ಕ್ರೈಂ ನ್ಯೂಸ್

ಭದ್ರ ಹೊಳೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಹಸುವಿನ‌ರಕ್ಷಣೆ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ಭದ್ರ ನದಿಯಲ್ಲಿ ಸಿಲುಕಿಕೊಂಡಿದ್ದ ಗೋವನ್ನ ಅಗ್ನಿ ಶಾಮಕ ದಳ‌ ರಕ್ಷಿಸಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಭದ್ರಾವತಿಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗದ ನದಿಯಲ್ಲಿ ಕೆಸರಿನ ರೀತಿ ನಿರ್ಮಾಣವಾಗಿತ್ತು. ಹಸು ಮೇಯಿಕೊಂಡು ಹೋಗಿ ಕೆಸರಿನಲ್ಲಿ ಸಿಲುಕಿ ಹೂತುಕೊಂಡಿತ್ತು.

ಇದನ್ನ ಕಂಡ ಸಾರ್ವಜನಿಕರು ನೋಡಿ ಅಗ್ನಿಶಾಮಕ ದಳದವರಿಗೆ ಕರೆ ನೀಡಿದ್ದಾರೆ. ಸುಮಾರು ಒಂದು ಗಂಟೆಯ ಸತತ‌ ಪ್ರಯತ್ನದ ನಂತರ ಹಸುವನ್ನ ಅಗ್ನಿಶಾಮಕದಳ ರಕ್ಷಿಸಿದೆ.

ರಕ್ಷಿಸಿದ ಹಸುವಿನ ಮಾಲಿಕ ಹಳದಮ್ಮ ಕೇರಿಯ ನಿವಾಸಿ ಗುರುರಾಜ್ ಎಂಬುವರೆಂದು ತಿಳಿದುಬಂದಿದೆ. ಇದೇ ವೇಳೆ ಹಸುವನ್ನ ಮಾಲೀಕರು ಹುಡುಕಿಕೊಂಡು ಬಂದಿದ್ದಾರೆ. ಕೆಎಸ್ ಆರ್ ಟಿಸಿ ಹಿಂಭಾಗದ ಭದ್ರ ಹೊಳೆಯಲ್ಲಿ ಹಸುವೊಂದು ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದಾರೆ.

ಹಗ್ಗದ ಸಹಾಯದಿಂದ ಅಗ್ನಿಶಾಮಕ ದಳದ ಎಎಸ್ ಒ ಹುಲಿಯಪ್ಪ ನವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ-https://suddilive.in/archives/14301

Related Articles

Leave a Reply

Your email address will not be published. Required fields are marked *

Back to top button