ಸ್ಥಳೀಯ ಸುದ್ದಿಗಳು

9 ಗಂಟೆಯ ವರೆಗೆ ಎಷ್ಟು ಮತದಾನ, ಯಾರು ಯಾರು ಮತ ಚಲಾಯಿಸಿದ್ದಾರೆ?

ಸುದ್ದಿಲೈವ್/ಶಿವಮೊಗ್ಗ

14 ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಗಂಟೆಯ ಮತದಾನ ಚುರುಕುಗೊಂಡಿದೆ.

ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ವರೆಗೆ ಕ್ಷೇತ್ರದಲ್ಲಿ 11.45% ಮತದಾನವಾಗಿದೆ. ಎರಡು ಗಂಟೆಯ ವರೆಗೆ ಇದು ಉತ್ತಮ ಮತದಾನವಾಗಿದೆ.

ಬೈಂದೂರು 13.64%, ಸಾಗರ 12.66%, ಶಿವಮೊಗ್ಗ ಗ್ರಾಮಾಂತರ 11.6% ಸೊರಬ 9.76% ಶಿವಮೊಗ್ಗ ನಗರ 12.77% ತೀರ್ಥಹಳ್ಳಿ 11.87% ಭದ್ರಾವತಿ 10.37%, ಶಿಕಾರಿಪುರ 9.28% ಮತದಾನವಾಗಿದೆ.

ಮತಗಟ್ಟೆ 166 ರಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಕುಟುಂಬ ಸಮೇತ ಬಂದು ಮತಚಲಾಯಿಸಿದ್ದಾರೆ. ಬೂತ್ ನಂ 71 ರಲ್ಲಿ ನಾಜಿ ಸಭಾಪತಿ ಡಿ‌ಹೆಚ್ ಶಂಕರಮೂರ್ತಿ, ಎಂಎಲ್ ಸಿ ಡಿ‌ಎಸ್ ಅರುಣ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಎಂಎಲ್ ಎ ಶಾರದ ಪೂರ್ಯನಾಯ್ಕ್ ಶಿಕಾರಿಪುರದ ಅಂಜನಾಪುರದಲ್ಲಿ ಮತ ಚಲಾಯಿಸಿದರು.

ಗುಡ್ಡೇಕೊಪ್ಪದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದ ನಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ ಚಲಾಯಿಸಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಗರದಲ್ಲಿ ಮತಚಲಾಯಿಸಿದರು. ಶಿವಮೊಗ್ಗ ಶಾಸಕ ಚೆನ್ನಬಸಪ್ಪ ಕೋಟೆಯ ಮಹಾವೀರ ಶಾಲೆಯಲ್ಲಿ ಪತ್ನಿಯೊಂದಿಗೆ ಬಂದು ಮತಚಲಾಯಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಗರ ವಿಧಾನಸಭಾ ಕ್ಷೇತ್ರದ ಬೇಳೂರು ಗ್ರಾಮದ ಮತಗಟ್ಟೆ 24ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ಕತಾರ್ ನಿಂದ ಬಂದ ನಿವೇದಿತ ಪ್ರಭು ಎಂಬುವರು ಶಿವಮೊಗ್ಗದಲ್ಲಿ ಮತಚಲಾಯಿಸಿದ್ದಾರೆ.

ಇದನ್ನೂ ಓದಿ-https://suddilive.in/archives/14359

Related Articles

Leave a Reply

Your email address will not be published. Required fields are marked *

Back to top button