ರಾಜಕೀಯ ಸುದ್ದಿಗಳು

ಉದ್ಯಮ ಎಂಬುದು ಹುಲಿ ಮೇಲಿನ ಸವಾರಿ-ಬಿ.ಎಲ್. ಶಂಕರ್

ಐತಿಹಾಸಿಕ ಮತ್ತು ಭಾವನಾತ್ಮಕ ಸಂದರ್ಭಗಳಿಗೆ ಅಮೃತಮಯಿ ಕಾರ್ಯಕ್ರಮ ಸಾಕ್ಷಿಯಾಗಿದೆ. ರುದ್ರೇಗೌಡರೇ ಬದುಕೇ ತೆರೆದ ಪುಸ್ತಕ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮೂಲಕ ಸಾಧಕರಾಗಿದ್ದಾರೆ. ರುದ್ರೇಗೌಡರಿಗೆ ಉದ್ಯಮಿ ಎಂಬ ಅಹಂ ಇಲ್ಲ. ಅವರ ಆದರ್ಶ ಯುವ ಜನಾಂಗಕ್ಕೆ ಮಾದರಿ ಆಗಬೇಕಿದೆ.

ಸುದ್ದಿಲೈವ್/ಶಿವಮೊಗ್ಗ

ಉದ್ಯಮ ನಡೆಸುವುದೆಂದರೆ ಹುಲಿ ಸವಾರಿ ಮಾಡಿದಂತೆ. ಕೆಳಗೆ ಇಳಿದರೆ ಹುಲಿ ತಿನ್ನುತ್ತದೆ. ಹೀಗಾಗಿ ಸವಾರಿ ಮಾಡುತ್ತಲೇ ಇರಬೇಕಾಗುತ್ತದೆ. ಅಂತಹ ಯಶಸ್ವಿ ಸವಾರಿಯನ್ನು ರುದ್ರೇಗೌಡರು ಮಾಡುತ್ತಲೇ ಬಂದಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಹೇಳಿದರು.

ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆಕ್ಷನ್ ಹಾಲ್‌ನಲ್ಲಿ ಶನಿವಾರ ಕೈಗಾರಿಕೋದ್ಯಮಿ, ಎಂಎಲ್‌ಸಿ ಎಸ್.ರುದ್ರೇಗೌಡ ಅವರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದಲ್ಲಿ ರುದ್ರೇಗೌಡರಿಗೆ ಅಭಿನಂದಿಸಿ ಮಾತನಾಡಿದ ಅವರು, ರೈತನಾಗಿ, ಉದ್ಯಮಿಯಾಗಿ, ಕೆಪಿಎಸ್ ಸಿ ಸದಸ್ಯನಾಗಿ ಮಾದರಿಯಾಗಿದ್ದಾರೆ ಎಂದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಗೌಡರು ಪರಿಶುದ್ಧವಾಗಿ ನಡೆದುಕೊಂಡಿದ್ದಾರೆ. ಬಸವೇಶ್ವರರ ಕೃಪೆಗೆ ಪಾತ್ರರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರೂ ಆಗಬಹುದಿತ್ತು. ಅದಕ್ಕೆ ಅವರು ಮನಸ್ಸು ಮಾಡಲಿಲ್ಲಘಿ. ಇದು ಅವರ ಔದಾರ್ಯವಾಗಿದೆ ಎಂದರು.

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ, ವಿಧಾನ ಪರಿಷತ್‌ನಲ್ಲಿ ಎಂತಹವರು ಇರಬೇಕು ಎಂಬುದಕ್ಕೆ ರುದ್ರೇಗೌಡರೇ ನಿದರ್ಶನ, ಸಂಸ್ಕೃತಿಗೆ, ನಡವಳಿಕೆಗೆ ಇವರು ಮಾದರಿ. ಎಲ್ಲಾ ರೀತಿಯ ಕಷ್ಟಗಳನ್ನು ಜೀವನದಲ್ಲಿ ದಾಟಿ ಬಂದಿದ್ದಾರೆ. ರುದ್ರೇಗೌಡರು ಲ ಹೊತ್ತ ಬಾಳೆಯಂತೆ ಬಾಗಿದ್ದುಘಿ, ಸೌಜನ್ಯದ ವ್ಯಕ್ತಿತ್ವ ಅವರಲ್ಲಿದೆ ಎಂದು ಬಣ್ಣಿಸಿದರು.

ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇರುತ್ತದೆ. ಅಂತಹ ತಮ್ಮೊಳಗಿನ ಶಕ್ತಿಯನ್ನು ಅವರು ಗುರುತಿಸಿಕೊಂಡು ಕೆಲಸ ಮಾಡಿದ್ದಾರೆ. ನಮ್ಮ ಸಂವಿ‘ಾನ ಎಂಥೆಂತ ಸವಾಲುಗಳನ್ನು ಮೆಟ್ಟಿ ನಿಂತಿತೋ ಅದೇ ರೀತಿ ರುದ್ರೇಗೌಡರು ಉದ್ಯಮದಲ್ಲಿ ಸವಾಲು ಎದುರಿಸಿದ್ದಾರೆ. 3 ಸಾವಿರ ಜನರಿಗೆ ಉದ್ಯೋಗ ಕೊಡುವುದು, ವಿದೇಶಗಳಿಗೆ ಉತ್ಪನ್ನಗಳನ್ನು ರ್ತು ಮಾಡುತ್ತಿರುವುದು ಕಡಿಮೆ ಸಾಧನೆಯಲ್ಲ ಎಂದರು.

