ರಾಜಕೀಯ ಸುದ್ದಿಗಳು

ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರತೆ ಕಾಣ್ತಾ ಇಲ್ಲ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ಬರ ಅಧ್ಯಾಯನ ಸಮಿತಿ ಇಂದು ಶಿಕಾರಿಪುರ ಮತ್ತು ಸೊರಬ ತಾಲೂಕು ಭೇಟಿ ನೀಡಲಿದ್ದು,  ನಾಳೆ ಸಿರಸಿ ಸಿದ್ದಾಪುರದಲ್ಲಿ ಬರ‌ಅಧ್ಯಾಯನ ನಡೆಯಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಟ್ಟ ಪರಿಸ್ಥಿತಿ 50 ವರ್ಷದ ಹಿಂದೆ ಇತ್ತು.ಬರವನ್ನ ಎದುರಿಸಲು ಸ್ಪಷ್ಟ‌ನೀತಿ ಅಥವಾ ಗಂಭೀರತೆ ಸರ್ಕಾರದಲ್ಲಿ ಕಾಣ್ತಾ ಇಲ್ಲ. ಯಾವುದೇ ನಂತ್ತಿಗಳು ಗ್ಯಾರೆಂಟೆಯಲ್ಲಿ ಸಮಯ ಕಳೆತುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಗಮನಕೊಡದೆ ಬೇರೆ ವಿಷಯಕ್ಕೆ ಒತ್ತುಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಎನ್ ಡಿ ಆರ್ ಫಂಡ್ ರಾಜ್ಯ ಖಜಾನೆಗೆ ಬಙದು ಬಿದ್ದಿದೆ. ಸಿಎಂ 7 ಗಂಟೆ ವಿದ್ಯುತ್ ನೀಡುವುದಾಗಿ ಹೇಳುತ್ತಿದ್ದಾರೆ. ಜೂನ್ ಜುಲೈ ನಲ್ಲಿ 10 ಗಂಟೆ ವಿದ್ಯುತ್ ನೀಡಬೇಕಿತ್ತು. ಕಾಡುಪ್ರಾಣಿಗಳು ನೀರಿಗಾಗಿ ಪೇಟೆಗೆ ಬರುತ್ತಿರುವ ಉದಾಹರಣೆ ಇದೆ. ಆಗ 2-3 ಗಂಟೆ ವಿದ್ಯುತ್ ನೀಡಿ ಈಗ 7 ಗಂಟೆ ವಿದ್ಯುತ್ ನೀಡುವುದಾಗಿ ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೈತರನ್ನ ಆತ್ಮಹತ್ಯೆಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯುತ್ ಕ್ಷಾಮವನ್ನ ನೀಗಿಸುವ ಕ್ರಮ ರಾಜ್ಯ ಸರ್ಕಾರದಲ್ಲಿ ಇಲ್ಲ. 2016 ರಲ್ಲಿ ಅಕ್ರಮ ಸಕ್ರಮದಲ್ಲಿ ಬೋರ್ ಗಳನ್ನ ಸಕ್ರಮ ಮಾಡಲು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದೆ 18 ಸಾವಿರ ವಿದ್ಯುತ್ ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಅಕ್ರಮ ಸಕ್ರಮಕ್ಕಾಗಿ 7-8 ವರ್ಷ ರೈತರಿಗೆ ಕಾದಿದ್ದಾರೆ. ಈಗ ಹಳೇ ಸ್ಕೀಮ್ ತೆಗೆದು ಸೋಲಾರ್ ಗೆ ಹೋಗಬೇಕು ಎಂದು ಸರ್ಕಾರ ಹೇಳಿದೆ. ಇದು ಎಸ್ಟರ ಮಟ್ಟಿಗೆ ಸರಿ ಎಂದರು. .

15-20 ಸಾವಿರದಲ್ಲಿ ಬೋರ್ ಗೆ ವಿದ್ಯುತ್ ಪಡೆಯಬೇಕಿದ್ದ ರೈತ ಒಂದು ಲಕ್ಷ ವೆಚ್ಚಮಾಡಿ ಸೋಲಾರ್ ಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 7 ತಾಲೂಕಿನಲ್ಲಿ 41530 ಹೆಕ್ಟೇರ್ ಭತ್ತ ನಾಟಿ ಮಾಡಿದ್ದು ಬರದಿಂದ  ಹಾಳಾಗಿದೆ. 192 ಕೋಟಿ ಹಣ ನಷ್ಟವಾಗಿದೆ. ರೈತನಿಗೆ ಕೈಗೆ ಬಂದ ತುತ್ತು ಬಾರದಂತಾಗಿದೆ. ಸರಿಯಾದ ವಿದ್ಯುತ್ ಕೊಟ್ಟಿದ್ದರೆ ಭತ್ತ ಉಳಿಸಬಹುದಿತ್ತು. 38240 ಹೆಕ್ಟೇರ್ ಮೆಕ್ಕೇಜೋಳ  ಹಾಳಾಗಿದೆ. 230 ಕೋಟಿ ರೀ. ಹಣ ನಷ್ಟವಾಗಿದೆ. 423 ಕೋಟಿ ಎರಡೂ ಬೆಳೆ ಹಾಳಾಗಿದೆ ಎಂದರು‌

