ರಾಜಕೀಯ ಸುದ್ದಿಗಳು

ನಿನ್ನೆ ನಡೆದಿದ್ದು ರಾಜಿಕೀಯ ಜಾತ್ರೆ-ಆಯನೂರು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ದಿನ ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದು ಹೋದರು ಎಂಬುದು ಬಿಟ್ಟರೆ ನಗರದ ಜನತಗೆ ಲಾಭ ಆಗಲಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ  ಕಾಂಗ್ರೆಸ್ ಪಕ್ಷವನ್ನ ವಾಗ್ದಾಳಿ ಮಾಡಿದ್ದು ಬಿಟ್ಟರೆ, . ಕಾರ್ಮಿಕ ಸಮಸ್ಯೆ ಬಗೆ ಹರಿಸಲಿಲ್ಲ. ಭದ್ರಾವತಿ ವಿಐಎಸ್ ಎಲ್  ಪುನರ್ ಆರಂಭಿಸುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಸಂಸದರು ಹೇಳಿದ್ದು ಬಿಟ್ಟರೆ ಏನಾದರೂ ಪ್ರಕ್ರಿಯೆ ಆರಂಭವಾಗಿದೆಯಾ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಅಮಿತ್ ಶಾ ಭರಸೆ ಕೊಟ್ಟಿದ್ದರು. ಏನಾದರೂ ಆರಂಭಿಸಿದ್ರಾ? ಮಲೆನಾಡಿನ ಲಕ್ಷಾಂತರ ಕುಟುಂಬ ಅಡಿಕೆ ನಂಬಿಕೊಂಡು ಜೀವನ ನಡೆಸುತ್ತಿದೆ. ಅ ಬಗ್ಗೆ ಮಾತನಾಡಿಲಿಲ್ಲ. ಬಿಸಿಲು ಬೆಂಕಿಯಂತಾಗಿದೆ. ಬರಗಾಲದ ಛಾಯೆ ಮಲೆನಾಡಿನಲ್ಲಿ ದಟ್ಟವಾಗಿದೆ. ಅನುದಾನದ ಬಗ್ಗೆ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ, ಸಂಸದ ರಾಘವೇಂದ್ರ ವೇದಿಕೆಯ ಮೇಲಿದ್ದರೂ ಬರಗಾಲದ ಬಗ್ಗೆ ಮಾತನಾಡಲಿಲ್ಲ. ನಿನ್ನೆ  ರಾಜಕೀಯ ಜಾತ್ರೆ ನಡೆಸಲಾಗಿದೆ. ಇದರ ಬಗ್ಗೆ ಕೇವಲ ಕಾಂಗ್ರೆಸ್ ಬಗ್ಗೆ ಟೀಕಿಸಿದರು. ನಾರಿಶಕ್ತಿ, ದೇವಿಯ ಉಪಾಸಕ ಎಂದು ಹೇಳಿದ್ದಾರೆ. ಈಶ್ವರಪ್ಪನವರು ಬಿಎಸ್ ವೈ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾರೆ. ಬಿಜೆಪಿಯ ಮಹಿಳಾ ಅಭ್ಯರ್ಥಿಯ ವಿರುದ್ದ ಮಾತನಾಡಿದ್ದಾರೆ. ವ್ಯಂಗ್ಯವಾಡಿದ್ದಾರೆ ತಮ್ಮ ಪಕ್ಷದ ಸಚಿವರ ಬಗ್ಗೆ ಮಾತನಾಡಿದಾಗ ಬಿಜೆಪಿ ತಮ್ಮ ಮಹಿಳಾ ಸಚಿವರ ಬಗ್ಗೆ ಮಾತನಾಡದ ಬಗ್ಗೆ ಬಿಜೆಪಿಯ ಮೌನ ಸಹಿಸಲಾಗದು ಎಂದರು.

