ಕ್ರೈಂ ನ್ಯೂಸ್

ವಾರಸುದಾರರು ಬಾರದ ಹಿನ್ನಲೆ-ಪೊಲೀಸರಿಂದಲೇ ಅಂತ್ಯಕ್ರಿಯೆ

ಸುದ್ದಿಲೈವ್/ಶಿವಮೊಗ್ಗ

ಹೊಳೆ ಬಸ್ ಸ್ಟಾಪ್ ನ‌ ಬಾರ್ ವೊಂದರ ಮುಂದೆ ಅ.12 ರಂದು ಅನಾಮಧೇಯ ಶವವೊಂದು ಪತ್ತೆಯಾಗಿತ್ತು.‌ ಈ ಕುರಿತು ವಾರಸುದಾರರು ಬಾರದ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಕರಣ ಹೊರಡಿಸಲಾಗಿತ್ತು.

ಆಕಾಶವಾಣಿ, ದೂರದರ್ಶನ ಮತ್ತು ಪತ್ರಿಕೆಗಳಲ್ಲಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿತ್ತು.‌ ಆದರೂ ಯಾರೂ ಸಹ ವಾರಸುದಾರರು ಮುಂದೆ ಬಾರದ ಹಿನ್ನಲೆಯಲ್ಲಿ ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ್ ನೇತೃತ್ವದಲ್ಲಿ ನ್ಯೂ ಮಂಡ್ಲಿಯ ಸ್ಮಶಾನದಲ್ಲಿ ಶವದ ಅಂತಿಮ ಸಂಸ್ಕಾರ ನಡೆಸಲಾಗಿದೆ.

ನಗರದ ಹೊಳೆ ಬಸ್ ನಿಲ್ದಾಣದ ಹತ್ತಿರದ ಫುಟ್ ಪಾತ್ ನ ಮೇಲೆ ಸುಮಾರು 50 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯೊಬ್ಬರ ಮೃತ ದೇಹವು ದೊರೆತಿತ್ತು.  ಅನಾರೋಗ್ಯ ದಿಂದಲೋ ಅಥವಾ ಆರೈಕೆ ಇಲ್ಲದೆಯೋ ವ್ಯಕ್ತಿ ಮೃತ ಪಟ್ಟಿದ್ದನು. ಈ ಬಗ್ಗೆ *ಕೋಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಿಕೊಂಡು, ಮೃ‍ತ ದೇಹವನ್ನು ಶಿವಮೊಗ್ಗ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶವಾಗಾರದ ಶಿಥಲಿಕರಣ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿಡಲಾಗಿತ್ತು.

ಕಳೆದ 13 ದಿನಗಳಿಂದ ಶವದ ವಾರಸುದಾರರು ಬಾರದ ಹಿನ್ನಲೆಯಲ್ಲಿ ಇಂದು ಅನಾಮದೇಯ ಶವದ ಅಂತಿಮ ಸಂಸ್ಕಾರ ನಡೆಸಲಾಗಿದೆ.‌ 3 ಇಂಚು ಉದ್ದದ ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡ, ಬಲಗೈ ಮೇಲೆ MP & ಓಂ ಹಾಗೂ ಎಡ ಗೈ ಮೇಲೆ SM ಎಂಬ ಹಚ್ಚೆ ಗುರುತು ಇರುತ್ತದೆ. ವ್ಯಕ್ತಿಯ ಮೃತ ದೇಹದ ಮೇಲೆ ಬಿಳಿ ಬಣ್ಣದ ನೀಲಿ ಹೂ ಮಿಶ್ರಿತ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ಫ್ಯಾಂಟ್ ಮತ್ತು ನೀಲಿ, ಕೆಂಪು ಹಾಗೂ ಬಿಳಿ ಪಟ್ಟೆಯ ಟವೆಲ್ ದೊರೆತಿರುತ್ತದೆ.

ಮೃತನ ಬಗ್ಗೆ ಮಾಹಿತಿ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08182-261415 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08182-261413 ಗೆ ಸಂಪರ್ಕಿಸಲು ಕೋರಿದೆ.

ಇದನ್ನೂ ಓದಿ-https://suddilive.in/archives/1798

Related Articles

Leave a Reply

Your email address will not be published. Required fields are marked *

Back to top button