ರಾಜ್ಯ ಸುದ್ದಿಗಳು

ವಿಜೇಂದ್ರನ ಮನವಿಗೆ ಈಶ್ವರಪ್ಪ ತಿರುಗೇಟು ನೀಡಿದ್ದು ಹೇಗೆ?

ಸುದ್ದಿಲೈವ್/ಶಿವಮೊಗ್ಗ

ಈಗಲೂ ಕಾಲ ಮಿಂಚಿಲ್ಲ. ಈಶ್ವರಪ್ಪನವರು ಪಕ್ಷಕ್ಕೆ ಸೇರಿಕೊಳ್ಳಿ. ಸಮಸ್ಯೆ ಇದ್ದರೆ ಹೈಕಮ್ಯಾಂಡ್ ಜೊತೆ ಮಾತನಾಡಿ ಎಂದು ಮನವಿಮಾಡಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರಗೆ ಈಶ್ವರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ ಕಣದಿಂದ ಹಿಂದೆ ಸರಿಯಲಿ ಎಂದು ವಿಜೇಂದ್ರ ಧೈರ್ಯವಿದ್ದರೆ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

ಇಂದು ಶುಭಮಂಗಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ನಿಮ್ಮಣ್ಣನಿಗೆ ಹೇಳು ಈಶ್ವರಪ್ಪ ಗೆಲ್ಲಲ್ಲಿ ಬಿಡು ನೀನು ವಾಪಸ್ ತೆಗೆದುಕೋ ಅಂತಾ ರಾಘವೇಂದ್ರಗೆ ಹೇಳು. ನೀನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು. ಯಾವನು ನಿನಗೆ ಅಧಿಕಾರ ಕೊಟ್ಟಿದ್ದು ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತನಾಡ್ತಾರೆ ಅಂತಾ ಹೇಳೋಕೆ ಎಂದು ಹರಿಹಾಯ್ದರು.

ಎಲ್ಲಾ ಅಧಿಕಾರ ಯಡಿಯೂರಪ್ಪ ಯಡಿಯೂರಪ್ಪ ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು‌ಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಎಲ್ಲರ ನೋವಿಗೆ ಪರಿಹಾರ ಆಗುತ್ತದೆ. ಮೋದಿ ವಿಶ್ವ ನಾಯಕ ಮೋದಿ ಪೋಟೋ ಬಳಸಿಕೊಳ್ಳಬಾರದು ಅಂತಾ ಎಲ್ಲಿಯೂ ಇಲ್ಲ.

ಮೋದಿ ನನ್ನ ಹೃದಯದಲ್ಲಿ ‌ಇದ್ದಾರೆ. ಅವರು ಕೇಸು ಹಾಕಿಕೊಳ್ಳುತ್ತಾರೆಂದೆ ನಾನು ಕೇವಿಯೇಟ್ ಹಾಕಿದ್ದೆನೆ.‌ ರಾಘವೇಂದ್ರ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ತಾರೆ, ಈಗಲೂ ಕಾಲ ಮಿಂಚಿಲ್ಲ ಈಶ್ವರಪ್ಪ ಯೋಚನೆ ಮಾಡಲಿ ವಿಜಯೇಂದ್ರ‌ ಹೇಳಿಕೆಗೆ ಈಶ್ವರಪ್ಪ ಮೇಲಿನಂತೆ ಹೌಹಾರಿದರು.

ಈ ವಿಷಯ ನಿಮ್ಮ ಅಣ್ಣನಿಗೆ ಏಕೆ ಹೇಳಲ್ಲ ತಾಕತ್ ಇಲ್ವಾ? ಏನು ನೀವೆ ಗೂಟ ಹೊಡ್ಕೊಂಡು ಇರಬೇಕಾ? ನಿಮ್ಮಣ್ಣ ಸೋಲುತ್ತಾನೆ ಅಂತಾ ಭಯನಾ? ಏನು ನೀವೆ ಗೂಟ ಹೊಡ್ಕೊಂಡು ಇರಬೇಕಾ? ನಿಮ್ಮಣ್ಣ ಸೋಲುತ್ತಾನೆ ಅಂತಾ ಭಯನ? ನಾನು ಈಗಲೂ ಕೂಡಾ ಬಿಜೆಪಿಯವನು ಎಂದರು.

ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿದ್ದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ಮತ್ತೆ ಪಕ್ಷಕ್ಕೆ ಸೇರಿ ಟಿಕೇಟ್ ತೆಗೆದುಕೊಂಡಿದ್ದಾರೆ. ನಾನೇನು ಹಾಗೆ ಮಾಡಿದ್ದೇನಾ? ನಾನು ಈ ಬಾರಿ 3 ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ. ಗೆದ್ದ ನಂತರ ಬಿಜೆಪಿಗೆ ಮತ್ತೆ ಸೇರುತ್ತೇನೆ. ಮುಂಬರು‌ವ ಕಾರ್ಪೋರೇಷನ್ ಚುನಾವಣೆಗೆ ‌ನಾನೇ ಟಿಕೇಟ್ ‌ಕೊಡೋದು ಎಂದು ಹೇಳಿದರು.

ಶಿವಮೊಗ್ಗ ‌ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನಿಮಗೆ ಅನ್ಯಾಯ ಆಗಿದೆ, ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡ್ತೇವೆ ಅಂತಾ ಮತದಾರರು ಹೇಳ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿದೆ.

ಇದನ್ನೂ ಓದಿ-https://suddilive.in/archives/12301

Related Articles

Leave a Reply

Your email address will not be published. Required fields are marked *

Back to top button