ಕ್ರೈಂ ನ್ಯೂಸ್

ಸೀಮಂತಕ್ಕೆ ಹೊರಟಿದ್ದ ವಾಹನ ಪಲ್ಟಿ-ಓರ್ವ ಮಹಿಳೆ ಸಾವು-18 ಜನರಿಗೆ ಗಾಯ

ಸುದ್ದಿಲೈವ್/ಶಿವಮೊಗ್ಗ

ಎದುರುಗಡೆಯಿಂದ ಬಂದ ವಾಹನವನ್ನ ತಪ್ಪಿಸಲು ಹೋಗಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸಾವುಕಂಡಿದ್ದಾಳೆ.

ಶಿಕಾರಿಪುರದ ಜೋಗ ಚಿನ್ನಿಕಟ್ಟೆಯ ಕೆರೆಯ ಬಳಿ ಅಶೋಕ ಲೈಲ್ಯಾಂಡ್ ನಲ್ಲಿ ಹೋಗುತ್ತಿದ್ದ 19 ಮಂದಿಯಲ್ಲಿ ಹಂಮಶೀರ್ ಎಂಬ 37 ವರ್ಷದ ಮಹಿಳೆ ಸಾವು ಕಂಡಿದ್ದಾರೆ. ಓರತವರನ್ನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

ರುಕ್ಸಾನಾ ಎಂಬ ಮಹಿಳೆಯ ಸೀಮಂತ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಆರ್ ಎಂ ಎಲ್ ನಗರದ 19 ಜನರಲ್ಲಿ ಹಂವಸೀರ್ ಮಹಿಳೆ ಸಾವುಕಂಡರೆ ಓರ್ವ ಫಾತೀಮ ಎಂಬ ಮಹಿಳೆಗೆ ತೀವ್ರಗಾಯಗಳಾಗಿವೆ.

ಸೀಮಂತವಾಗಬೇಕಿದ್ದ ರುಕ್ಸನಾರ ಚಿಕ್ಕಮ್ಮ ಹಂಮಶೀರ್ ಸ್ಥಳದಲ್ಲಿ ಸಾವು ಕಂಡಿದ್ದಾರೆ. ಆರ್ ಎಂ ಎಲ್ ನಗರದ 17 ಮಂದಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ತೀವ್ರತರನಾದ ಗಾಯಗಳಾಗಿವೆ. ಇದರಲ್ಲಿ ಮಕ್ಕಳೂ ಇದ್ದಾರೆ. ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ-https://suddilive.in/archives/7916

Related Articles

Leave a Reply

Your email address will not be published. Required fields are marked *

Back to top button