ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ನಿರ್ಧಾರಕ್ಕೆ ನಮ್ಮ ಬೆಂಬಲ ಎಂದ ಜನಸ್ತೋಮ-ಕಿಕ್ಕಿರಿದ ಸಭೆಯಲ್ಲಿ ಯೋಚಿಸಿ ನಿರ್ಧರಿಸಿ ಎಂದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ

ಸುದ್ದಿಲೈವ್/ಶಿವಮೊಗ್ಗ

ಇದು ಸ್ವಪತ್ರಿಷ್ಠೆಯ ಪ್ರದರ್ಶನವಲ್ಲ ಸ್ವಾಭಿಮಾನದ ಸಂಘರ್ಷ ಎಂಬ ಟ್ಯಾಗ್ ಲೈನ್ ಅಡಿ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ಮಾಜಿ ಸಚಿವ ಈಶ್ವರಪ್ಪನವರ ಉಪಸ್ಥಿತಿಯಲ್ಲಿ ಕಿಕ್ಕಿರಿದ ಜನಸ್ತೋಮ ನಡುವೆ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಮೋದಿ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದಲೇ ಅಭಿಪ್ರಾಯ ಸಂಗ್ರಹಕ್ಕೆ ಸಭೆ ಅಣಿಯಾಗಿದೆ. ಅಜಿ ಕಾರ್ಪರೇಟರ್, ವಿವಿಧ ಸಂಘಟನೆಯ ಮುಖಂಡರು ಭಾಗಿಯಾಗಿ ಈಶ್ವರಪ್ಪನವರ ಬೆಂಬಲಕ್ಕೆ ನಿಂತಿದೆ.

ಭಾವುಸಾರ ಕ್ಷತ್ರಿಯ ಸಮಾಜದ ಗಜೇಂದ್ರ ಸ್ವಾಮಿ ಮಾತನಾಡಿ, ನಾವು ಜಿಲ್ಲೆಯಲ್ಲಿ 50 ಸಾವಿರ ಸಂಖ್ಯೆಯಲ್ಲಿದ್ದೇವೆ. ಗೆಲ್ಲಿಸುವ ಸಾಮರ್ಥ್ಯ ಇಲ್ಲದಿದ್ದರೂ ಸೋಲಿಸುವ ಶಕ್ತಿ ಇದೆ. ಈಶ್ವರಪ್ಪ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಕ್ಕಿದ್ದೇವೆ. ನಮಗೆ ಬೆನ್ನು ತಟ್ಟಿದವರು ಈಶ್ವರಪ್ಪ ನವರು ಹಾಗಾಗಿ ಅವರ ಬೆಂಬಲಕ್ಕೆ ನಾವು ಬದ್ಧ ಎಂದರು.

ವೀರಶೈವ ಸಮಾಜದ ಮಹಾಲಿಂಗ ಸ್ವಾಮಿ ಮಾತನಾಡಿ, ರೋಷಾವೇಶ ಮಾತುಹಾಳುಮಾಡುತ್ತೆ ಕಿಚ್ಚು ನಮ್ಮ ಮನದೊಳಗೆ ಇರಲಿ. ಅವರ ಬೆಂಬಲಕ್ಕೆ ನಮ್ಮ ಸಮಾಜ ನಿಲ್ಲುತ್ತದೆ.

ವಾಸವಿ ಸಮಾಜದ ಶೇಷಾಚಲ ಮಾತನಾಡಿ, ಸಂಘರ್ಷದ ತುಟ್ಟತುದಿಯಲ್ಲಿದ್ದೇವೆ ಯಾವ ಕಡೆ ವಾಲಿದರೂ ಪಕ್ಷ ಸಾಯಲ್ಲ. ನ್ಯಾಯ ಪರ ತೆಗೆದುಕೊಂಡು ಹೋದ ಕೀರ್ತಿ ಈಶ್ವರಪ್ಪನವರಿಗೆ ಸಲ್ಲುತ್ತದೆ. ಪಕ್ಷ ಅಧಿಕಾರಕ್ಕೆ ಬರೊದಿಲ್ಲ ಎಂಬ ಸಮಯದಲ್ಲಿ ಈಶ್ವರಪ್ಪ ಬೆಳೆದಿದ್ದಾರೆ. ನರೇಂದ್ರ ಮೋದಿ ಅವರ ಹಾದಿಯಲ್ಲಿಯೇ ನಡೆಯುವ ಈಶ್ವರಪ್ಪನವರಿಗೆ ಪ್ರತಿಯೊಬ್ಬ ಭಾರತೀಯ ಬೆಂಬಲಿಸಬೇಕೆಂದರು.

