ರಾಜಕೀಯ ಸುದ್ದಿಗಳು

ಕಾನೂನು ಸುವ್ಯವಸ್ಥೆಯ ಬಗ್ಗೆ ಅಂಕಿ ಅಂಶ ಬಿಚ್ಚಿಟ್ಟ ಶಾಸಕ ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ಬದುಕಲು ಸಾಧ್ಯವಿಲ್ಲ ಎಂಬಂತೆ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ಯಾತೀತ ಎಂದು ಹೇಳುವ ಭರದಲ್ಲಿ ಹಿಂದುತ್ವದ ವಿರುದ್ಧ ಮಾತಾಡುವ  ಕೆಲಸ ನಡಿಯುತ್ತಿದೆ. ಭಯೋತ್ಪಾದಕರಿಗೆ ಶಕ್ತಿ ನೀಡುವ ರೀತಿಯ ಹೇಳಿಕೆ ಕಾಂಗ್ರೆಸ್ ನಾಯಕರ ನೀಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಾಂಬ್ ತಯಾರಿಸಿದರು, ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಯಿತು. ಈ ವೇಳೆ ಕಾಂಗ್ರೆಸ್ ನ ಹೇಳಿಕೆಗಳು ಹಿಂದೂಗಳ ಭದ್ರತೆಯನ್ನ ಅನುಮಾನಿಸುವಂತಾಗಿದೆ.

ಸಾಮಾನ್ಯರು ಕೆಫೆಗೆ ಹೋಗಿ ಟೀ ಕುಡಿಯಲು ಭಯ ಹುಟ್ಟಿಸುವಂತೆ ರಾಜ್ಯ ಸರ್ಕಾರ ಮಾಡಿದೆ.‌ ಅಲ್ಲಿ ಬಾಂಬ್ ಹಾಕಿದವರು ತೀರ್ಥಹಳ್ಳಿಯುವಕರು. ಕರ್ನಾಟಕವನ್ನ ಭಯೊತ್ಪಾದಕರ ಸ್ವರ್ಗದ ನಾಡನ್ನಾಗಿ ಮಾಡುತ್ತಿರುವುದು ಕಾಂಗ್ರೆಸ್ ಎಂದು ಆರೋಪಿಸಿದರು.

ನಾವು ಹೇಳಿದರೆ ಕೋಮು ವಾದಿಗಳು ಅವರು ಮಾಡಿದರೆ ಜಾತ್ಯಾತೀತನಾ ಎಂದು ಪ್ರಶ್ಸಿಸಿದ ಶಾಸಕರು ಕರ್ನಾಟಕವನ್ನ ಪಾಕಿಸ್ತಾನದ ರಾಜಧಾನಿಯನ್ನ ಕಾಂಗ್ರೆಸ್ ಮಾಡಲು ಹೊರಟಿದೆ. ಡಿಕೆಶಿಯ ನೇತೃತ್ವದಲ್ಲಿ ಕಾಂಗ್ರೆಸ್ ನ ಮೆರವಣಿಗೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗುತ್ತದೆ. ಇಲ್ಲಿ ಕೂಗಿದವರೂ ಮುಸ್ಲೀಂರಾಗಿದ್ದಾರೆ. ಕಾಂಗ್ರೆಸ್ ನಿರ್ಜೀವ ಸರ್ಕಾರದಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಹಿಂದೂಗಳಿಗೆ ರಕ್ಷಣೆ ನೀಡದೆ ಸದೆಬಡಿಯುವ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತಿದೆ. ಕಾಂಗ್ರೆಸ್ ನ್ನ ಮೇ. 7 ರಂದು ನಡೆಯುವ ಚುನಾವಣೆಯಲ್ಲಿ ಮತಗಳ ಮೂಲಕ ಜನ ಸದೆಬಡಿಯ ಬೇಕಿದೆ. ಕಮಲ ಮತ್ತೊಮ್ಮೆ ಅರಳಲಿದೆ. ಎಲ್ಲಾ ಕಡೆ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳ್ತಾ ಇದ್ದಾರೆ.

