ಕ್ರೈಂ ನ್ಯೂಸ್

ಆಕಸ್ಮಿಕ ಬೆಂಕಿ-ಮನೆ ಸಂಪೂರ್ಣ ಕರಕಲು

ಸುದ್ದಿಲೈವ್/ಶಿವಮೊಗ್ಗ

ನಗರದ ನ್ಯೂಮಂಡ್ಲಿಯ ಇಲಿಯಾಜ್ ನಗರದಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಹೆಂಚಿನ ಮನೆ ಸಂಪೂರ್ಣ ಕರಕಲಾಗಿದೆ. ಇಡಿ ಮನೆಯೇ ಕುಸಿದು ಬಿದ್ದಿದೆ.

ಇಲಿಯಾಜ್ ನಗರದ ಶಿವಾನಂದ್ ಎಂಬುವರಿಗೆ ಈ ಮನೆ ಸೇರಿದ್ದು ಬೆಂಕಿಯ ಶಾಖಕ್ಕೆ ಇಡೀ ಮನೆಯೇ ಉರಿದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಂತರ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

1.5 ಲಕ್ಷ ರೂ. ನಗದು ಮತ್ತು 10 ತೊಲ ಬಂಗಾರದ ಆಭರಣಗಳು ಈ ಬೆಂಕಿಗೆ ಆಹುತಿಯಾಗಿದೆ ಎನ್ಬಲಾಗುತ್ತಿದೆ ಮನೆ, ನಗದು ಮತ್ತು ಚಿನ್ನಾಭರಣ ಸೇರಿ 5 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಯವರು ಧಾವಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ-https://suddilive.in/archives/8409

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373