ರಾಜಕೀಯ ಸುದ್ದಿಗಳು

ತಲೆಹರಟೆ ಭಗವಾನ್ ಜನಾಂಗೀಯ ನಿಂದನೆ ಅಡಿ ಬಂಧಿಸಬೇಕು-ಆರಗ ಗುಡುಗು

ಸುದ್ದಿಲೈವ್/ತೀರ್ಥಹಳ್ಳಿ

ಒಕ್ಕಲಿಗ ಸಮುದಾಯದ ವಿರುದ್ದ ಸಾಹಿತಿ‌ ಭಗವಾನ್ ಅವಹೇಳನಕಾರಿ ಹೇಳಿಕೆ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮುಗಿಬಿದ್ದಿದ್ದಾರೆ. ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವೇಳೆ ಭಗವಾನ್ ಎಂಬ ತಲೆಹರಟೆ, ಸ್ಬಯಂ‌ ಘೋಷಿತ ಬುದ್ದಿಜೀವಿ ಆಡಿದಂತಹ ಮಾತು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ ಎಂದು ಗರಂ ಆಗಿದ್ದಾರೆ.

ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು  ಒಕ್ಕಲಿಗರು ಸಂಸ್ಕೃತಿಹೀನರು‌ ಎಂದು ಹೇಳುವ ಮೂಲಕ ಪ್ರೊ.ಭಗವಾನ್ ಜನಾಂಗೀಯ ನಿಂದನೆ ಮಾಡಿದ್ದಾನೆ. ಅನೇಕ ಸಾರಿ ಅರೆಸ್ಟ್ ಮಾಡಿದ್ದಾರೆ. ಆದರೂ ಇವನ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ ಎಂದು ಆಗ್ರಹಿಸಿದರು.

ಮಹಿಷಾ ದಸರ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ!

ಸರಕಾರದ ಸಹಕಾರದಿಂದ ಮಹಿಷಾ ದಸರಾ ಮೈಸೂರಿನಲ್ಲಿ ನಡೆದಿದೆ. ಇಂತಹ ತಲೆತಿರುಕರಿಗೆ ಸರಕಾರ ಮಾತನಾಡಲು ಅವಕಾಶ ಕೊಟ್ಟಿದೆ.ಇದರ ಹಿಂದೆ ಕಾಂಗ್ರೆಸ್ ಸರಕಾರ, ಪಕ್ಷ ಇದೆ.ಜನಾಂಗವನ್ನು ನಿಂದನೆ ಮಾಡಿ, ಜನಾಂಗ ಜನಾಂಗವನ್ನ ಹೊಡೆದಾಡುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡ್ತಿದೆ. ಆಗಾಗಿಯೇ ಬಹಳ ಧೈರ್ಯದಿಂದ ಈ ಮಾತನ್ನು ಹೇಳಿದ್ದಾರೆ ಎಂದು ಆರೋಪಿಸಿದರು.

ಒಕ್ಕಲಿಗರನ್ನ ಜರಿದು, ಕೀಳಾಗಿ‌ ಮಾತನಾಡುವ ವೇಳೆ ಕುವೆಂಪು ಹೆಸರನ್ನು ಎಳೆದು ತಂದಿದ್ದಾರೆ. ಇದು ನನ್ನ ಮಾತಲ್ಲ, ಕುವೆಂಪು ಮಾತು ಎಂದಿದ್ದಾರೆ. ಕುವೆಂಪು ಅವರು ಎಲ್ಲಿ ಹೇಳಿದ್ದಾರೆ ತೋರಿಸಬೇಕು. ಯಾವ ಕಾರಣಕ್ಕಾಗಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನೋದು ಹೊರಗೆ ಬರಬೇಕು. ಸರಕಾರಕ್ಕೆ ಬದ್ದತೆ ಇದ್ದರೆ, ಆತ್ಮಗೌರವ ಇದ್ದರೆ ಇವನನ್ನು ಅರೆಸ್ಟ್ ಮಾಡಿಸಬೇಕು.

ಇವನಿಂದಾಗಿ ಇಡಿ ಒಕ್ಕಲಿಗ ಜನಾಂಗ ನಿಂದನೆಗೆ ಒಳಗಾಗಿದೆ ಎಂದು ಏಕವಚನದಲ್ಲಿಯೇ ಪ್ರಹಾರ ನಡೆಸಿದ ಮಾಜಿ ಗೃಹ ಸಚಿವರು, ಸುಮೋಟೋ ಕೇಸ್ ದಾಖಲಿಸಿ ಅವನನ್ನು ಅರೆಸ್ಟ್ ಮಾಡಬೇಕು. ಈ ಸಮುದಾಯ ಭಗವಾನ್ ಗೆ ತಕ್ಕ ಪಾಠ ಕಲಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ-https://suddilive.in/archives/1267

Related Articles

Leave a Reply

Your email address will not be published. Required fields are marked *

Back to top button