ರಾಜಕೀಯ ಸುದ್ದಿಗಳು

ಆರೋಪಿ ವಿರುದ್ಧ ಸ್ಟ್ರಾಂಗ್ ಕೇಸ್ ಹಾಕಿ, ಗಲ್ಲಿಗೇರಿಸಿ-ಇಲ್ಲವಾದಲ್ಲಿ ಹಿಂದೂ ಸಂಘಟನೆ ಸುಮ್ಮನೆ ಕೂರಲ್ಲ-ರಾಜೇಶ್ ಗೌಡ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯನ್ನ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಮಾತೃಶಕ್ತಿ-ದುರ್ಗಾವಾಹಿನಿ ಕೋಟೆ ಪ್ರಖಂಡ ವತಿಯಿಂದ ಬಿಹೆಚ್ ರಸ್ತೆಯಲ್ಲಿರುವ ಶಿವಪ್ಪ ನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆದಿದೆ.

ವಿ ವಾಂಟ್ ಜಸ್ಟಿಸ್, ಕಾನೂನು ಅಂತೆ ಕಾನೂನು ಅವರಪ್ಪಂದಂತೆ ಕಾನೂನು, ರಕ್ಷಿಸಿ ರಕ್ಷಿಸಿ ಹಿಂದೂ ಹೆಣ್ಣು ಮಕ್ಕಳನ್ನ ರಕ್ಷಿಸಿ ಎಂಬ ಮೊದಲಾದ ಘೋಷಣೆ ಕೂಗಲಾಯಿತು.

ಈ ಕುರಿತು ಸಂಘಟನೆಯ ಮುಖಂಡ ರಾಜೇಶ್ ಗೌಡ‌ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ನೇಹಾಳನ್ನ ಫಯಾಜ್ ಎಂಬಾತ ಕೊಲೆ ಮಾಡಿದ್ದಾನೆ. ಲವ್ ಜಿಹಾದಿಗೆ ಬಲಿಕೊಡಲು ನೇಹಳ ಹಿಂದೆ ಬಿದ್ದಿದ್ದ ಈತ ಪ್ಲಾನ್ ಮಾಡಿ ನಾಲ್ವರ ಸಹಾಯದಿಂದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಘಟನೆ 38 ವರ್ಷದಿಂದ ಹಿಂದೂ ಹೆಣ್ಣು ಮಕ್ಕಳಿಗೆ ಎಚ್ಚರಿಸುತ್ತಾ ಬಂದರೂ ನೇಹಾಳನ್ನ ರಕ್ಷಿಸಲು ಸಾಧ್ಯವಾಗಿಲ್ಲ. 8 ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರ್ಕಾರ ಹಿಂದೂ ಯುವಕರ ಮೇಲೆ, ಹಿಂದೂ ಯುವತಿ ಮತ್ತು‌ ಮಹಿಳೆಯರ ವಿರುದ್ಧ ಪಿತೂರಿ ಮಾಡುತ್ತಲೇ ಬಂದ ಪರಿಣಾಮ ಇಂದು ನೇಹಾಳನ್ನ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಗೃಹಮಂತ್ರಿಗೆ ಏನು ಹೇಳಿಕೆ ಕೊಡಬೇಕು ಗೊತ್ತಿಲ್ಲ. ನೇಹಾ ಲವ್ ಮಾಡ್ತಾ ಇದ್ದಾರೆ ಎಂದು ಹೇಳುವ ಮೂಲಕ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡುತ್ತಿರುವ ಅನುಮಾನ ಹುಟ್ಟಿದೆ. ಆದರೆ ನೇಹಾಳ ತಂದೆ ಅಲ್ಲ ಅಂದರೂ ಗೃಹಸಚಿವರ ಹೇಳಿಕೆ ಬೇಸರ ತಂದಿದೆ ಎಂದರು

ಚನ್ನಗಿರಿಯಲ್ಲಿ ಕೋಸಂಬರಿ ಹಂಚುವ ವಿಷಯದಲ್ಲಿ ಗಲಭೆ ನಡೆದಿದೆ. ಮುಸ್ಲೀಂ ಗೂಂಡಾಗಳು ಭಾರತವನ್ನ ಇಸ್ಲಾಮೀಕರಣ ಮಾಡಲು ಕಾಂಗ್ರೆಸ್ ಸರ್ಕಾರ ಬೆನ್ನಲುಬಾಗಿ ನಿಂತಿದೆ ಎಂದು ರಾಜೇಶ್ ಗೌಡ ಆರೋಪಿಸಿದ್ದಾರೆ. ಆರೋಪಿ ಫಯಾಜ್ ಗೆ ಗಲ್ಲುಶಿಕ್ಷೆ ಆಗಲೇ ಬೇಕು. ಆತನನ್ನ ಸಾಕಿ ಸಲಹಿದ ನಂತರ ನೇಣಿಗೆ ಹಾಕುವುದಲ್ಲ ತಕ್ಷಣ ಜಾರಿ ಆಗಬೇಕು ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆದರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟ ಆಗುತ್ತೆ. ಕರ್ನಾಟಕದಲ್ಲಿ ಯಾಕೆ ಆ ಕಾನೂನು ಜಾರಿಯಾಗಲ್ಲ. ನಿಮ್ಮ ಪಕ್ಷದ ಕಾರ್ಪರೇಟರ್ ಗೆ ರಾಜ್ಯದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾದರೆ ಸಾಮಾನ್ಯನ ಗತಿ ಏನು? ಕಾಂಗ್ರೆಸ್ ಸರ್ಕಾರದಲ್ಲಿ ರಾಮನವಮಿ ಆಚರಿಸುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆ ಮಾಡುವ ಗೂಂಡಾಗಳು ಬ್ರದರ್ಸ್ ಎನ್ನುವುದಾದರೆ ಸಿಎಂ ಡಿಸಿಎಂ ಗಳೆಲ್ಲಾ ಪಾಕಿಸ್ತಾನಕ್ಕೆ ಹೋಗಿಬಿಡಿ. ನಾವು ಪೂಜೆ ಮಾಡುವ ಮಹಿಳೆರಿಗೆ ರಕ್ಷಣೆ ನೀಡಲ್ಲ ಎಂದರೆ ನಿಮ್ಮ ನಾಯಕತ್ವ ಏಕೆ ಬೇಕು. ಸ್ಟ್ರಾಂಗ್ ಚಾರ್ಚ್ ಶೀಟ್ ಹಾಕಬೇಕು. ಚಾರ್ಚ್ ಶೀಟ್ ವೀಕ್ ಆಗಿ ಕೇಸ್ ಬಿದ್ದು ಹೋದರೆ ಸಂಘಟನೆ ಸುಮ್ಮನಿರಲ್ಲ ಎಂದು ಗುಟರ್ ಹಾಕಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಸಚಿನ್, ಸುರೇಶ್ ಬಾಬು, ಅಂಕುಶ್, ನಟರಾಜ್, ಅರವಿಂದ, ನಾರಾಯಣ ವರ್ಣೇಕರ್ ಮೊದಲಾದರು ಭಾಗಿಯಾಗಿದ್ದರು.‌

ಇದನ್ನೂ ಓದಿ-https://suddilive.in/archives/13219

Related Articles

Leave a Reply

Your email address will not be published. Required fields are marked *

Back to top button