ರಾಜ್ಯ ಸುದ್ದಿಗಳು

ಗರ್ಭೀಣಿಯರಿಗೆ ಸೀಮಂತ

ಸುದ್ದಿಲೈವ್/ಶಿವಮೊಗ್ಗ

ಅಲ್ಲಿ, ಸುಮಾರು 50 ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀಯರು ಒಟ್ಟಿಗೆ ಸೇರಿದ್ದರು. ಇದರಲ್ಲೇನು ವಿಶೇಷ…? ಗರ್ಭಿಣಿ ಸ್ತ್ರಿಯರು, ಯಾವುದಾದರು ಆಸ್ಪತ್ರೆಗೆ ಹೊದ್ರೆ ನೋಡ್ಬಹುದು ಅಂತಾ ನೀವು ಹೇಳ್ ಬಹುದು. ಆದರೆ, ಇಲ್ಲಿ ಸುಮಾರು, 54 ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀಯರಿಗೆ ಒಟ್ಟಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಬಡ ಹೆಣ್ಣು ಮಕ್ಕಳಿಗೆ ಸೀಮಂತ ಎಂಬುದು ಒಂದು ಕನಸಾಗಿದ್ದು, ಆ ಕನಸ್ಸನ್ನ ಇಲ್ಲಿ ಶಾಶ್ವತಿ ಮಹಿಳಾ ಸಂಘದ ಸದಸ್ಯರು, ನನಸು ಮಾಡುವಲ್ಲಿ ಯಶಸ್ವಿಯಾದರು. ಅರಿಶಿಣ, ಕುಂಕುಮ, ಸೀರೆ, ಹಸಿರು ಬಳೆ, ಹೂವು, ಹಣ್ಣುಗಳು ಇಲ್ಲಿ ರಾರಾಜಿಸಿದವು.

ಹೌದು! ಪ್ರತಿಯೊಬ್ಬ ಸ್ತ್ರೀಯರಿಗೆ ಹೀಗೊಂದು ಕನಸ್ಸು ಇದ್ದೇ ಇರತ್ತೆ. ನಾವು ಕೂಡ ಗರ್ಭೀಣಿಯರಾಗಬೇಕು. ಗಂಡನ ಮನೆಯಲ್ಲಿ, ಸೀಮಂತ ಕಾರ್ಯಕ್ರಮ ಮಾಡಿಕೊಳ್ಳಬೇಕು. ಹಾಗೆ, ಹೀಗೆ ಎಂಬ ಕನಸನ್ನ ಪ್ರತಿಯೊಬ್ಬ ಮಹಿಳೆಯರಲ್ಲೂ ಇದ್ದೇ ಇರುತ್ತೆ. ಅಂತಹದರಲ್ಲಿ ಅನೇಕರಿಗೆ ಈ ಭಾಗ್ಯ ಇರೋದಿಲ್ಲ. ಇಂಥಹವರಿಗಾಗಿಯೇ, ನಗರದ ಶಾಶ್ವತಿ ಮಹಿಳಾ ವೇದಿಕೆ ಸಂಸ್ಥೆ ಸದಸ್ಯರು, ಈ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ, ಗರ್ಭೀಣಿಯರಿಗೆ ಸೀಮಂತ ಹಾಗೂ ಮಡಿಲು ತುಂಬುವ ಕಾರ್ಯಕ್ರಮ ನಡೆಸಲಾಯಿತು. ಅರಿಶಿಣ, ಕುಂಕುಮ, ಸೀರೆ, ಹಸಿರು ಬಳೆ, ಹೂವು ಹಣ್ಣು ಗಳಿಂದ ಗರ್ಭಿಣಿ ಸ್ತ್ರೀಯರಿಗೆ ಹಣ್ಣು ಕಾಯಿಯಿಂದ ಉಡಿ ತುಂಬಿ ಶುಭ ಹಾರೈಸಲಾಯಿತು. ಅರಿಶಿಣ, ಕುಂಕುಮದಿಂದ ಅವರನ್ನು ಸತ್ಕರಿಸಿ, ಬಳೆತೊಡಿಸಿ ಕಾಯಿ ಕುಪ್ಪಸ ನೀಡಿ ವೇದಿಕೆ ಸದಸ್ಯರು ಗೌರವಿಸಿದರು.

