ರಾಜ್ಯ ಸುದ್ದಿಗಳು
ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಡಿವೈಎಸ್ಪಿಗಳ ವರ್ಗಾವಣೆಯಾಗಿದ್ದು ಇದರಲ್ಲಿ ಕೆಲ ಶಿವಮೊಗ್ಗ ಪೊಲೀಸರ ವರ್ಗಾವಣೆ ನಡೆದಿದೆ.
59 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದೆ. ಅದರಲ್ಲಿ ಶಿವಮೊಗ್ಗ ಸಾಗರ ಗ್ರಾಮಾಂತರ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿ ಕೃಷ್ಣಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ನಗರದ ಶೇಷಾದ್ರಿಪುರಂ (ಹೈಗ್ರೌಂಡ್) ಸಂಚಾರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಎಸ್. ವಿಜಯಲಕ್ಷ್ಮಿ ಅವರನ್ನು ತುಮಕೂರು ಮಹಿಳಾ ಪೊಲೀಸ್ ಠಾಣೆಗೆ, ಗುರುರಾಜ್ ಎನ್. ಮೈಲಾರ್ ಅವರನ್ನು ಹುಬ್ಬಳ್ಳಿ-ಧಾರವಾಡ ಕೇಂದ್ರ ಪೊಲೀಸ್ ಠಾಣೆಗೆ, ರಾವ್ ಗಣೇಶ್ ಜನಾರ್ಧನ್ ಅವರನ್ನು ಬೆಂಗಳೂರು ಜಿಲ್ಲೆಯ ಹೊಸಹಳ್ಳಿಯ ಪೊಲೀಸ್ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
