ಕ್ರೈಂ ನ್ಯೂಸ್
ಶಿಡ್ಜು ತಳಿಯ ನಾಯಿ ಮರಿ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಶಿಡ್ಜು ತಳಿಯ ನಾಯಿ ಮರಿಯೊಂದು ಪತ್ತೆಯಾಗಿದ್ದು ನಾಯಿಯ ವಾರಸುದಾರರ ಪತ್ತೆಗಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಸಾಕು ಪ್ರಾಣಿ ಪ್ರಿಯರು ವಾರಸುದಾರರ ಪತ್ತೆಗಾಗಿ ಪೊಲೀಸ್ ಠಾಣೆಯ ಮೆಟ್ಟಿಲು ತುಳಿದಿದ್ದಾರೆ.
ಶಿಡ್ಜು ತಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿದೆ. ಆದರೂ ಈ ತಳಿಯ ನಾಯಿಯನ್ನ ಅದರಲ್ಲೂ ಗಂಡು ನಾಯಿಯನ್ನ ಬೀದಿ ನಾಯಿಗಳ ತರ ಓಡಾಡಲು ಬಿಡಲಾಗಿದೆ. ಗಾಂಧಿ ನಗರದ ಬಳಿ ಕಂಡ ಕಂಡವರ ಕಾಲಿಗೆ ಸಿಕ್ಕಿಕೊಳ್ಳುತ್ತಿದ್ದ ನಾಯಿಯನ್ನ ಸಾಕು ಪ್ರಾಣಿ ಪ್ರಿಯರ ಕಣ್ಣಿಗೆ ಬಿದ್ದಿದೆ.
ಇದನ್ನ ಎತ್ತಿಕೊಂಡು ಹತ್ತಿರದ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ಮಾಹಿತಿ ನೀಡಿದ್ದಾರೆ. ಯಾರಾದರೂ ವಾರಸುದಾರು ದಾಖಲೆ ಸಮೇತ ಠಾಣೆಗೆ ಧಾವಿಸಬಹುದಾಗಿದೆ.
ಇದನ್ನೂ ಓದಿ-https://suddilive.in/archives/1801
