ರಾಜಕೀಯ ಸುದ್ದಿಗಳು

ರಾಮಲಲ್ಲನ ವಿಗ್ರಹ ಅನಾವರಣ ಆಗುವ ತನಕ ಅಪ್ಪ ನನ್ನ ಕೆಲಸ ಮೆಚ್ಚಿರಲಿಲ್ಲ-ಶಿಲ್ಪಿ ಅರುಣ್

ಸುದ್ದಿಲೈವ್/ಶಿವಮೊಗ್ಗ

ರಾಮನ ವಿಗ್ರಹ ಎಲ್ಲಿರಿಗೂ ಮೆಚ್ಚಿಗೆ ಆಯಿತಾ ಎಂಬುದಕ್ಕೆ ಉತ್ತರ ಹುಡುಕುತ್ತಾ ಇದ್ದೇನೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ತಿಳಿಸಿದರು.

ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾಸಭಾ, ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘ, ಶ್ರೀಕಾಳಿಕಾ‌ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ, ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿ ಹಾಗೂ ಜಿಲ್ಲಾ ವಿವಿಧ ಸಂಘ‌ಸಂಸ್ಥೆಗಳ ಸಹಯೋಗದೊಂದಿಗೆ ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿಗಳಾದ ಅರುಣ್ ಯೋಗಿರಾಜ್ ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಮ್ಮ ತನ (ಕುಲಕಸುಬು ಕೆತ್ತನೆ) ಎಂದರೆ ಬಹಳ ಇಷ್ಟ. ಶಿಲ್ಪಿ ಕೆತ್ತಿದರೆ ಸಾಲದು ಅದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಇದು ನನಗೆ ಅಯೋದ್ಯ ರಾಮಮಂದಿರದಲ್ಲಿ ಬಾಲರಾಮನ ಕೆತ್ತನೆ ಅನಾವರಣ ಆದನಂತರ ಹುಟ್ಟಿದ ಕುತೂಹಲಕರವಾದ ಪ್ರಶ್ನೆ ಇದೆ ಎಂದರು.

ರಾಮಲಲ್ಲಾನ ವಿಗ್ರಹದ ಕೆತ್ತನೆಯ ಆದೇಶ ಬರುವ ಮುಂಚೆ ಮೊದಲಿಗೆ ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆಲಸ ಮಾಡಿದ್ದೆ. ಶಂಕರಾಚಾರ್ಯರ ವಿಗ್ರಹ ಕೆತ್ತನೆಯ ನಂತರ ತನ್ನ ಜೀವನವೇ ಬದಲಾಯಿತು. ಭಗವಂತ ಅವಕಾಶ ಕಲ್ಲಿಸಿಕೊಡ್ತಾನೆ. ಅದರ ಸದುಪಯೋಗ ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಡೆಯುತ್ತದೆ.

ಶಂಕರಾಚಾರ್ಯರಪ್ರತಿಮೆ ಕೆತ್ತನೆ ಕೆತ್ತುವ ಮೂಲಕ ದಕ್ಷಿಣದಿಂದ ಉತ್ತರಕ್ಕೆ ನಮ್ಮ ಕಲೆ ಪರಿಚಯವಾಯಿತು ಎಂದರು.

ಕಷ್ಟದ ನಂತರ ಸುಖ ಇರುತ್ತದೆ. ಎಷ್ಟೆ ಕಷ್ಟ ಎನಿಸಿದರು ಮಾಡುವ ಕರ್ಮ ಬಿಡಬಾರದು ಕಷ್ಟದ ನಂತರಬರುವುದೆ ಸುಖ ಅದಕ್ಕೆ ನಾನೇ ಉದಾಹರಣೆ ಎಂದ ಶಿಲ್ಪಿ ಯೋಗಿರಾಜ್, ನೂರು ಜನರನ್ನ ಮೆಚ್ಚಿಸುವುದು ಕಷ್ಟ ಆದರೆ 140 ಕೋಟಿ ಜನರಿಗೆ ರಾಮಲಲ್ಲಾನ ಮೂರ್ತಿ ಮೆಚ್ಚಿಗೆ ಆಗುತ್ತಾ ಎಂಬ ಆತಂಕ ಮತ್ತು ಕುತೂಹಲವಿತ್ತು. ಆದರೆ ದೇವರ ಕೃಪೆ ಜನ ಮೆಚ್ಚಿಕೊಂಡರು ಎಂದರು.

