ಕ್ರೈಂ ನ್ಯೂಸ್

ಡಿವೈಎಸ್ಪಿ ಬಾಲರಾಜ್ ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಡಿವೈಎಸ್ಪಿ ಬಾಲರಾಜ್ ವರ್ಗಾವಣೆಗೊಂಡಿದ್ದಾರೆ. ಬೆಂಗಳೂರಿನ ಎಸ್ಐಟಿಗೆ ವರ್ಗಾವಣೆಯಾಗಿದ್ದರಿಂದ ಡಿವೈಎಸ್ಪಿ-2 ಸುರೇಶ್ ಗೆ ಇನ್ಚಾರ್ಜ್ ವಹಿಸಲಾಗಿದೆ.

ಈ ದಿಡೀರ್ ಬೆಳವಣಿಗೆ ಶಿವಮೊಗ್ಗದಲ್ಲಿ ಮಾತ್ರ ಸಂಚಲನ ಮೂಡಿಸಿದೆ. ಇಂದು ಮಧ್ಯಾಹ್ನ 2-3 ಗಂಟೆಯ ವೇಳೆಗೆ ಡಿವೈಎಸ್ಪಿ ಬಾಲರಾಜ್ ಶಿವಮೊಗ್ಗ ಬಿಟ್ಟು ಬೆಂಗಳೂರಿನ ದಾರಿ ಹಿಡಿದಿದ್ದಾರೆ.‌ ಯಾರನ್ನೂ ನೇಮಿಸದೆ ಡಿವೈಎಸ್ಪಿ ಬಾಲರಾಜ್ ಅವರನ್ನ ವರ್ಗಾವಣೆ ಮಾಡಿರುವುದು ಶಿವಮೊಗ್ಗಕ್ಕೆ ಅನ್ಯಾಯವೂ ಆಗಿದೆ.

ಬಿಟ್ ಕಾಯಿನ್ ಹಗರಣವನ್ನ ಬೇಧಿಸಲು‌ ಡಿವೈಎಸ್ಪಿ ಬಾಲರಾಜ್ ಅವರನ್ನ ವರ್ಗಾವಣೆ ಮಾಡಲಾಗಿದ ಎನ್ನಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಬಂದ ವರ್ಗಾವಣೆ ಪತ್ರ ಶಿವಮೊಗ್ಗ ಅದರಲ್ಲೂ ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಉಂಟು ಮಾಡಿದೆ. ಶಿವಮೊಗ್ಗದ ರೌಡಿಗಳ ಎದೆಯನ್ನ ನಡುಕ ಹುಟ್ಟಿಸಿದ್ದ ಅಧಿಕಾರಿ ಬೆಂಗಳೂರಿನ ಬಿಟ್ ಕಾಯಿ್ನ ಪ್ರಕರಣದ ವಿಶೇಷ ಅಧಿಕಾರಿಯಾಗಿ ತೆರಳುತ್ತಿರುವುದು ಸಂತೋಷವೇ…

ಆದರೆ ಶಿವಮೊಗ್ಗದ ಕಥೆ ಹೇಳಿ. ಹಾಗಂತ ಇತರೆ ಅಧಿಕಾರಗಳು ಅಶಕ್ತರು ಅಂತಲ್ಲ, ಅವರ ರೌಡಿಜಂ ಸ್ಕ್ವಾಡ್ ನ್ನ ಕಟ್ಟಿರುವ ರೀತಿಯಿತ್ತಲ್ಲ ಎಂತಹವರ ಗುಂಡಿಗೆಯನ್ನ ಅಲ್ಲಡಿಸುವಂತದ್ದು, ಭ್ರಷ್ಠರಹಿತ ಅಧಿಕಾರಿ ಎನಿಸಿಕೊಂಡಿದ್ದ ಬಾಲರಾಜ್ ಶಿವಮೊಗ್ಗದಲ್ಲಿ ಅಪರಾಧ ಲೋಕವನ್ನ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರೇಮ್ ಸಿಂಗ್ ಪ್ರಕರಣ, ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಜಿನಿಯರ್ ಮನೆಯಲ್ಲಿ ಕಾರು ಡ್ರೈವರ್ ಕೆಲಸದವನಿಂದ ಮನೆಯ ಮಾಲೀಕಳ ಕೊಲೆ ಪ್ರಕರಣದಲ್ಲಿ ಬಾಲರಾಜ್ ಒಂದು ವಾರದೊಳಗೆ ಆರೋಪಿಗಳನ್ನ ಸದೆಬಡೆದಿದ್ದರು. ಅವರು ಎತ್ತಿಕೊಂಡು ಹೋಗಿದ್ದ ಲಕ್ಷಾಂತರ ರೂ. ಹಣವನ್ನ ವಾಪಾಸ್ ಕೊಡಿಸುವಲ್ಲಿ ಪ್ರಮುಖ ರೋಲ್ ಆಗಿತ್ತು. .

ಅದಲ್ಲದೆ ಬಾಲರಾಜ್ ಅವರ ರೌಡಿ ಸ್ಕ್ವಾಡ್ ಎಂಥಹ ರೌಡಿಯ ಎದೆಯನ್ನೇ ನಡುಗಿಸುವಂತಹದ್ದು, ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ರೌಡಿಗಳ ಕಾಲಿಗೆ ಗುಂಡೇಟಿನ ನಿರ್ಧಾರದಲ್ಲಿ ಬಾಲರಾಜ್ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ. ಎರಡು ವರ್ಷ ತಮ್ಮ ಸರ್ವಿಸ್ ನಲ್ಲಿ ಡಜನ್ ಗೂ ಅಧಿಕ ರೌಡಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ.

ಬಾಲರಾಜ್ ಅವರ ವರ್ಗಾವಣೆ ಸಧ್ಯಕ್ಕೆ ಶಿವಮೊಗ್ಗಕ್ಕಂತೂ ಕೊರತೆ ಉಂಟಾಗಿದೆ. ಅದರಲ್ಲೂ ಅನುಭವಿ ಅಧಿಕಾರಿಗಳನ್ನ ನೇಮಿಸದೆ ವರ್ಗಾಯಿಸಿದ್ದು ಕುತೂಹಲವನ್ನೂ ಹೆಚ್ಚಿಸಿದೆ. ಆದರೂ ಶಿವಮೊಗ್ಗದ ಪೊಲೀಸರು ಮತ್ತು ಸಿಬ್ಬಂದಗಳು  ಮಾತ್ರ‌ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/7524

Related Articles

Leave a Reply

Your email address will not be published. Required fields are marked *

Back to top button