ರಾಜಕೀಯ ಸುದ್ದಿಗಳು

ಇಂದೂ ಕುಮಾರ್ ಬಂಗಾರಪ್ಪ ಗೈರು

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರಕ್ಕೆ ರಾಜ್ಯಾಧ್ಯಕ್ಷರಾಗಿ ಮೊದಲಬಾರಿಗೆ ಕಾಲಿಡುತ್ತಿರುವ ಬಿ.ವೈ.ವಿಜೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ರವರಿಗೆ ಆತ್ಮೀಯ ಅಭಿನಂದನೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ಹಳೇ ಸಂತೆ ಮೈದಾನದಲ್ಲಿ ಶಿಕಾರಿಪುರದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕುಮಾರ್ ಬಂಗಾರಪ್ಪ ನವರ ಗೈರು ಹಾಜರಿಯೂ ಎದ್ದುಕಾಣುತ್ತಿದ್ದವು.

ನಿನ್ನೆ ಶಿವಮೊಗ್ಗದಲ್ಲಿಯೂ ನಡೆದ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದ ಕುಮಾರ್ ಬಂಗಾರಪ್ಪ ವಿಜೇಂದ್ರ ಅವರ ಮತಕ್ಷೇತ್ರದಿಂದ ಕೂಗಳೆತೆ ದೂರದಲ್ಲಿದ್ದರೂ ಇಂದು ಶಿಕಾರಿಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ.

ಸೊರಬ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಭಾಗಿಯಾಗಿದ್ದರು. ಸೊರಬದಲ್ಲಿ ಕುಮಾರ್ ಬಂಗಾರಪ್ಪ ಶಾಸಕರಾಗಿದ್ದಾಗ ಇವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇಂದು ಸೊರಬದಿಂದ ಅನೇಕರು ಕಾರ್ಯಕರ್ತರು, ಅಭಿಮಾನಿಗಳು ಬಂದರೂ ಮಾಜಿ ಶಾಸಕರು ಹಾಜರಾಗಿರಲಿಲ್ಲ.

ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಹರತಾಳಹಾಲಪ್ಪ, ಬಿ.ಸಿ.ಪಾಟೀಲ್, ರಾಣೇಬೆನ್ನೂರಿನ ಶಾಸಕ ಅನಿಲ್ ಕುಮಾರ್ ಪೂಜಾರ್  ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಹೊನ್ನಾಳಿ ಹೋರಿ ರೇಣುಕಾಚಾರ್ಯ, ಗುರುಮೂರ್ತಿ, ಬಳೀಗಾರ್, ಮೊದಲಾದವರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button