ನೇಹಾ ಕೊಲೆಯನ್ನ ವೈಯುಕ್ತಿಕ ಎಂದು ಗೃಹಸಚಿವರು ಹೇಳ್ತಾರೆ. ತನಿಖೆಗೂ ಮೊದಲೆ ಈ ರೀತಿಯ ಹೇಳಿಕೆ ನೀಡುದ್ರೆ ನಿಮ್ಮನ್ನ ಗೃ ಸಚಿವರೆಂದು ಯಾಕೆ ಕರೆಯಬೇಕು? ಮತಕ್ಕಾಗಿ ಹೇಗೆ ಕಾಂಗ್ರೆಸ್ ನಿರ್ಲಜ್ಜತನದಿಂದ ನಡೆದುಕೊಳ್ಳುತ್ತಿದೆ.‌ ಮತ ಕೇಳಲು ಹೋದಾಗ ಜನ ತಮ್ಮ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾ ಎಂದು ಹೇಳ್ತಾ ಇದ್ದಾರೆ. ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ರಾಜ್ಯದಲಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಹೇಳುವ ರಾಜ್ಯಸರ್ಕಾರಕ್ಕೆ ಶಾಸಕ ಚೆನ್ನಿ ಒಂದಿಷ್ಟು ಅಂಕಿ ಅಂಶ ಬಿಚ್ಚಿಟ್ಟಿದ್ದಾರೆ. ಎರಡು ತಿಂಗಳಲ್ಲಿ1395 ಪ್ರಕರಣ ಪೊಕ್ಸೋ ,ಚಾಕು ಇರಿತ, ಕೊಲೆ ಮೊಲಾದ ಅಪರಾಧಿ ಪ್ರಕರಣಗಳು ದಾಖಲಾಗಿವೆ.

ಎರಡು ತಿಂಗಳಲ್ಲಿ ಡಕಾಯಿತಿ ಪ್ರಕರಣಗಳು ಈ ವರ್ಷದ‌ ಜನವರಿ ತಿಂಗಳಲ್ಲಿ 118 ನಡೆದಿದೆ, 125 ಫೆಬ್ರವರಿಯಲ್ಲಿ ದಾಖಲಾಗಿದೆ. ಇದು ಇಡೀ ರಾಜ್ಯದ ಚಿತ್ರಣವಾಗಿದೆ. ದಂಗೆ ಪ್ರಕರಣಗಳು ಜನವರಿಯಲ್ಲಿ 298 ದಾಖಲಾದರೆ , ಫೆಬ್ರವರಿ 299 ಪ್ರಕರಣ ನಡೆದಿದೆ. ಪೋಕ್ಸೋ ಒಂದೆ ಜನವರಿಯಲ್ಲಿ 323 ದಾಖಲಾದರೆ, 278 ಪ್ರಕರಣಗಳು ಫೆಬ್ರವರಿಯಲ್ಲಿ ನಡೆದಿದೆ. ಎಸ್ ಸಿ ಎಸ್ಟಿ ದೌರ್ಜನ್ಯ ಪ್ರಕರಣಗಳು ಎರಡು ತಿಂಗಳು ಅತಿ ಹೆಚ್ಚು ನಡೆದಿದೆ ಎಂದರು.

ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೂ ಕೊಲೆ ಪ್ರಕರಣಗಳು ನಡೆದಿದೆ. ಇದು ಕರ್ನಾಟಕದ ಕಾಂಗ್ರೆಸ್ ನ ಲಾ ಅಂಡ್ ಆರ್ಡರ್ ನ ಕೈಗನ್ನಡಿಯಾಗಿದೆ. ಇದರಲ್ಲಿ ಬಿಜೆಪಿ ರಾಜಾಕಾರಣ ಮಾಡ್ತಾ ಇಲ್ಲ. ಒಂದು ದಿನದಲ್ಲಿ ಏಳು ಕೊಲೆ ಪ್ರಕರಣಗಳು ನಡೆದಿದೆ. ಇದಕ್ಕೆ ಸಿಎಂ ಡಿಸಿಎಂ ಮತ್ತು ಗೃಹಸಚಿವರು ಉತ್ತರಿಸಬೇಕು. ಇಲ್ಲವಾದಲ್ಲಿ ಜನ ಉತ್ತರ ನೀಡ್ತಾರೆ ಎಂದರು.

ದೇಶದ್ರೋಹಿ ಹಿಂದೂ ವಿರೋಧಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಬೇಕಿದೆ. ಕಾನೂನು ಸುವ್ಯವಸ್ಥೆ ಸರಿಮಾಡದೆ ಇದ್ದರೆ ಕಾನೂನನ್ನ ಕೈಗೆ ತೆಗೆದುಕೊಳ್ಳುವಂತಾದರೆ ಪರಿಸ್ಥಿತಿ ಏನಾಗಲಿದೆ ಗಮನಿಸಿ ಎಂದು ಎಚ್ಚರಿಸಿದರು.

ಇದನ್ನೂ ಓದಿ-https://suddilive.in/archives/13282

Related Articles

Leave a Reply

Your email address will not be published. Required fields are marked *

Back to top button