ರಾಜಕೀಯ ಸುದ್ದಿಗಳು

ಹಿಜಬ್ ವಿಚಾದಲ್ಲಿ ಸಿಎಂ ಉಲ್ಟಾ-ಹಿಂದುತ್ವಕ್ಕೆ ಸಿಕ್ಕ‌ಜಯ ಅಂದ್ರು ಈಶ್ವರಪ್ಪ!

ಸುದ್ದಿಲೈವ್/ಶಿವಮೊಗ್ಗ

ಹಿಜಬ್ ರಾಜಕಾರಣ ನಡೆಸಿ ಮುಸ್ಲೀಂರನ್ನ ಖುಷಿ ಪಡಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಸಿಎಂ ಅವರು ಹಿಜಾಬ್ ಹೇಳಿಕೆಯಿಂದ ಹಿಂದಕ್ಕೆ ಸರಿದಿರುವುದು ಹಿಂದುತ್ವಕ್ಕೆ ಸಿಕ್ಕ ಜಯ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

ಸ್ವಗೃಹದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶಾಲೆಯಲ್ಲಿ ಹಿಜಬ್ ಧರಿಸಿ ಹಾರಾಗಲು ಅವಕಾಶ ಇದೆ. ನಾಳೆಯಿಂದಲೇ ಆದೇಶ ಕೊಡುವುದಾಗಿ ಹೇಳಿದ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಹಿಂದುತ್ವದ ಶಕ್ತಿಯಿಂದ ಹೇಳಿಕೆ ಹಿಂಪಡೆದಿದ್ದಾರೆ ಎಂದು ದೂರಿದರು.

ಸಿಎಂ ಹಿಜಬ್ ಗೆ ಅವಕಾಶ ಕೊಡುವುದಾಗಿ ಹೇಳಿಕೆ ಕೊಟ್ಟು ರಾಜ್ಯದ ಮೂಲೆ ಮೂಲೆಯಿಂದ ಬಂದ ಆಕ್ಷೇಪಣೆಗೆ ಹೆದರಿ ಉಲ್ಟಾ ಹೊಡೆದಿದ್ದಾರೆ. ಸಚಿವರಾದ ಹೆಚ್ ಕೆ ಪಾಟೀಲ್ ಈಗ ಏನು ಅಂತಾರೆ ಎಂದು ಪ್ರಶ್ನಿಸಿದರು. ಕಾನೂನು ಸಚಿವರು ಸಿಎಂ ಸಿದ್ದರಾಮಯ್ಯ ಅಂತ ತಪ್ಪು ಹೇಳಿಕೆ ಏನು ಕೊಟ್ಟಿದ್ದಾರೆ. ಸರಿಯಾದ ಹೇಳಿಕೆ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.

ಕಾನೂನು ಸಚಿವರು ಹಿಜಬ್ ಪ್ರಕರಣ ಹೈಕೋರ್ಟ್ ತೀರ್ಪು ಬಂದು ಸುಪ್ರೀಂ ನಲ್ಲಿ ವಾದವಿವಾದ ಇರವಾಗ‌ ಕಾನೂನು ಮಂತ್ರಿ ಸಿಎಂ ಅವರ ಹಿಜಬ್ ಹೇಳಿಕೆಯನ್ನ ಬೆಂಬಲಿಸಿದ್ದು ಖಂಡನೀಯ ಹಾಗಾಗಿ ಸಿಎಂ ಮತ್ತು ಕಾನೂನು ಮಂತ್ರಿ ರಾಜ್ಯದ ಕ್ಷಮೆ‌ಕೇಳಬೇಕು ಎಂದು ಆಗ್ರಹಿಸಿದರು.

ಬೆಳಿಗ್ಗೆ ಎಂದು ರಾತ್ರಿಯೊಂದು ಆದೇಶಿಸುವ ಸಿದ್ದರಾಮಯ್ಯ ಅವರ ಸರ್ಕಾರ ಮಹ್ಮದ್ ಬಿನ್ ತೊಗಲಕ್ ಆಡಳಿತಕ್ಕೆ ಹೋಲಿಸಿ ಹೇಳಿಕೆ ನೀಡಿದ್ದೆ. ಸಿದ್ದರಾಮಯ್ಯನವರ ಹೇಳಿಕೆ ಮುಂಚಿನಿಂದಲೂ‌ ನಂಬುತ್ತಿರಲಿಲ್ಲ. ಅವರಿಗೆ ಹೀಗೆ ಆದೇಶ ನೀಡಲು ಅವಕಾಶವಿರಲಿಲ್ಲ. ಸಚಿವರೊಂದಿಗೆ ಚರ್ಚಿಸಿರಲಿಲ್ಲ. ಹಿಂದಿನ ಸರ್ಕಾರದ ಹಿಜಬ್ ಹಿಂಪಡೆದಿದ್ದಾರೆ ಎಂದು ಸಿಎಂ ಘೋಷಿಸಿರುವುದು ಗೊಂದಲ ಮೂಡಿಸಿತ್ತು. ಇದು ಅಕ್ಷಮ್ಯ ಅಪರಾಧ ಎಂದು ದೂರಿದರು.

ಪಿಎಫ್ಐ ಬೆಂಬಲಿತರಿಂದ ಆದ ಗೊಂದಲಕ್ಕೆ ಕೇಸರಿ ಶಾಲುಗಳು ಶಾಲೆಯಲ್ಲಿ ಕಾಣಿಸಿತ್ತು. ಹಿಂದಿನ ಬಿಜೆಪಿ ಸರ್ಕಾರ ಹಾಗಾಗಿ ಸಮವಸ್ತ್ರ ಜಾರಿಗೆ ತಂದ ಕಾರಣ ಪ್ರಕರಣ ನ್ಯಾಯಾಲಯಕ್ಕೆ ಹೋಗಿತ್ತು. ಪ್ರಕರಣ ಇನ್ನೂ ಸುಪ್ರೀಂನಲ್ಲಿ ಬಾಕಿ ಇದ್ದಕಾರಣ ಪ್ರಕರಣ ಹಿಂಪಡೆಯುವ ದುಸ್ಸಾಹಕ್ಕೆ ಪ್ರಯತ್ನಿಸಲಾಗಿತ್ತು.

ಸಿದ್ದರಾಮಯ್ಯ ಕಾಂಗ್ರೆಸ್ ನ ಮುಖ್ಯಮಂತ್ರಿ‌ಅಲ್ಲ ಮುಸ್ಲೀಂ ಲೀಗ್ ನ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ದೂರಿದರು.

ಇದನ್ನೂ ಓದಿ-https://suddilive.in/archives/5339

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373