ಇನ್ನು ಹೀಗೆ, ಕಾರ್ಯಕ್ರಮವೊಂದರಲ್ಲಿ, ಸಾಮೂಹಿಕವಾಗಿ ಸೀಮಂತ ಮಾಡಿಸಿಕೊಂಡ ಮಹಿಳೆಯರಲ್ಲಿ, ಸಂತಸ ಎದ್ದು ಕಾಣುತ್ತಿತ್ತು. ತಮಗೆ ಈ ಸೌಭಾಗ್ಯ ದೊರೆಯುತ್ತದೆಯೋ ಇಲ್ಲವೋ ಎಂದು ಆತಂಕದಲ್ಲಿದ್ದ ಮಹಿಳೆಯರಿಗೆ, ಇದೊಂದು ಸಮಾಧಾನಕರ ಸಂಗತಿಯಾಗಿತ್ತು. ಹೀಗೆ ಸೀಮಂತ ಆಚರಿಸಿಕೊಳ್ಳುವುದರ ಮೂಲಕ, ಇಲ್ಲಿ ಗರ್ಭಿಣಿ ಸ್ತ್ರೀಯರು ಸಂಭ್ರಮಿಸಿದರು. ಕಾರ್ಯಕ್ರಮದ ಆರಂಭದಲ್ಲಿ, ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವೇದಿಕೆಗೇರಿದ್ದ ಅತಿಥಿಗಳು ಸೇರಿದಂತೆ, ಎಲ್ಲರೂ ಕೆಳಗಿಳಿದು, ಗರ್ಭಿಣಿ ಮಹಿಳೆಯರಿಗೆ, ಅವರು ಕುಳಿತ ಜಾಗದಲ್ಲಿಯೇ, ಸೀಮಂತ ಕಾರ್ಯ ನೆರವೇರಿಸಿದ್ರು. ಈ ವೇಳೆ, ಸೀಮಂತ ಮಾಡಿಸಿಕೊಂಡ ಮಹಿಳೆಯರಲ್ಲಿ, ಆನಂದ ತುಂಬಿ ಹೋಗಿತ್ತು. ಜಾತಿ, ಮತ, ಬೇಧ, ಭಾವಗಳಿಲ್ಲದೇ, ಎಲ್ಲಾ ವರ್ಗದ ಜನರ ಮತ್ತು ಎಲ್ಲಾ ಜಾತಿಯ ಮಹಿಳೆಯರಿಗೆ, ಸೀಮಂತ ಮಾಡಿದ್ದು, ಈ ಅಪರೂಪದ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಸಂಪ್ರದಾಯಬದ್ಧವಾಗಿ, ನಮ್ಮ ಮನೆಗಳಲ್ಲಿ ಮಾಡದ ಸೀಮಂತ ಕಾರ್ಯಕ್ರಮ ಇಲ್ಲಿ ಸಾಮೂಹಿಕವಾಗಿ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ, ಸದಾ ಕಾಲ ವಿಭಿನ್ನ ಕಾರ್ಯಕ್ರಮಗಳಿಂದಲೇ ಜನರ ಮನೆ ಮಾತಾಗಿರುವ ಶಾಶ್ವತಿ ಮಹಿಳಾ ವೇದಿಕೆ ಸದಸ್ಯರು, ಕಳೆದ 15 ವರ್ಷಗಳಿಂದ, ಬಡ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ನಡೆಸುವುದರ ಮೂಲಕ, ಎಲ್ಲರ ಪ್ರೀತಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಏನೇಯಾಗ್ಲೀ, ಹೆಣ್ಣು ಮಕ್ಕಳ ಅಂತರಂಗದ ಮಾತುಗಳನ್ನು ಮಹಿಳಾ ಸಂಘಟನೆ ಸದಸ್ಯರೇ ಅರ್ಥೈಸಿಕೊಂಡು, ಇಂತಹ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಚರಿಸಬೇಕಿದೆ. ಈ ಮೂಲಕ ಬಡ ಮತ್ತು ಅಸಹಾಯಕ ಮಹಿಳೆಯರಿಗೆ ದಾರಿದೀಪವಾಗಬೇಕಿದೆ.

ಡಾ.ಧನಂಜಯ ಸರ್ಜಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/3667

Related Articles

Leave a Reply

Your email address will not be published. Required fields are marked *

Back to top button