ಬೆಳಿಗ್ಗೆ 4 ಗಂಟೆಗೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಸುದ್ದಿಲೈವ್/ಶಿವಮೊಗ್ಗ

ಭರ್ಜರಿ ಮೆರವಣಿಗೆ, ಭರ್ಜರಿ ಜನಸ್ತೋಮದ ನಡುವೆ ಹೊರಟ ಹಿಂದೂ ಮಹಾಸಭಾದ 79 ನೇ ವರ್ಷದ ಗಣಪತಿ ಮೂರ್ತಿಯನ್ನ ಭೀಮನ ಮಡುವಿನಲ್ಲಿ ವಿಸರ್ಜಿಸಲಾಗಿದೆ.
ಸ್ವಾಭಿಮಾನಿ ಹಿಂದೂಗಳ ಮೂರ್ತಿಯಾಗಿರುವ ಹಿಂದೂ ಮಹಾಸಭಾ ಗಣಪತಿಯನ್ನ ನಿನ್ನೆ ಸುಮಾರು 4 ಗಂಟೆ 01 ನಿಮಿಷಕ್ಕೆ ತುಂಗ ನದಿಯಲ್ಲಿ ವಿಸರ್ಜನೆಯಾಗಿದೆ. ಕೋಟೆ ಭೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಭೀಮನ ಮಡುವಿನಲ್ಲಿ ಗಣಪತಿಯನ್ನ ವಿಸರ್ಜಿಸಲಾಗಿದೆ.
ಅನಂತನ ಚತುರ್ಥಿಯ ದಿನವಾದ ನಿನ್ನೆ ಬೆಳಿಗ್ಗೆ ಸುಮಾರು 10-45 ಕ್ಕೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಶಾಸಕ ಚಡನ್ನಬಸಪ್ಪನವರಿಂದ ಚಾಲನೆ ನೀಡಲಾಯಿತು.
ಕೋಟೆ ರಸ್ತೆ, ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಎಎ ವೃತ್ತ, ದುರ್ಗಿಗುಡಿ, ಜೈಲ್ ವೃತ್ತ ಕುವೆಂಪು ರಸ್ತೆ, ಶಿವಮೂರ್ತಿ ನಾಯಕನ ವೃತ್ತ, ಸವಳಂಗ ರಸ್ತೆ, ಮಹಾವೀರ ವೃತ್ತ, ಡಿವಿಎಸ್ ರಸ್ತೆ, ಕಾನ್ವೆಂಟ್ ರೋಡ್, ಬಿಹೆಚ್ ರಸ್ತೆ, ಕೋಟೆ ರಸ್ತೆಯ ಮೂಲಕ ಭೀಮೇಶ್ವರ ದೇವಸ್ಥಾನದ ಹಿಂಭಾಗದ ಭೀಮನ ಮಡುವಿನಲ್ಲಿ ಗಣಪನನ್ನ ವಿಸರ್ಜಿಸಲಾಯಿತು.
ಇದನ್ನೂ ಓದಿ-https://suddilive.in/2023/09/29/ಅಂಬೇಡ್ಕರ್-ಸ್ವಾಭಿಮಾನಿ-ಸಂಘ/
