ರಾಜಕೀಯ ಸುದ್ದಿಗಳು

ಸಕ್ಕರೆ ಕಾರ್ಖಾನೆ ಜಾಗದಲ್ಲಿ ರೈತರ ಒಕ್ಕಲೆಬ್ಬಿಸುವ ವಿರುದ್ಧ ಬಿಜೆಪಿ ಭರ್ಜರಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಕ್ಕರೆ ಕಾರ್ಖಾನೆಯ ಜಾಗಕ್ಕೆ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಶಿವಮೊಗ್ಗದ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣಿಗೆ ಬಿದ್ದಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ, ಸಕ್ಕರೆ ಕಾರ್ಖಾನೆಯ ಜಾಗ ಈಗ ಬಿಜೆಪಿಯ ರಾಜಕೀಯ ಅಸ್ತ್ರವಾಗಿ ತೆಗೆದುಕೊಂಡಿದೆ.

ಬೆಳ್ಳಂಬೆಳಿಗ್ಗೆ ಬಿಜೆಪಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. 2374 ಎಕರೆ ಸಕ್ಕರೆ ಕಾರ್ಖಾನೆಯ ಜಾಗದ ಮೇಲೆ ಅಧಿಕಾರದಲ್ಲಿರುವವರ ಬೆಂಬಲಿತರ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣುಬಿದ್ದಿದ್ದು, 50-60 ವರ್ಷದಿಂದ ಬದುಕುಕಟ್ಟಿಕೊಂಡು ಬರುತ್ತಿರುವವರನ್ನ ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.

ಸಂಸದ ರಾಘವೇಂದ್ರ ಮಾತನಾಡಿ, ಜನವರಿ 12 ರ ನಂತರ, 2374 ಎಕರೆ ಪಹಣಿಯಲ್ಲಿ ತುಂಗಭದ್ರ ಶುಗರ್ ಫ್ಯಾಕ್ಟರಿ ಸಂಸ್ಥೆ ಹೆಸರು ದಾಖಲಾಗುತ್ತದೆ.‌ ಕಾಂಗ್ರೆಸ್ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ನ್ಯಾಯಾಲಯ ಆದೇಶ ಮಾಡಿರಬಹುದು ಮಲವಗೊಪ್ಪ, ಯರಗನಾಳ್, ಮೊದಲಾದ ಭಾಗದಲ್ಲಿ ವಸತಿ ಪ್ರದೇಶದಲ್ಲಿ ಅನೇಕ ದಿನಗಳಿಂದ ಸಾಗುವಳಿ ವಸತಿ ಮಾಡಿಕೊಂಡು ಬರುತ್ತಿರುವವರಿಗೆ ಸರ್ಕಾರ ಮುಂದು ಬಂದು ಬಿಟ್ಟುಕೊಡಬೇಕೆಂದು ಆಗ್ರಹಿಸಿದ್ದಾರೆ.

ಕಾಡಾ ಕಚೇರಿಯೂ ಸಹ ಸಕ್ಕರೆ ಕಾರ್ಖಾನೆ ಜಾಗದಲ್ಲಿದೆ. ಈ ಜಾಗ ಸರ್ಕಾರದ್ದಾಗುವುದಾದರೆ ಸಾಗುವಳಿ ವಸತಿ ಮಾಡುತ್ತಿರುವ ರೈತರು ಹಾಗೂ ಸಾರ್ವಜನಿಕರು ಅನೇಕ ವರ್ಷಗಳಿಂದ ಬದುಕುಕಟ್ಟಿಕೊಂಡು ಬಂದವರಿಗೆ ಬಿಟ್ಟುಕೊಡಬೇಕು.‌ ಒಕ್ಕಲೆಬ್ಬಿಸಿದರೆ ರೈತರು ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಸಿದರು.

ಮಲವಗೊಪ್ಪದಲ್ಲಿ ಲೇಔಟ್ ನಡೆಯುತ್ತಿದೆ. ಈ ಲೇಔಟ್ ನ್ನ‌ ನಿರ್ಮಿಸಲು ಅವಕಾಶಕೊಡದೆ ಫ್ರೀಡಂ‌ಪಾರ್ಕ್ ರೀತಿ ಉದ್ಯಾನವನ್ನ ನಿರ್ಮಿಸಬೇಕು. ಬಹಳ ವ್ಯವಸ್ಥೆಯಲ್ಲಿ ಎದುರಾಳಿಗಳು ಹೋಗುತ್ತಿದ್ದಾರೆ. ಮುಂದಿನ ತಿಂಗಳ 12 ರ ಒಳಗೆ ರೈತರ ಹೆಸರು ಬಾರದಿದ್ದರೆ ಸಕ್ಕರೆ ಕಾರ್ಖಾನೆಗೆ ಸೇರಲಿದೆ. ನ್ಯಾಯಾಲಯ ರಜೆ ಇದೆ. ನ್ಯಾಯಾಲಯಕ್ಕೆ ಹೋಗದಂತೆ ನೋಡಿಕೊಳ್ಳಲಾಗಿದೆ. ಕಾನೂನು ಹೋರಾಟ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ರೈತರ ಪರ ನಿಲ್ಲಬೇಕು. ಸಕ್ರಮ ಅರ್ಜಿ ಸಲ್ಲಿಸಿದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ದೂರಿದರು.

