ರಾಜ್ಯ ಸುದ್ದಿಗಳು

ಸರ್ಕಾರಿ ಸಂಸ್ಥೆಗಳಿಂದಲೇ ಮೆಸ್ಕಾಂ ಹಣ ಬಾಕಿ

ಸುದ್ದಿಲೈವ್/ಶಿವಮೊಗ್ಗ

ಶಾಲಾ ಮಕ್ಕಳಿಗೆ ಎರಡು ಮೊಟ್ಟೆ ದಿನಕ್ಕೆ ಹೇಗೆ ಕೊಡಲಾಗುತ್ತಿದೆ? ಮೊಟ್ಟೆ ರೇಟ್ ಹೆಚ್ಚಾಗಿದೆ ಎಂಬ ಪ್ರಶ್ನೆಯನ್ನ  ಜಿಲ್ಲಾ‌ಉಸ್ತುವರಿ ಕಾರ್ಯದರ್ಶಿ ಉಮಾ ಶಂಕರ್ ನೇತೃತ್ವದ ಸಭೆಯಲ್ಲಿ ಡಿಡಿಪಿಐ ಮತ್ತು  ಅಕ್ಷರ ದಾಸೋಹ ಅಧಿಕಾರಿಗಳನ್ನ ಕೇಳಿದರು‌

ಹೇಗೋ ಮ್ಯಾನೇಜ್ ಮಾಡುತ್ತೀವಿ ಎಂದು ಹೇಳಿದ ಡಿಡಿಪಿಐ ಮತ್ತು ಅಕ್ಷರ ದಾಸೊಹ ಅಧಿಕಾರಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ದಿನಾ ಮೊಟ್ಟೆ ನೀಡುವುದು ದುಷ್ಪರಿಣಾಮ ಬೀರುತ್ತದಾ ಎಂಬ ಪ್ರಶ್ನೆಯನ್ನ ಸಭೆಯ ಮುಂದಿಟ್ಟರು.

ಇದಕ್ಕೆ ಉತ್ತರಿಸಿದ  ಆರೋಗ್ಯ ಅಧಿಕಾರಿ ಡಾ.ರಾಜೇಶ್ ಸುಗೀಹಳ್ಳಿ ದಿನಾಲು ಶಾಲಾ ಮಕ್ಕಳಿಗೆ ನೀಡಿದರೂ ತಪ್ಪಾಗದು ಎಂಬ ಸ್ಪಷ್ಠೀಕರಣ ನೀಡಿದ ನಂತರ ಉಮಾಶಂಕರ್  ದಿನಾಲು ಪ್ರತಿ ಮಗುವಿಗೆ ಎರಡು ಮೊಟ್ಟೆ ಕೊಡುವಂತೆ ಸೂಚಿಸಿದರು.

ನಂತರ ಸಭೆಗೆ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡಿದ ಡಿಹೆಚ್ಒ ಡಾ.ಸುರಗೀಹಳ್ಳಿ ಗ್ರಾಮ ಮಟ್ಟದಲ್ಲಿ ಡಿಎಂಪಿ ಆಯಿಲ್ ಹಂಚಲಾಗುತ್ತಿದೆ. ಹಸುಗಳಿಗೂ ಮಂಗನ ಕಾಯಿಲೆಯ ಟಿಕ್ಸ್ ಹತ್ತದಂತೆ ಔಷಧ ಹಂಚಲಾಗುತ್ತಿದೆ.  2019 ರಲ್ಲಿ 24 ಪ್ರಕರಣ ಪತ್ತೆಯಾಗಿ 19 ಸಾವಾಗಿತ್ತು. ಈಗ 14 ಪ್ರಕರಣ ಪತ್ತೆಯಾಗಿದೆ. ಮೆಡಿಸಿನ್ ಇದೆ. ಹಂಚಲಾಗುತ್ತಿದೆ ಎಂದರು.

ಮೆಸ್ಕಾಂನಿಂದ 7 ಗಂಟೆ ನಿರಂತರ ವಿದ್ಯುತ್ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ  ಬರದಲ್ಲಿ ವಿದಯುತ್ ಗಳನ್ನ ಹೇಗೆ ಹಂಚುತ್ತೀರ ಎಂಬ ಜಿಲ್ಲಾ ಉಸ್ಯುವರಿ ಕಾರ್ಯದರ್ಶಿಗಳ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಮೂರು ತಾಲೂಕಿನಿಂದ ಸರ್ಕಾರಿ ಸಂಸ್ಥೆಗಳಿಂದಲೇ 24 ಕೋಟಿ ಹಣ ಬರಬೇಕಿದೆ ಎಂದು  ತಿಳಿಸಿದರು.

ಗ್ರಾಪಂ ನಿಂದ ಹಣ ಕಟ್ಟುತ್ತಿಲ್ಲ ಎಂಬ ಹೇಳಿಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಿಇಒ, ಇಒಗಳಿಗೆ ಕೆಲ ಕಿವಿ ಮಾತುಗಳನ್ನ ಹೇಳಿದ್ದಾರೆ.  ಮೆಸ್ಕಾಂ ಇಲಾಖೆ ಕುಡಿಯುವ ನೀರಿಗೆ ವಿದ್ಯುತ್ ನೀಡಲು ಆಗೊಲ್ಲ ಎನ್ನುವಂತಿಲ್ಲ. ಆದರೆ ಗ್ರಾಪಂ ಮಟ್ಟದ ಹಣವನ್ನ  ಇಒಗಳು ಹಣಕಟ್ಟುವಂತೆ ಕ್ರಮ ಜರುಗಿಸಬೇಕು.  ಪ್ರತಿ ತಿಂಗಳು ಬಾಕಿಯಲ್ಲಿ ಅಲ್ಪಮೊತ್ತವನ್ನ ಕಟ್ಟಲು ಸೂಚಿಸಬೇಕೆಂದು  ತಿಳಿಸಿದರು.

ತಾಲೂಕ್ ಪಂಚಾಯಿತಿಯಲ್ಲಿ ಫಂಡಿಲ್ಲ ಎಂದು ಕೆಲಸ ಮಾಡುವ ಹಾಗಿಲ್ಲ ಎಂಬ ತೀರ್ಮಾನಕ್ಕೆ ಇಒಗಳು ಬರಬೇಡಿ, ಸಿಇಒಗಳಿಗೂ ಸೂಚನರ ನೀಡಿದ ಉಮಾಶಂಕರ್ ತಾಲೂಕಿನಲ್ಲಿ ಬರುವ 40 ಗ್ರಾಪಂ ನ ಮೇಲೆ ಇಒಗಳಿಗೆ ಸೂಪರ್ ವಿಷನ್ ಮಾಡಲು ಸೂಚಿಸಿದರು. ಸರಿಯಾಗಿ ಹಣ ಸಂಗ್ರಹಿಸಿ ಮೆಸ್ಕಾಂ ಹಣ ಕಟ್ಟಲು ಸೂಚಿಸಿದರು.

ಇದನ್ನೂ ಓದಿ-https://suddilive.in/archives/4473

Related Articles

Leave a Reply

Your email address will not be published. Required fields are marked *

Back to top button