ಕ್ರೈಂ ನ್ಯೂಸ್

ವಿಡಿಯೋಗೆ ಅಶ್ಲೀಲ ಆಡಿಯೋ ಸೇರ್ಪಡೆ-ಕಾಂಗ್ರೆಸ್ ಐಎನ್ ಟಿಯುಸಿ ವಿಭಾಗ ಸೆನ್ ಠಾಣೆಗೆ ದೂರು

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಸೋಷಿಯಲ್ ಮೀಡಿಯ ಇನ್ ಚಾರ್ಜ್ ಶರತ್‌ ಕಲ್ಯಾಣಿ ವಿರುದ್ಧ ಕಾಂಗ್ರೆಸ್ ಐಎನ್ ಟಿ ಯುಸಿ ವಿಭಾಗವು ಶಿವಮೊಗ್ಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ವರ್ ಅವರ ಬಗ್ಗೆ ಶಿವಮೊಗ್ಗದ ಬಿಜೆಪಿ ಪಕ್ಷದ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಿಕೊಂಡಿರುವ ಶರತ್ ಕಲ್ಯಾಣಿ ಎಂಬುವರು ಅವಹೇಳನಕಾರಿಯಾಗಿ ಬಿಂಬಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಕ್ಷ ಸೆನ್ ಪೊಲೀಸ್ ಠಾಣೆಯಲ್ಲಿ ಪಿಐ ತಿಪ್ಪೇಸ್ವಾಮಿ ಅವರಿಗೆ ಮನವಿ ಮಾಡಿದೆ.

ಇತ್ತೀಚಿಗೆ ಬಜೆಟ್ ಅಧಿವೇಶನ ಮುಗಿಸಿದ ಬಳಿಕ ಒಂದು ಕೊಠಡಿಯಲ್ಲಿ‌ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವೆ ಲಕ್ಷ್ಮೀಹೆಬ್ವಾಳ್ಕರ್ ಅವರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಅದರ ವಿಡಿಯೋದ ತುಣುಕು ತೋರಿಸುವ ಜೊತೆಗೆ ವಿಡಿಯೋ ಬ್ಯಾಕ್ ಗ್ರೌಂಡ್ ನಲ್ಲಿ ಒಂದು ಹೆಣ್ಣಿನ ಅಶ್ಲೀಲವಾದ ಧ್ವನಿಯನ್ನು ಜೋಡಿಸಿ ವೈರಲ್ ಮಾಡಲಾಗಿದೆ. ಈ ವಿಡಿಯೋ ಬಿಜೆಪಿಯ ಶರತ್ ಕಲ್ಯಾಣಿ ಮಾಡಿರುವುದಾಗಿ ಪಕ್ಷ ಆರೋಪಿಸಿದೆ. ಆ ಧ್ವನಿ ಅಶ್ಲೀಲವಾಗಿರುವುದರಿಂದ‌ ಇದನ್ನ ಸೇರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಇದೊಂದು ರಾಜ್ಯದ ಮುಖ್ಯಮಂತ್ರಿಗಳನ್ನು ಮತ್ತು ಸಚಿವ ಸಂಪುಟ ಸದಸ್ಯರನ್ನು ತೀರ ಮುಜುಗರ ಮಾಡುವಂತ ವಿಡಿಯೋವಾಗಿದ್ದು, ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸುವ ಮೂಲಕ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದ್ದರಿಂದ ಈ ಕೊಡಲೇ ಬಿಜೆಪಿ ಪಕ್ಷದ ಸೋಶಿಯಲ್ ಮೀಡಿಯಾ ಪ್ರಮುಖ ಶರತ್ ಕಲ್ಯಾಣಿಯನ್ನು ಕೊಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಪಕ್ಷದ ಜಿಲ್ಲಾ ಅಧ್ಯಕ್ಷೆ ಕವಿತಾ ರಾಘವೇಂದ್ರ, ಪತಿ ರಾಘವೇಂದ್ರ ಸಂದೇಶ್ ನಾಗರಾಜ್, ಸ್ಟೆಲ್ಲಾ ಮೊದಲಾದವರು ಉಪಸ್ಞತಿರಿದ್ದರು.

ಇದನ್ನೂ ಓದಿ-https://suddilive.in/archives/9601

Related Articles

Leave a Reply

Your email address will not be published. Required fields are marked *

Back to top button