ಇಂದು ಲೋಕಸೇವಾ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳುವುದೇ ಬೇಕಿಲ್ಲ. ಸದಸ್ಯರೇ ಒಂದು ಕಡೆ, ಸದಸ್ಯ ಕಾರ್ಯದರ್ಶಿಗಳೇ ಒಂದು ಗುಂಪಾಗಿ ಯಾವುದೇ ನೇಮಕಾತಿಗಳು ಸಕಾಲದಲ್ಲಿ ಆಗುತ್ತಿಲ್ಲ. ಇದಕ್ಕೆ ರುದ್ರೇಗೌಡರು ಅಪವಾದವಾಗಿದ್ದರು. 38 ಸಾವಿರ ಜನರಿಗೆ ಇವರ ಕಾಲದಲ್ಲಿ ಉದ್ಯೋಗ ಸಿಕ್ಕಿದೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯವರಿಗೆ ಆದ್ಯತೆ ನೀಡಿದ್ದರು. ಹೊಸ ಪಠ್ಯಕ್ರಮ ಜಾರಿಗೊಳಿಸಿದ್ದರು ಎಂಬುದು ಗಮನಾರ್ಹ ಎಂದರು.

ಗೌರವ ಸಮರ್ಪಣೆ ಮಾಡಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಜೀವನ ಎಂಬುದು ಪ್ರತಿಯೊಬ್ಬ ವ್ಯಕ್ತಿಗೆ ಕೊಟ್ಟ ದೊಡ್ಡ ಅವಕಾಶ. ಅಂತಹ ಜೀವನವನ್ನು ಗೌಡರು ಅರ್ಥಪೂರ್ಣ ಮಾಡಿದ್ದಾರೆ. ಜೀವನ ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇನ್ನೊಬ್ಬರಿಗಾಗಿ ಬದುಕಿದ್ದಾರೆ. ಪರೋಪಕಾರದ ಜತೆಗೆ ನಿಮ್ಮ ಚರಿತ್ರೆ ಕಾಪಾಡಿಕೊಂಡಿದ್ದೀರಿ.ಸನ್ಮಾನಕ್ಕಾಗಿ ಕೆಲಸ ಮಾಡಿಲ್ಲ. ನೀವು ಮಾತನಾಡಬೇಕಿಲ್ಲ. ಸಾಧನೆಯೇ ಮಾತನಾಡುತ್ತಿದೆ ಎಂದು ಮೆಚ್ಚುಗೆ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಹಾಗೂ ಸಂಸದ ಬಿ.ವೈ. ರಾಘವೇಂದ್ರ, ಮೌಲ್ಯಕ್ಕೆ ರಾಜಕಾರಣ ಮಾಡಿದವರು ರುದ್ರೇಗೌಡರು. ಜಿಲ್ಲೆಯಲ್ಲಿ ಬೇರೆ ಬೇರೆ ಕಾರ್ಖಾನೆಗಳು ಮುಚ್ಚಿ ಹೋಗಿರುವ ಈ ಸಂದ‘ರ್ದಲ್ಲಿ ತಮ್ಮದೇ ಆದ ಕೈಗಾರಿಕೆ ಆರಂಭಿಸಿ ಯಶಸ್ವಿ ಕಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರು ಯಶಸ್ವಿಯಾಗಿ ಮುನ್ನಡೆಯುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಐತಿಹಾಸಿಕ ಮತ್ತು ಭಾವನಾತ್ಮಕ ಸಂದರ್ಭಗಳಿಗೆ ಅಮೃತಮಯಿ ಕಾರ್ಯಕ್ರಮ ಸಾಕ್ಷಿಯಾಗಿದೆ. ರುದ್ರೇಗೌಡ ಅವರ ಬದುಕೇ ತೆರೆದ ಪುಸ್ತಕ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮೂಲಕ ಸಾಧಕರಾಗಿದ್ದಾರೆ. ರುದ್ರೇಗೌಡರಿಗೆ ಉದ್ಯಮಿ ಎಂಬ ಅಹಂ ಇಲ್ಲ. ಅವರ ಆದರ್ಶ ಯುವ ಜನಾಂಗಕ್ಕೆ ಮಾದರಿ ಆಗಬೇಕಿದೆ ಎಂದರು.

ಮನಸ್ಸನ್ನು ಸದಾ ಉಲ್ಲಾಸಭರಿತವಾಗಿಟ್ಟುಕೊಳ್ಳುವ ರುದ್ರೇಗೌಡರು ಪರರಿಗೆ ಉಪಕಾರಿಯಾಗಿ ಸೇವೆ ಮಾಡಿದ್ದಾರೆ. ಎಚ್ಚರಿಂದ ಕೆಲಸ ಮಾಡುವ ಅವರ ಜೀವನ ಯುವಕರಿಗೆ ಮಾರ್ಗದರ್ಶಕವಾಗಿದೆ. ಅವರ ಜಂಗಮತ್ವದ ಸ್ಪೂರ್ತಿ ಇಷ್ಟೆಲ್ಲಾ ಸಾಧನೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.‌

ಇದೇ ಸಂದರ್ಭದಲ್ಲಿ ಎಸ್.ರುದ್ರೇಗೌಡ ದಿ ಐರನ್ ಮ್ಯಾನ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅಧಕ್ಷತೆ ವಹಿಸಿದ್ದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ
ಹಿರಿಯ ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡಶೆಟ್ಟರು, ಶಾಂತಲಾ ಇಂಡಸ್ಟ್ರಿಸ್‌ನ ಸಂಸ್ಥಾಪಕ ನಿರ್ದೇಶಕಿ ಶಾಂತಮ್ಮ ಡಿ.ಜಿ.ಶಿವಣ್ಣ ಗೌಡ, ಕೊಲ್ಕತ್ತಾದ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7862

Related Articles

Leave a Reply

Your email address will not be published. Required fields are marked *

Back to top button