ಬೆಳೆಯಲು ನ್ಯಾಯ ಪದ್ಧತಿ ಉನ್ನತಸ್ಥಾನಕ್ಕೆ ತೆಗೆದುಕೊಂಡು ಬಂದಿದೆ. 10 ವರ್ಷದ ಹಿಂದೆಯೇ ಸೂಕ್ಷ್ಮ ತಿಳಿದಿತ್ತು. ಪಕ್ಷ ತಿದ್ದಬೇಕಿತ್ತು. ತಿದ್ದಲಿಲ್ಲ. ಹಾಗಾಗಿ ಈಶ್ವರಪ್ಪನವರ ನಿರ್ಧರಕ್ಕೆ ನಮ್ಮ ಬೆಂಬಲವಿದೆ. ಹಿಙದುತ್ವದ ಪ್ರಶ್ನೆ ಬಂದಾಗ ಈಶ್ವರಪ್ಪ ಕಠೋರವಾಗಿ ಮಾತನಾಡಿದ್ದರು. ನಮ್ಮ ಧ್ವನಿಯಲ್ಲಿ ಮಾತನಾಡಿದ್ದರು. ದಾರಿ ಸುಗಮವಿಲ್ಲ. ಆದರೂ ನಿರ್ಧಾರ ಆಗಬೇಕಿದೆ ಎಂದರು.

ವಿಹೆಚ್ ಪಿಯ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಮಾತನಾಡಿ, ರಾಜಕೀಯ ಮಾಡುವರು ಅನೇಕರಿದ್ದಾರೆ. ನಮ್ಮ ಯುವಕನನ್ನ ವಂಚಿಸಿದ್ದಾರೆ ಷಡ್ಯಂತರದ ಮೂಲಕ ವಂಚಿಸಲಾಗಿದೆ. ಕಷ್ಟ ಸಂದರ್ಭದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಸಮಾಜದ ದೃಷ್ಟಿಯಿಂದ, ಹಿಂದುತ್ವದಿಂದ ಸಂಘಟಿಸಲು ಈಶ್ವರಪ್ಪನವರ ನಿರ್ಧಾರ ಅಮೂಲ್ಯವಾದುದ್ದು ಎಂದರು.

ಜಿಲ್ಲಾ‌ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, ಬಿಜೆಪಿ ಈಶ್ವರಪ್ಪನವರ ಗುರುತಿಸಿ ಬೆಳೆಸಿದೆ. ನಗರ ಅಧ್ಯಕ್ಷರನ್ಬಾಗಿ ರಾಜ್ಯಾಧ್ಯಕ್ಷರಾಗಿ ಡಿಸಿಎಂ ಆಗಿ ಸಿಲ್ಕ್ ಬೋರ್ಡ್ ಅಧ್ಯರನ್ನಾಗಿ ಬೆಳಸಲಾಗಿದೆ. ಬ್ರಾಹ್ಮಣ ಸಮಾಜದೊಂದಿಗೆ ಈಶ್ವರಪ್ಪ ಗುರುತಿಸಿಕೊಂಡಿದ್ದಾರೆ. ಈಶ್ವರಪ್ಪನವರಿಗೆ ಮತ್ತು ಪುತ್ರರಿಗೆ ಸಮಸ್ಯೆ ಆಗಿದ್ದರೆ ನಾಲ್ಕುಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು.

ಇದು‌ ಮೋದಿಯವರ ಚುನಾವಣೆಯಾಗಿದೆ. ನೀವು ನಿಂತರೆ ಮೋದಿಯವರ ವಿರುದ್ಧ ನಿಲ್ಲುವಂತಾಗಿದೆ. ದುಡಿ‌ಕಿನ ನಿರ್ಧಾರ ಬೇಡ‌ ಎಂದು ಹೇಳಿದರು.ಇನ್ನೂ ಅನೇಕರ ಅಭಿಪ್ರಾಯ ಸಂಗ್ರಹವಾಗಬೇಕಿದೆ.  ಈಶ್ವರಪ್ಪನವರ ನಿರ್ಧಾರ ಮಾತ್ರ ಕಾದಿರಿಸಲಾಗಿದೆ.

ಈಡಿಗ ಸಮಾಜದ ಸುರೇಶ್ ಬಾಳಗುಂಡಿ ಮಾತನಾಡಿ, ಈಶ್ವರಪ್ಪನವರ ಮಗನಿಗೆ ಹಾವೇರಿಯಲ್ಲಿ ಟಿಕೇಟ್ ಕೇಳಲು ಈಗಲೂ ಅವಕಾಶವಿದೆ. ಆದರೆ ಶಿವಮೊಗ್ಗದಲ್ಲಿ ಅವರ ಸ್ಪರ್ಧೆಯ ಬಗ್ಗೆ ಯೋಚಿಸಿ ಮಾಡಲಿ. ಏಕೆಂದರೆ ಮೋದಿ ವಿರುದ್ಧ ಸ್ಪರ್ಧೆಯಾಗುವಂತಾಗಬಾರದು ಎಂದು ಸಲಹೆ ನೀಡಿದರು.

ಇದನ್ನೂ ಓದಿ-https://suddilive.in/archives/10779

Related Articles

Leave a Reply

Your email address will not be published. Required fields are marked *

Back to top button