ಸನ್ಮಾನ ಸಿಗಲಿದೆ ಎಂಬ ಕಾರಣಕ್ಕೆ ಬಾಲರಾಮನ ವಿಗ್ರಹ ಕೆತ್ತನೆ‌ಮಾಡಲಿಲ್ಲ. ಆದರೆ ಕೆತ್ತನೆಯ ಮೂಲಕ ಜನ ನನನ್ನ ಮೆಚ್ಚಿಕೊಂಡಿದ್ದಾರೆ. 20 ವರ್ಷದಿಂದ ಕೆತ್ತನೆ ಮಾಡಿಕೊಂಡು ಬಂದಿರುವೆ. ಆದರೆ ನಮ್ಮಪ್ಪ ನನ್ನ ಕೆಲಸವನ್ನ ಮೆಚ್ಚಿಕೊಂಡಿರಲಿಲ್ಲ. ಜನ ನಿನ್ನ ತಾತ ಹಾಗೆ ಕೆತ್ತನೆ ಮಾಡ್ತೀಯ ಎನ್ನುತ್ತಿದ್ದರು. ಆದರೆ ತಂದೆ ಒಪ್ಪಿರಲಿಲ್ಲ. ಆದರೆ ರಾಮಲಲ್ಲನ ವಿಗ್ರಹ ಅನಾವರಣಗೊಂಡಾಗ ಅಪ್ಪ ಒಪ್ಪಿಕೊಂಡರು. ತಾತನ ಹೆಸರು ಉಳಿಸಿದೆ ಎಂದರು ಎಂದು ತಿಳಿಸಿದರು.

ಬಹಳಷ್ಟು ಶ್ರದ್ಧೆಯಿಂದ ಹೋಮ್ ವರ್ಕ್ ಮಾಡಬೇಕು. 6 ತಿಂಗಳ ಹೋಮ್ ವರ್ಕ್ 6 ಗಂಟೆಯಲ್ಲಿ ಹೋಮ್ ವರ್ಕ್ ಅನಾವರಣವಾಯಿತು. ಹೆಂಡತಿ ಮತ್ತು ಕುಟುಂಬದ ಜೊತೆ ಕಳೆಯುವ ಸಮಯವನ್ನ ಕಲ್ಲಿನೊಂದಿಗೆ ಕಳೆದಿರುವೆ ಎಂದರು.

ಕೆಲಸಕ್ಕಾಗಿ ಕಾಯ್ತಾ ಇದ್ದೆ. ಕೆಲವರು ಡ್ರಾಯಿಂಗ್ ಎಲ್ಲ ಸ್ವೀಕರಿಸಿ ಬೇರೆಯವರು ಕಡಿಮೆ ದರ ಮಾಡ್ತಾರೆ ಎಂದಾಗ ನೋವಾಗುತ್ತಿತ್ತು. ಆಗ ಬಂದಿದ್ದೆ ಶಂಕರಾಚಾರ್ಯರ ಕೆಲ. ದಿನಕ್ಕೆ 10 ಗಂಟೆಗಳ ಕಾಲ ಅಧ್ಯಾಯನ ಮಾಡ್ತಿದ್ದೆ. ನಂತರ ಕೆತ್ತನೆಯಲ್ಲಿ ಕಳೆಯುತ್ತಿದ್ದೆ ಎಂದು ವಿವರಿಸಿದರು.

ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ಶಿವಸುಜ್ಞಾನ ಸ್ವಾಮೀಜಿ, ಚನ್ನಗಿರಿ ತಾಲೂಕಿನ ವಡ್ನಾಳ್ ಮಟದ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿದ್ದರು.ವಿಶ್ವಕರ್ಮ ಮಹಾಸಭಾದ ನಿರಂಜನ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಗೆ ದೇವಶಿಲ್ಪಿ ಬಿರುದನ್ನ ನೀಡಿ ಗೌರವಿಸಲಾಯಿತು

ಇದನ್ನೂ ಓದಿ-https://suddilive.in/archives/12293

Related Articles

Leave a Reply

Your email address will not be published. Required fields are marked *

Back to top button