ಬಿಎಸ್ ವೈ ಕಣ್ಣೀರಿನ ವಿರಣೆ ನೀಡಲಿಲ್ಲ

ಬಿಎಸ್ ವೈ ಮತ್ತು ಕುಟುಂಬದವರ ಬಗ್ಗೆ ಮಾತನಾಡಿದವರ ವಿರುದ್ಧ ಕ್ರಮ ಆಗಲಿಲ್ಲ‌ ಜನಸಂಘ ಕಟ್ಟುವ ವೇಳೆ ಬಿಎಸ್ ವೈ ಶ್ರಮಹಾಕಿದ್ದಾರೆ. ಆದರೆ ಅವರನ್ನ ಅಪಮಾನಿಸಲಾಗಿದೆ. ಅವರು ಸಿಎಂ ಆದಾಗ ರಾಜೀನಾಮೆ ಪಡೆದಿರುವ ಬಗ್ಗೆ ವಿವರಣೆಗಳಿಲ್ಲ. ಕಣ್ಣೀರು ಹಾಕಿದ್ದ ಬಗ್ಗೆ ಸಣ್ಣ ವಿವರಣೆ ಕೊಟ್ಟಿದ್ದರೆ. ಮೋದಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬಹುದಿತ್ತು.

ಮಕ್ಕಳ ವಿರುದ್ಧವೂ ವಾಗ್ದಾಳಿ

ಯಡಿಯೂರಪ್ಪನವರ ಚಾರಿತ್ರ್ಯದ ಬಗ್ಗೆ ಈಶ್ವರಪ್ಪ ಮಾತನಾಡಿದಾಗ ಬಿಜೆಪಿಯ ಯಾವ ಸದಸ್ಯನೂ ಮಾತನಾಡಲಿಲ್ಲ. ಬಿಎಸ್ ವೈಗೆ ಬೆಂಬಲವಿಲ್ಲ. ಅವರ ಮಕ್ಕಳುಗಳು ರಕ್ಷಣೆಗೆ ಬರಲಿಲ್ಲ. ತಂದೆಯ ಆಸ್ತಿ ಮತ್ತು ವಾರಸುದಾರರಾಗ ಬೇಕು ಎಂಬುದು ಮಕ್ಕಳು ನಡೆದುಕೊಙಡಿದ್ದಾರೆ. ನಾನೇ ಬಿಜೆಪಿಯಲ್ಲಿದ್ದರೆ ಅವರ ರಕ್ಷಣೆಗೆ ಮುಂದಾಗುತ್ತಿದ್ದೆ. ಈಶ್ವರಪ್ಪನವರ ಚಳಿ ಬಿಡುಸುತ್ತಿದ್ದೆ. ಈ ಬಾರಿ ಬಿಎಸ್ ವೈ ರಾಜಕೀಯ ಅನಾಥರಾಗಿದ್ದಾರೆ ಎಂದು ಹೇಳಿದರು.

ಬಿಎಸ್ ವೈ ಹೆಸರಿನ ಆಸ್ತಿ ಬೇಕು ಅವರ ಮಕ್ಕಳಿಗೆ. ಬಿಎಸ್ ವೈ ವಿರುದ್ಧ ಈಶ್ವರಪ್ಪನವರು ಉಚ್ಚಾಟಿಸುತ್ತೇನೆ ಎಂದು ಮೋದಿಯೂ ಘೋಷಿಸಲಿಲ್ಲ. ಮಹಾಭಾರತದ ಭೀಷ್ಮನ ರೀತಿ ತಟಸ್ಥರಾಗಿದ್ದಾರೆ. ಹರಿದ ಬಾಯಯನ್ನ ಹೊಲಿಯವೇಕು ಎಂದು ಬಿಜೆಪಿಯಿಂದ ಹೊರಬಂದವನು ನಾನು. ರೈತರ, ಮುಳುಗಡೆಯವರ ಬಗ್ಗೆ, ಕಾರ್ಮಿಕಸಮರ ಸಮಸ್ಯೆಯೂ ಬಗೆಹರಿಲಿಲ್ಲವೆಂದು ದೂರಿದರು.

ಸಿಮ್ಸ್ ಆರಂಭವಾಗಿದ್ದು ಯಾವಾಗ

ಸಿಮ್ಸ್ ಕಾಲೇಜು ನಮ್ಮ ಕಾಲದ್ದು ಎಂದು ಸಂಸದರು ಹೇಳುತ್ತಾರೆ. ಅದು ಆರಂಭವಾಗಿದ್ದು ಧರ್ಮಸಿಂಗ್ ಕಾಲದ್ದು ಎಂದು ನೆನಪಿಸಿದರು. ಮೋದಿಗೆ ಬಿಜೆಪಿ ಸರ್ಕಾರ ವಜಾವಾಗಿದ್ದೇ ಈಶ್ವರಪ್ಪನವರಿಂದ ಎಂದು ಗೊತ್ತಾಗದೆ ಇರುದಮವುದು ದುರಂತ ಎಙದು ಬಣ್ಣಿಸಿದರು.