ಎನ್ ಡಿಆರ್ ಎಫ್ 5 ನೇ 1 ಭಾಗ ಪರಿಹಾರ ಬರಬೇಕಿತ್ತು. 80.70 ಕೋಟಿ ಹಣ ಬರಬೇಕಿತ್ತು. 2021-22 ರಲ್ಲಿ ಮಳೆ ಆಶ್ರೀತ ಜಮೀನಿಗೆ   ಕೇಂದ್ರ ಮತ್ತು ರಾಜ್ಯ 13600 ರೂ. ನೀರಾವರಿಗೆ 25 ಸಾವಿರ  ಕೊಡಲಾಗುತ್ತಿತ್ತು.ಈ ಬಾರಿ ಯೂ ಕೇಂದ್ರ ಸರ್ಕಾರ ಹೆಚ್ಚಿಗೆ ಮಾಡಿದೆ. ಕಳೆದಬಾರಿಗಿಂತ ಮಳೆ ಆಶ್ರೀತ ಪ್ರದೇಶಕ್ಕೆ ಕೇಂದ್ರ ಕಳೆದ ಬಾರಿಗಿಂತ ಹೆಚ್ಚು ಮಾಡಿದೆ ರಾಜ್ಯ ಸರ್ಕಾರ ಈ ಬಾರಿ ಕಳೆದಬಾರಿ ನೀಡಬೇಕಿದ್ದ ಹಣವನ್ನ ಕಡಿಮೆ ಮಾಡಿದೆ. ಈ ವ್ಯತ್ಯಾಸವನ್ನ ಸರಿಪಡಿಸಬೇಕು ಎಂದು ಆಗ್ರಹಿಸಿದರು.

2014 ರಲ್ಲಿ 2250 ಕೋಟಿ 2023-24 ಕ್ಕೆ 13500 ಕೋಟಿ ಹಣ ನೀಡಿದೆ ಹಣ ಹಂಚಿಕೆ ಎನ್ ಎ‌ಅವಧಿಯಲ್ಲಿ ಯುಪಿಯೆ ಸರ್ಕಾರಕ್ಕಿಂತ ಹೆಚ್ಚಿಗೆ ಕೊಟ್ಟರೂ ಜನರ ಮುಂದೆ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ರಾಜಕೀಯ ಮಾಡುತ್ತಿದೆ ಎನ್ ಡಿಆರ್ ಎಫ್ ನಾರ್ಮ್ಸ್ ಪ್ರಕಾರ ಹಣ ಹಂಚಿ ಎಂದರು. ತೀರ್ಮಾನ ತೆಗೆದುಕೊಳ್ಳದಿದ್ದರೆ ಬಿಜೆಪಿ ಬೀದಿಗೆ ಇಳಿದು ಪ್ರತಿಭಟನೆ ಮಾಡಲಿದೆ ಎಂಧರು.

ಮೇವು ಸಂಗ್ರಹಿಸಿದಲ್ಲಿ ಸರ್ಕಾರ ಖರೀದಿಸುವ ಬಗ್ಗೆ ಸಗಪಷ್ಟತೆ ಬೇಕು. ಬರಬಿತ್ತು ಮುಂದಿನ ದಿನಗಳಲ್ಲಿ ರೈತ ಏನು.ಮಾಡತ್ತಾನೆ ಎಂಬ ಸ್ಪಷ್ಟತೆ ಬೇಕು. ತಜ್ಞರ ತಂಡವನ್ನ ಸ್ಥಳಕ್ಕೆ ಕಳುಹಿಸಿ ವರದಿ ಮಾಡಬೇಕಿದೆ.

ಕ್ಯಾಪ್ಟಸೈನಿಕರು ಫೀಲ್ಡ್ ಗೆ ಇಳಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬರ ಅಧ್ಯಾಯನ ನಡೆಯಲಿದೆ ಎಂದರು.

ಶಾಸಕ ಚೆನ್ನಬಸಪ್ಪ, ಎಂಎಲ್ ಸಿಗಳಾದ ಡಿ.ಎಸ್ ಅರುಣ್, ರುದ್ರೇಗೌಡ, ಬಿಜೆಪಿಯ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಧುರೀಣರಾದ ಗಿರೀಶ್ ಪಾಟೀಲ್ ಮೋನಪ್ಪ ಭಂಡಾರಿ, ನವೀನ್ ಹೆದ್ದೂರು ಕೃಷ್ಣೋಜಿ ರಾವ್ ವಿನ್ಸೆಂಟ್, ಭಾನುಪ್ರಕಾಶ್, ಅಶೋಕ್ ನಾಯ್ಕ್, ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/2763

Related Articles

Leave a Reply

Your email address will not be published. Required fields are marked *

Back to top button