ಸ್ಥಳೀಯ ಸುದ್ದಿಗಳು

ರಾಮನ ವಿಷಯ ಬಿಜೆಪಿಗೆ ಈ ಬಾರಿ ತಿರುಗು ಬಾಣವಾಗಲಿದೆ-ಸಚಿವ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ರಾಮ ಈಗ ಓಡಿ ಹೋಗಿ ಬಿಟ್ಟಿದ್ದಾನೆ. ರಾಮನೇ ಒಳಗಡೆಯಿಂದ ಬೀಗ ಹಾಕಿಕೊಂಡು ಹೋಗಿದ್ದಾನೆ. ಈ ಬಾರಿ ರಾಮನ ವಿಷಯ ಬಿಜೆಪಿಗೆ ತಿರುಗುಬಾಣ ಆಗ್ತಾನೆ ಎಂದು ಸಚಿವ ಮಧು ಬಂಗಾರಪ್ಪ ಆರೋಪಿಸಿದರು.‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷ ಶಿವಮೊಗ್ಗದಲ್ಲಿ ಏನು ಅಭಿವೃದ್ಧಿ ಆಗಿದೆ. ವಿಐಎಸ್ ಎಲ್ ಉಳಿಸುವ ಸಲುವಾಗಿ ಗೀತಾ ಸ್ಪರ್ಧೆ ಮಾಡಿದ್ದಾರೆ. ಶಿವಮೊಗ್ಗದ ಜನ ಗೀತಕ್ಕನ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಈ ಬಾರಿ ಚುನಾವಣೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದೆ ಎಂದರು.

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಅವ್ಯವಹಾರದ ಬಗ್ಗೆ ತನಿಖೆಗೆ ಸಿಎಂ ಪತ್ರ ಬರೆದಿದ್ದಾರೆ. ಈ ಸರಕಾರ ಐದು ವರ್ಷ ಇರುತ್ತದೆ. ಯಾರೇ ತಿಪ್ಪರಲಾಗ ಹಾಕಿದರೂ ಈ ರಾಜ್ಯ ಸರಕಾರವನ್ನು ಕೆಡವಲು ಆಗಲ್ಲ ಎಂದರು.

ಗ್ಯಾರಂಟಿ ಯೋಜನೆ ನಿಲ್ಲಿಸಲು ಆಗಲ್ಲ. ಬಿಜೆಪಿಯವರು ಮಕ್ಮಲ್ ಟೋಪಿ ಅಂತಾ ಜನರಿಗೆ ಗೊತ್ತಿದೆ. ಹಾಸನದ ವಿಷಯದ ಬಗ್ಗೆ ಮಾತನಾಡಲ್ಲ, ಕಾನೊನು ಮಾತನಾಡ್ತದೆ:

ನಟ ಶಿವಣ್ಣ ಮಾತು

ನಟ ಶಿವರಾಜ ಕುಮಾರ್ ಮಾತನಾಡಿ,  ಕಾಂಪಿಟೇಷನ್ ಆರೋಗ್ಯಕರವಾಗಿರಬೇಕು. ಗೀತ ಸ್ಪರ್ಧೆ ಮಾಡಿದ್ದಾರೆ, ಬೇರೆಯವರು ಸ್ಪರ್ಧೆ ಮಾಡಿದ್ದಾರೆ. ಇಬ್ಬರಲ್ಲಿ ಯಾರಾದರೊಬ್ಬರು ಗೆಲ್ಲಬೇಕು. ನನ್ನ ಪ್ರಕಾರ ಹಿಂದುತ್ವ ಅಂದರೆ ಹಿಂದುಳಿದವರನ್ನು ಮೇಲೆತ್ತುವುದು ಎಂದರು.

ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಕಾಣ್ತಿದೆ. ಜನರು ಪ್ರೀತಿ ತೋರಿಸುತ್ತಿದ್ದಾರೆ. ಜನರ ಪ್ರೀತಿಯನ್ನು ಫುಲ್ ಫಿಲ್ ಮಾಡಬೇಕು ಅಷ್ಟೇ ಎಂದರು.

ಗೀತ ಶಿವರಾಜ್ ಕುಮಾರ್ ಮಾತು

ಕ್ಷೇತ್ರದಲ್ಲಿ ಎಲ್ಲಾ ಕಡೆ ಪ್ರಚಾರ ಮಾಡಿದ್ದೇವೆ. ಪ್ರಚಾರಕ್ಕೆ ಹೋದ ಕಡೆ ಜನರು ಪಾಸಿಟಿವ್ ಆಗಿದ್ದರು. ಈ ಬಾರಿ ನಾನು ಗೆಲ್ಲುವ ವಿಶ್ವಾಸ ಇದೆಮಹಿಳೆಯರು ಹೆಚ್ಚಿನ ಬೆಂಬಲ ಕೊಡ್ತಿದ್ದಾರೆ. ಸ್ಥಳೀಯ ಮುಖಂಡರು ಬಹಳ ಸಹಕಾರ ನೀಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ತಿಳಿಸಿದರು.

ಪ್ರಚಾರಕ್ಕೆ ಹೋದ ಕಡೆ ಜನರು ಎಲ್ಲಾ ಕಡೆ ಸಮಸ್ಯೆ ಹೇಳ್ತಿದ್ದರು. ಗೆದ್ದು ಬಂದರೆ ಎಲ್ಲಾ ಸೌಲಭ್ಯ ಸುಲಭವಾಗಿ ಸಿಗುವ ಹಾಗೆ ಮಾಡ್ತೇನೆ. ಈ ಚುನಾವಣೆಯಲ್ಲಿ ಯಾವುದೇ ನೆಗೆಟಿವ್ ಅಂಶ ಇಲ್ಲ, ಎಲ್ಲವೂ ಪಾಸಿಟಿವ್ ಅಂಶಗಳೇ ಎಂದ ಅವರು ಶಿವಮೊಗ್ಗದ ಜನರ ಪರ್ ಕ್ಯಾಪಿಟ ಇನ್ ಕಂ ಹೆಚ್ಚಿಸಬೇಕು ಮತ್ತು ಕಾರ್ಖಾನೆ ಪುನರಾರಂಭವನ್ನ ನಾನು ಗೆದ್ದು ಬಂದ ನಂತರ ಮಾಡಲಿದ್ದೇನೆ ಎಂದರು.

ಲೀಡ್ ಬಗ್ಗೆ ನನಗೆ ಗೊತ್ತಿಲ್ಲ, ನಾನು ಗೆಲ್ಲುತ್ತೇನೆ ಅಷ್ಟೇನಾನು ಎದುರಾಳಿ ಯಾರು ಏನು ಎಂಬುದು ಮುಖ್ಯ ಅಲ್ಲ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/14256

Related Articles

Leave a Reply

Your email address will not be published. Required fields are marked *

Back to top button