ನಾನು ಈ ಜಾಗವನ್ನ ಖರೀದಿಸಿರುವ ಯೋಚನೆ ಮಾಡಿದ್ದರು ಲೋಕಸಭೆ ಚುನಾವಣೆಗೆ ನಾಮಪತ್ರವನ್ನೂ‌ ಸಲ್ಲಿಸೊಲ್ಲ ಎಂದು ಹೇಳಿದ್ದೆ ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ. ಮುಂದಿನ ದಿನಗಳಲ್ಲಿ ದಿನ ಒಂದೊಂದು ಗ್ರಾಮದಿಂದ ಪ್ರತಿಭಟನೆ ನಡೆಸಲು ರೈತರಿಗೆ ಸೂಚಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿರುವ ರೈತರನ್ನ ಒಕ್ಕಲೆಬ್ಬಿಸುವಂತೆ ಉಪಮುಖ್ಯಮಂತ್ರಿ ಡಿಕೆಶಿ ಆಪ್ತ ಸಹಾಯಕನಿಂದ ಕರೆಬಂದಿದೆ. ಇದು ತನಿಖೆಯಾಗಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ ಗುಡುಗಿದರು.

ಈ ವಿಚಾರದಲ್ಲಿ ಸಂಸದರ ಹೆಸರನ್ನ ಪ್ರಸ್ತಾಪಿಸಲಾಗಿದೆ. ಈ ಭಾಗದಲ್ಲಿ ಒಂದು ಗುಂಟೆ ಭೂಮಿಯನ್ನ ಪಡೆಯಲು ಪ್ರಯತ್ನಿಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಸವಾಲು ಹಾಕಿದ್ದರು.

ಪಕ್ಷ ಇದುವರೆಗೂ ಸಕ್ಕರೆ ಕಾರ್ಖಾನೆಯ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದವರಿಗೆ ಹಕ್ಕು ಪತ್ರ ನೀಡಬೇಕು. ನ್ಯಾಯಾಲಯದ ಮೂಲಕ ಸರ್ಕಾರ ಹಕ್ಕುಪತ್ರ ನೀಡಬೇಕು. ಜಾಗವನ್ನ ಕಬಳಿಸುವಂತೆ ಬಿಜೆಪಿ ಬಿಡೊಲ್ಲ. ಇತರೆ ಪಕ್ಷಗಳು ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಇತರೆ ಪಕ್ಷಗಳು ಮುಖವಾಡ ಕಳಚಿಬೀಳಲಿದೆ ಎಂದರು.

ಆಯನೂರು ಮಂಜುನಾಥ್ ಅವರನ್ನ ನಮ್ಮ ಪಕ್ಷದಲ್ಲಿರುವ ಕಾರಣಕ್ಕೆ ಅವರನ್ನ ಮಂಜಣ್ಣ ಎಂದು ಕರೆಯುತ್ತೇವೆ. ಮಂಜಣ್ಣ ಅವರೇ ನಿಮ್ಮನಿಲುವೇನು? ಉಸ್ತುವಾರಿ ಮಂತ್ರಿಗಳಿಗೆ ಈಗ ಕಿವಿಗೆ ಬಿದ್ದಿದೆ ಈ ಕಪಟನಾಟಕ ಬಿಟ್ಟು ಬನ್ನಿ ಡಿಕೆಶಿ ಅವರೇ ರಾಮನಗರವನ್ನ ಏನು ಮಾಡಿದ್ದೀರಿ ಗೊತ್ತಿದೆ. ಅದನ್ನ ಶಿವಮೊಗ್ಗದಲ್ಲಿ ಮಾಡಬೇಡಿ ಎಂದು ಗುಡುರ್ ಹಾಕಿದರು. ಜೀವನಾದರೂ ಬಿಡುವೆವು ಒಂದು ಅಡಿ ಜಾಗವನ್ನ ಬಿಡೆವು ಎಂಬ ಅಭಿಯಾನದ ಅಡಿ ಹೋರಾಡೋಣ ಎಂದು ಹೇಳಿದರು.

ರೈತ ವಿರೋಧಿ ಭೂಗಳ್ಳರಿಗೆ ದಿಕ್ಕಾರ, ಎಲ್ಲಿಯ ವರೆಗೆ ಹೋರಾಟ, ಜೀವನ್ನಾದರೂ ಬಿಟ್ಟೆವು ಭೂಮಿಯನ್ನ ಬಿಡೆವು ಎಂಬ ಘೋಷಣೆ ಮೊಳಗಿದವು. ಈ ವೇಳೆ ಶಾಲಾ ಮಕ್ಕಳು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/5469

Related Articles

Leave a Reply

Your email address will not be published. Required fields are marked *

Back to top button