ 40 ವರ್ಷದ ಶಿಕ್ಷಕಿ ಸೈಯದಾ ಸುರಯಾ ಕೌಸರ್  ಈ ಹಿಂದೆ ಮಹಮ್ಮದ್ ಆಸಿಫ್ ಅವರ ಜೊತೆ ಮದುವೆಯಾಗಿದ್ದರು, ಅವರಿಗೆ ಎರಡು ಗಂಡು ಮಕ್ಕಳಿದ್ದಾರೆ. ಆಸೀಫ್ ನೊಟ್ಟಿಗೆ ವಿಚ್ಚೇದನ ಪಡೆದ ನಂತರ ಶಿಕ್ಷಕಿ ಕೌಸರ್ ಮದುವೆಯಾಗಿದ್ದೇ ಸೈಯದ್ ಪರ್ವಿಜ್ ಎಂಬುವರನ್ನ

ಸೈಯದ್ ಪರ್ವಿಜ್ ಸಹ ಈ ಹಿಂದೆ ಹಸಿನಾ ಪರ್ವೀನ್ ಎಂಬುವರನ್ನ ಮದುವೆಯಾಗಿದ್ದು ನಂತರ ವಿಚ್ಛೇಧನ ಪಡೆದಿದ್ದಾರೆ. ಇವರಿಗೂ ಎರಡು ಮಕ್ಕಳು ಇದ್ದಾರೆ. ಸಯ್ಯದ್ ಪರ್ವಿಜ್ ಅವರು ಹಸಿನ ಪರ್ವೀನ್ ಅವರಿಂದ  ದಿ:09-02-2024 ರಂದು ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ.

ಹಾಗಾಗಿ ಹಸಿನ ಪರ್ವೀನ್ ಮತ್ತು ಸಯ್ಯದ್ ಪರ್ವೀಜ್ ಈಗ ಗಂಡ ಹೆಂಡತಿಯಾಗಿ ಇಳಿದಿಲ್ಲ ಎಂಬುದು ಕೌಸರ್ ಅವರ ವಾದವಾಗಿದೆ. ಆದರೆ ಹಸೀನಾ ಪರ್ವೀನ್ ಅವರು ಕೌಸರ್ ಮತ್ತು ಪತಿ ಸೈಯದ್ ಪರ್ವಿಜ್ ಅವರ ಜೊತೆಗಿನ ಖಾಸಗಿ ಫೋಟೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಮತ್ತು ವಾಟ್ಸಪ್ ನ ಗ್ರೂಪಿನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಕೌಸರ್, ದಿ:21-02-24 ರಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿರುವುದಾಗಿ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ವಿಚ್ಚೇದನ ನಂತರ ಹಸೀನಾ ಪರ್ವೀನ್, ನನ್ನ ಹಾಗೂ  ಪತಿಯ ಮೇಲೆ ದ್ವೇಷವನ್ನು ಕಾರುತ್ತಾ ಬರುತ್ತಿದ್ದಾರೆ. ಇಂದು ಅಥವಾ ನಾಳೆ ಎಲ್ಲ ಸರಿಯಾಗಬಹುದೆಂದು ಭಾವಿಸಿ ಶಿಕ್ಷಕಿ ಕೌಸರ್ ಯಾವುದೇ ರೀತಿಯ ದೂರು ನೀಡಿರುವುದಿಲ್ಲ, ಆದರೆ ಪದೇ ಪದೇ ಹಸೀನಾ ಪರ್ವೀನ್ ತನ್ನ ಎರಡು ಮಕ್ಕಳನ್ನ ಮನೆಯ ಬಳಿ ಕರೆದುಕೊಂಡು ಬರುವುದು, ಶಾಲೆಯ ಬಳಿ ಬರುವುದು, ಗಂಡನ ಮನೆಯಾದ ಆಜಾದ್ ನಗರ ಮನೆಗೆ ಬರುವುದು, ಗಲಾಟೆ ಮಾಡುವುದು, ಮಾಡಿಸುವುದು ಮಾಡುತ್ತಿರುವ ಬಗ್ಗೆ ಶಿಕ್ಷಕಿ ಎಚ್ಚೆತ್ತುಕೊಂಡಿದ್ದರು.

