ರಾಜಕೀಯ ಸುದ್ದಿಗಳು

ಬಿಜೆಪಿ ಯುವಮೋರ್ಚಾದ ಮೂವರಿಗೆ ನೋಟೀಸ್-ಯುವನಿಧಿ ಕುರಿತು ಹರಿಕೃಷ್ಣ ಹೇಳಿದ್ದೇನು?

ಮೂರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಗೆ ಜಿಲ್ಲಾಡಳಿತ ನೋಟೀಸ್ ನೀಡಿದೆ. ಸುಹಾಸ್ ಶಾಸ್ತ್ರಿ, ದಿನೇಶ್ ಗೌಡ, ಮತ್ತು ಚಿದಾನಂದ ಮೂರ್ತಿಗೆ ನೋಟೀಸ್ ನೀಡಲಾಗಿದೆ.

ಸುದ್ದಿಲೈವ್/ಶಿವಮೊಗ್ಹ

ಕಾಂಗ್ರೆಸ್ ಗ್ಯಾರೆಂಟಿಯಲ್ಲಿ ಒಂದಾಗಿರುವ ಯುವನಿಧಿ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಇದು ಶಿವಮೊಗ್ಗದ ಪದವಿಧರರಿಗೆ ಅನುಕೂಲವಿಲ್ಲ ಎಂದು ಬಿಜೆಪಿ ಯುವಮೋರ್ಚಾದ ಜಿಲ್ಲಾ ಅಧ್ಯಕ್ಷ ಹರಿಕೃಷ್ಣ ಆರೊಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಬಿಟಿಯ ಪ್ರೋಸೆಸ್ ನಲ್ಲಿ ಕುವೆಂಪು ವಿವಿಯ ಒಬ್ಬವಿದ್ಯಾರ್ಥಿಯೂ ಬರೋದಿಲ್ಲ. ಕುವೆಂಪು ವಿವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಹೊರಬೀಳಲಿದೆ. ಯೋಜನೆಯ ಪ್ರಕಾರ ಪದವೀಧರರಾಗಿ 6 ತಿಂಗಳ ನಂತರ ಹಣಬರುತ್ತದೆ.‌ ಆದರೆ ಈಗ ಯಾಕೆ ಕಾರ್ಯಕ್ರಮಕ್ಕೆ ಕರೆಯುತ್ತಿದ್ದೀರಿ. ಇದರಿಂದ ಯಾರಿಗೆ ಅನುಕೂಲವಾಗಲಿದೆ ಎಂದು ದೂರಿದರು.

ಯುವ ವಿದ್ಯಾರ್ಥಿಗಳ ಪರವಾಗಿ ಬಿಜೆಪಿ ಯುವಮೋರ್ಚಾ ನಿಲ್ಲಲಿದೆ ಎಂದ ಹರಿಕೃಷ್ಣ, ಕಾಂಗ್ರೆಸ್ ನಾಲ್ಕು ಗ್ಯಾರೆಂಟಿಯನ್ನ ಅರ್ದಂಬರ್ಧ ಜಾರಿ ನೀಡಿತ್ತು. ಆದರೆ ಬಿಜೆಪಿ ಒತ್ತಾಯದಿಂದ ಕಾಂಗ್ರೆಸ್ ಗ್ಯಾರೆಂಟಿಯನ್ನ‌ ಸರಿಯಾಗಿ ಜಾರಿಗೊಳಿಸಿದೆ.

ವಿವೇಕಾನಂದರ ಜಯಂತಿಯ ದಿನ ಪ್ರಿಯಾಂಕ ಗಾಂಧಿಯರ ಹುಟ್ಟು ಹಬ್ಬವಿದೆ. ಆದರೆ ಕಾಂಗ್ರೆಸ್ ಪ್ರಿಯಾಂಕ ಗಾಂಧಿಯ ಹುಟ್ಟುಹಬ್ಬವನ್ನ ಬಿಂಬಿಸದೆ ವಿವೇಕಾನಂದ ಹುಟ್ಟುಹಬ್ಬವನ್ನ‌ ಹೆಚ್ಚಾಗಿ ಪ್ರಚಾರಕ್ಕೆ ತಂದಿದೆ. ಇದು ಕಾಂಗ್ರೆಸ್ ಗುಲಾಮಗಿರಿಯಿಂದ ಹೊರಬರುತ್ತಿರುವ ಸಂಖೇತವಾಗಿದೆ.

ಸಾಂಸ್ಕೃತಿಕ ಆಂಧೋಲನದ ಮೊದಲ ಹೆಜ್ಜೆಯನ್ನ ಕಾಂಗ್ರೆಸ್ ಇಟ್ಟಿದೆ. ಆದರೆ ಬಿಜೆಪಿ ಯಾವುದೇ ಅಭಿವೃದ್ಧಿಗೆ ವಿರೋಧವಿಲ್ಲ ಆದರೆ ಗ್ಯಾರೆಂಟಿಯ ಅನುಷ್ಠಾನಕ್ಕೆ ವಿರೋಧವಿದೆ ಎಂದು ಅವರು ದೂರಿದರು.

ಬಿಜೆಪಿಯುವ ಮೋರ್ಚಾದ ಕಾರ್ಯಕರ್ತರಿಗೆ ನೋಟಿಸ್

2017 ರಲ್ಲಿ ಸಿಎಂ ಸಿದ್ದರಾಮಯ್ಯನವರು ಶಿವಮೊಗ್ಗಕ್ಕೆ ಬಂದಾಗ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿತ್ತು. ಈ ವಿಡಿಯೋವನ್ನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಜ.12 ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಸುಸ್ವಾಗತ ಎಂದು ಉಲ್ಲೇಖಿಸಿ ವೈರಲ್ ಮಾಡಲಾಗಿತ್ತು.

ಈ ಸಂಬಂಧ ಮೂವರು ಯುವಮೋರ್ಚದ ಪದಾಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಕಾಂಗ್ರೆಸ್ ಇದರಿಂದ ಬಿಜೆಪಿಯ ಹೋರಾಟವನ್ನ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹರಿಕೃಷ್ಣ ಆಗ್ರಹಿಸಿದ್ದಾರೆ.

ಇದನ್ನು ಓದಿ-https://suddilive.in/archives/6529

Related Articles

Leave a Reply

Your email address will not be published. Required fields are marked *

Back to top button