ಶಿವಮೊಗ್ಗ – ಭದ್ರಾವತಿ ಸಮಗ್ರ ಅಭಿವೃದ್ಧಿಗಾಗಿ 700-800 ಕೋಟಿ ವೆಚ್ಚದಲ್ಲಿ ಹೊಸ ಯೋಜನೆ-ಬಿ.ಎಸ್.ಸುರೇಶ್

ಸುದ್ದಿಲೈವ್/ಶಿವಮೊಗ್ಗ

ಸೂಡಾದಿಂದ ಶಿವಮೊಗ್ಗದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿದೆ. ಇನ್ನು ಅಭಿವೃದ್ಧಿ ಆಗಬೇಕಿದೆ. ಶಿವಮೊಗ್ಗ – ಭದ್ರಾವತಿ ಸಮಗ್ರ ಅಭಿವೃದ್ಧಿಗಾಗಿ 700-800 ಕೋಟಿ ವೆಚ್ಚದಲ್ಲಿ ಯೋಜನೆ ತರಲು ತೀರ್ಮಾನಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸ ಅನುಷ್ಠಾನ ಮಾಡಲು ಸರಕಾರ ತೀರ್ಮಾನಿಸಿದೆ. ಇತರೆ ದೊಡ್ಡ ದೊಡ್ಡ ನಗರಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಹಳ ಕಡಿಮೆ ಲೇಔಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರದಿಂದ ಸಾರ್ವಜನಿಕರಿಗೆ ಬಡವರಿಗೆ ನಿವೇಶನ ಕೊಡುವವರೆಗೆ ಖಾಸಗಿ ಲೇಔಟ್ ಗೆ ಅನುಮತಿ ನೀಡದಂತೆ ಸೂಚನೆ ನೀಡಲಾಗಿದೆ. 500 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಿಸಿ ನಿವೇಶನ ಹಂಚುವಂತೆ ಸೂಚನೆ ನೀಡಿದ್ದೇನೆ ಎಂದರು.
ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೊನು ಕ್ರಮ ಜರುಗಿಸಲಾಗುವುದು ಎಂದರು.
ಕರ್ನಾಟಕವನ್ನು ಬಸವಣ್ಣನ ನಾಡು ಎಂದು ಕರೆಯಬೇಕು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು ಈಗಾಗಲೇ ಕರ್ನಾಟಕವನ್ನ ಬಸವಣ್ಣನ ನಾಡು, ಅಂಬೇಡ್ಕರ್ ನಾಡು, ಕನಕದಾಸರ ನಾಡು. ಇದು ಎಲ್ಲರ ನಾಡು. ಕುವೆಂಪು ಅವರ ನಾಡು, ಸರ್ವಜನಾಂಗದ ಶಾಂತಿಯ ತೋಟ ಎಂದು ತಿಳಿಸಿದರು.
ಯಾರು ಯಾರು ಮಹಾನುಭಾವರು ಇದ್ದಾರೋ ಎಲ್ಲರ ಹೆಸರನ್ನು ಕರೆಯುತ್ತೇವೆ.ಕೆಂಪೇಗೌಡರ ನಾಡು, ಕನಕದಾಸರ ನಾಡು, ಬಸವಣ್ಣನವರು ಆಗಲೇ ಅನುಭವಮಂಟಪ ಸ್ಥಾಪನೆ ಮಾಡಿದ್ದವರು. 100% ಕರೆಯಬಹುದು ಎಂದರು.
ಇದನ್ನೂ ಓದಿ-https://suddilive.in/archives/1945