ಏ.5 ರಂದು ರಾತ್ರಿ ಸುಮಾರು 8.40 ಗಂಟೆಯಲ್ಲಿ ನಾವು ನಮ್ಮ ಶಿವಮೊಗ್ಗದ ಇಲಿಯಾಸ್ ನಗರದ ಮನೆಯಲ್ಲಿ ಕಿರಿಯ ಮಗ ಇರುವಾಗ ಏಕಾಏಕಿ ದ್ವೇಷ, ದುರುದ್ದೇಶದಿಂದ ಹಾಗೂ ದುಷ್ಕೃತ್ಯ ಎಸಗುವ ಉದ್ದೇಶದಿಂದ ಹಸೀನಾ ಪರ್ವೀನ್ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಬಂದು ಏಕಾಏಕಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ರಾತ್ರಿ 8 ಗಂಟೆಗೆ, ಸೈಯದಾ ಅಮೀನಾ ನೂರೇನ್ ಮತ್ತು ಹಸಿನ ಪರ್ವೀನ್ ನನ್ನ ಕಿರಿಯ ಮಗನಿಗೆ ಮನೆಯ ಹೊರಗಡೆಯ ಬಾಗಿಲಿನಲ್ಲಿದ್ದಾಗ ಕರೆದು “ತುಕ್ಕಡೆ ಕರ್ ಡಾಲ್ತು, ಗಲ್ಲ, ಕಾಟದಾಲ್ತು,” ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿ ಕೌಸರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ,

ಮಗ ಹೆದರಿಕೊಂಡು ಮನೆಯ ಬಳಿ ಬಂದು ನನಗೆ ತಿಳಿಸಿದ್ದು, ಆಗ ನನ್ನ ಗಂಡ ನಮಾಜ್ ಮಾಡುತ್ತಿದ್ದರಿಂದ, ಅವರಿಗೆ ಏನು ಕೂಡ ಹೇಳದೆ, ನಾನೇ ಮನೆಯ ಹೊರಗೆ ಹೋಗಿದ್ದು, ಆಗ ಏಕಾಏಕಿ ಸೈಯದಾ ಅಮೀನಾ ನೂರೇನ್ ಮತ್ತು ಹಸಿನಾ ಪರ್ವೀನ್ ರವರು ಮನೆಯ ಹೊರಗಡೆ ನಿಂತು ಕೀಳಾಗಿ ಬೈದು ಚರಿತ್ರೆಹೀನಳಾಗಿ ಬಿಂಬಿಸಲು ಯತ್ನಿಸಿದ್ದಾರೆ. ಎಂದು ಶಿಕ್ಷಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಮನೆಯ ಮುಂದೆ ಶಾಂತಿ ಕದಡಲು ಪ್ರಯತ್ನಿಸಿ ಮನೆಯ ಮುಂದೆ ನಿಲ್ಲಿಸಿದ್ದ  ಪತಿಯ ಕಾರು ಕೆಎ-14-ಎ-9504 ಟಾಟಾ ಇಂಡಿಗೋ ಗೆ ದೊಡ್ಡ ಕಲ್ಲಿಂದ ಹೊಡೆದು ಹಿಂದಿನ ಗಾಜನ್ನು ಒಡೆದು ಸುಮಾರು 20,000 /- ರೂ ನಷ್ಟ ಉಂಟು ಮಾಡಿದ್ದಾರೆ.

ನನಗೆ ಹಾಗೂ ನನ್ನ ಮಗನ ಮೇಲೆ ಹಲೆ. ಮಾಡಿ, ಅವಾಚ್ಯ ಶಬ್ದಗಳನ್ನು ಉಪಯೋಗಿಸಿ. ಕಾರಿನ‌ ಗ್ಲಾಜುಗಳನ್ನ ಒಡೆದು, ಜೀವ ಬೆದರಿಕೆ ಹಾಕಿರುವ ಹಸೀನಾ ಪರ್ವಿನ್, ಸೈಯದಾ ಅಮೀನಾ ನೂರೇನ್ ಮತ್ತೋರ್ವರ ವಿರುದ್ಧ ಶಿಕ್ಷಕಿ ಕೌಸರ್ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12370

Related Articles

Leave a Reply

Your email address will not be published. Required fields are marked *

Back to top button