ಉದ್ಯೋಗ ಸುದ್ದಿಗಳು
ನೇಮಕಾತಿ ಮುಂದೂಡಿಕೆ
ಸುದ್ದಿಲೈವ್/ಶಿವಮೊಗ್ಗ
ಆರೋಗ್ಯ ಇಲಾಖೆಯಲ್ಲಿ ಕರೆಯಲಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ (ವೈದ್ಯರು, ತಾಲ್ಲೂಕು ಆಶಾ ಮೇಲ್ವಿಚಾರಕರು, ಅಡಿಯೋಮೆಟ್ರಿಕ್ ಅಸಿಸ್ಟೆಂಟ್, DEIC Manager) ಆಹ್ವಾನಿಸಿರುವ ಹುದ್ದೆಯ ನೇಮಕಾತಿಯ ಪ್ರಕ್ರಿಯೆಯನ್ನ ಮುಂದೂಡಲಾಗಿದೆ.
ಮಾ.12 ರಂದು ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಅಡಿ ಜಾಹೀರಾತು ನೀಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಲ್ಲಿರುವ ಪ್ರಯುಕ್ತ ತಾತ್ಕಾಲಿಕವಾಗಿ ಮುಂದುಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು.
ಇದನ್ನೂ ಓದಿ-https://suddilive.in/archives/11003