ಕ್ರೈಂ ನ್ಯೂಸ್

ವಿಚ್ಚೇದಿತ ಮಹಿಳೆಗೆ ದೋಖಾ

ಸುದ್ದಿಲೈವ್/ಶಿವಮೊಗ್ಗ

ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವ ವಿಚ್ಛೇದಿತ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡು ನಡು ನೀರಿನಲ್ಲಿ ಕೈಬಿಟ್ಟಿರುವುದಾಗಿ ಆರೋಪಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

25 ವರ್ಷದ ಮಹಿಳೆಗೆ ಈ ಮೊದಲು ಬೇರೆಯವರೊಂದಿಗೆ ಮದುವೆಯಾಗಿದ್ದು, ಆತನಿಂದ ಒಂದು ವರ್ಷದ ಹಿಂದೆ ವಿಚ್ಛೇದನವಾಗಿರುತ್ತದೆ. ಡಿವೋರ್ಸ್ ಎಂಬ ವಿಷಯ ತಿಳಿದಿದ್ದರೂ ಮಹಿಳೆಯ ಜೀವನದಲ್ಲಿ ಆ ವ್ಯಕ್ತಿ ಹಿಂಸೆ ನೀಡುತ್ತಿದ್ದಾನೆ. ಜೀವನದಲ್ಲಿ ನಡೆದ ವಿಷಯವನ್ನು ದಾಳವಾಗಿ ಇಟ್ಟುಕೊಂಡು ನನಗೆ ಟ್ರಾಪ್ ಕೇಸ್ ಹಾಕುತ್ತೇನೆ ಎಂದು ಬೆದರಿಸುತ್ತಿದ್ದಾನೆ ಎಂದು ದೂರಲಾಗಿದೆ.

ಮಹಿಳೆ ಪ್ರೆಗ್ನೆಂಟ್ ಆದಾಗ ಅಬಾಷನ್ ಮಾಡಿಕೊಳ್ಳುವಂತೆ ಒತ್ತಾಯಿಸಿ ತರಿಕೆರೆ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅಬಾಷನ್ ಮಾಡಿಕೊ, ಮುಂದೆ ಮದುವೆ ಆಗೋಣ  ಎಂದು ಮಗುವನ್ನು ತೆಗೆಸಿದ್ದಾನೆ. ಈ ಘಟನೆ ನಡೆದಾದ ನಂತರ ಇಬ್ಬರೂ ಚೆನ್ನಾಗಿದ್ದೆವು ಎಂದು ಮಹಿಳೆ ಎಫ್ಐಆರ್ ನಲ್ಲಿ ದೂರಿದ್ದಾರೆ.

ನಂತರ ಮಹಿಳೆಯ ಹಿಂದೆ ಬೀಳುವಂತೆ ಒಂದು ಹುಡುಗನನ್ನ ಬಿಟ್ಟು ಹೆದರಿಸುವುದು. ಈಗ ಸ್ವಲ್ಪ ದಿನದಿಂದ ವಂಚನೆಯ ಆರೋಪ ಹೊತ್ತಿರುವ ವ್ಯಕ್ತಿ ಮನೆಯಲ್ಲಿ ಬೇರೆ ಯುವತಿಯೊಂದಿಗೆ ಮದುವೆ ಮಾಡುವುದಾಗಿ ಹೇಳುತ್ತಿದ್ದು ಇದರಿಂದ ಇಬ್ವರ ಮತ್ತೆ ಜಗಳ ಆಗಿದೆ.

ಶಿಕಾರಿಪುರದಿಂದ ಕರೆದುಕೊಂಡು ಬಂದ ವ್ಯಕ್ತಿ ಪೊಲೀಸರು ಎಲ್ಲಾ ನನ್ನವರು ಇಷ್ಟು ದಿವಸ ನನ್ನೊಂದಿಗೆ ನಾಟಕ ಮಾಡಿಕೊಂಡು ಬಂದಿದಿಯಾ ಇತರರೊಂದಿಗೂ ನೀನು  ಮಲಗಿದ್ದಿಯಾ ಎಂದು ಹೇಳಿ ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು  ದಾರಿಯಲ್ಲಿ ಬರುವಾಗ ಮಾರ್ಗ ಮಧ್ಯದಲ್ಲಿಯೇ  ಇಳಿಸಿ ಬಿಟ್ಟು ಬಂದಿರುತ್ತಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನನ್ನ ಬಳಿ ಇದ್ದ ವ್ಯಕ್ತಿ ತನ್ನಿಂದ ಹಣ ಪಡೆದಿರುವುದಾಗಿ, ಬೇಡವಾದಾಗ ತಾಯಿ ಮತ್ತು ಅತ್ತೆಯಿಂದ ದೂರುಕೊಡಿಸುವುದಾಗಿ ವ್ಯಕ್ತಿ ಮುಂದಾಗಿದ್ದು, ಈತನಿಂದ ಜೀವಬೆದರಿಕೆ ಇದೆ ಎಂದು ದೂರಲಾಗಿದೆ. ಮನೋಹರ ಗೌಡ ಎಂಬಾತನ ವಿರುದ್ಧ ಮಹಿಳೆ ಎಫ್ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4930

Related Articles

Leave a Reply

Your email address will not be published. Required fields are marked *

Back to top button