ಭ್ರಷ್ಠಾಚಾರದ ತಂಡವನ್ನ ಇಟ್ಟುಕೊಂಡ ಬಿಜೆಪಿ ಕಾಂಗ್ರೆಸ್ ನ್ನ ಎಟಿಎಂ ಎಂದು ಹೇಳಲು‌ ಮೋದಿಗೆ ನೈತಿಕ ಹಕ್ಕು ಏನಿದೆ ಎಂದು ಪ್ರಶ್ನಿಸಿದ ಆಯನೂರು, ಸಂಸದರು ಮೂರು ಬಾರಿ ಎಂಪಿ ಆಗಿದ್ದು ತಾವು ಮಾಡಿರುವ ತಪ್ಪುಗಳನ್ನ ಕಾಂಗ್ರೆಸ್ ಮೇಲೆ ದೂರಿದ್ದಾರೆ. ಕೋಡ್ ಆಫ್ ಕಂಡಕ್ಟ್ ಇದ್ದರೂ ತಾವು ಹೇಳಿದ ಬೇಡಿಕೆ ಮಾತನಾಡಲು ಅವಕಾಶ ಇತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಆಯನೂರು ಒಬ್ಬ ರಾಜಕಾರಣಿ, ಒಂದು ರಾಜಕೀಯ ಪಕ್ಷಕ್ಜೆ ಬೇಡಿಕೆಯನ್ನ ಹೇಗೆ ಪ್ರಸ್ತಾಪಿಸಬೇಕು ಎಂಬುದು ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಈಶ್ವರಪ್ಪನವರಿಗೆ ನನ್ನ ಮತ

ಖಂಡಿತ ನಾನು ಅವರಿಗೆ ಮತಹಾಕುವೆ. ಅವರು ಆರಂಭ ಶೂರ. ಅವರು ಮೊದಲು ಹೋಗಿಬರ್ತಾರೆ. ಅವರ ಕುಟುಂಬದ ರಕ್ಷಣೆಗೆ ಈಡಾಡುತ್ತಿರುವ ಮನುಷ್ಯ ಅವರಿಎ ರಾಜಕೀಯ ಗುಂಡಿಗೆ ಇಲ್ಲ.‌ ನಾಮಪತ್ರ ವಾಪಾಸ್ ಪಡೆಯದಿದ್ದರೆ ನಿಮ್ಮ‌ಮೊಕದ ಮೇಲಿನ ಮೀಸೆಗೆ ಅರರ್ಥವಿದೆ ನಾನೇ ತಪ್ಪು ತಿಳಿದುಕೊಂಡಿರುವೆ ಎಂದು ಹೇಳುತ್ತಿದ್ದೆ ಎಂದರು.

ಮಕ್ಕಳಿಗಾಗಿ ಹೋರಾಡಿದ್ದಾರೆ

ಮುಂದುವರೆದ ಜಾತಿಯವರಾದ ಬಿಎಸ್ ವೈ ಮತ್ತು ಶಂಕರಮೂರ್ತಿ ಅವರು ಸಹ ಹೋರಾಡಿದ್ದು ಅವರ ಮಕ್ಕಳ ಪರವಾಗಿಯೇ ಕೆಲಸ ಮಾಡಿದವರು. ಆದರೆ ಹಿಂದುಳಿದ ಜಾತಿಯ ಈಶ್ವರಪ್ಪನವರು ಅವರ ಮಗನಿಗಾಗಿ ಹೋರಾಡುತ್ತಿದ್ದಾರೆ. ತಪ್ಪೇನಿದೆ ಎಂದರು.

ತಮ್ಮ  ಆಂತರಿಕಸಿದ್ದತೆ ಮಾಡಿಕೊಂಡಿದ್ದೇವೆ. ನಾಳೆ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಪಾಕ್ ಪರ ಘೀಷಣೆ ಬಿಜೆಪಿಯವರೂ ಕೂಗಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೂಲಿಕಾರರ, ಬಡವರ ಬಗ್ಗೆ ಅಶಕ್ತರ, ನಿರುದ್ಯೋಗದ ಮಾತು ಮೋದಿಯಿಂದ ಹೊರಬಂತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ-https://suddilive.in/archives/11010

Related Articles

Leave a Reply

Your email address will not be published. Required fields are marked *

Back to top button