ರಾಜಕೀಯ ಸುದ್ದಿಗಳು

ಒಮ್ಮೆ ವೇದಾಂತಿ ಒಮ್ನೆ ವೈರಾಗಿಯಾಗಿ ಮಾತನಾಡಿದ ಯತ್ನಾಳ್

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಯಿಲ್ಲ. ಬಜೆಟ್ ಮಂಡನೆಗೆ ರೊಕ್ಕಯಿಲ್ಲ. ಲೋಕ ಸಮರದವರೆಗೆ ಗ್ಯಾರೆಂಟಿ ಚುನಾವಣೆ ನಂತರ ಗ್ಯಾರೆಂಟಿಗೆ ವಾರೆಂಟಿ ಇಲ್ಲ ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ತಿಳಿಸಿದರು.

ಅವರು ಶಿವಮೊಗ್ಗದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಲು ಆಗಮಿಸಿದ್ದು, ಈ ವೇಳೆ ಮಾಧ್ಯಮಗಳಿಗೆ ಮಾತನಾಡಿ, ಲೋಕ ಸಭೆಯ ಚುನಾವಣೆಯ ವರೆಗೆ ಮಾತ್ರ ಈ ಗ್ಯಾರೆಂಟಿಗೆ ವಾರೆಂಟಿ ಇಲ್ಲ. ಸರ್ಕಾರದ ಬಗ್ಗೆನೂ ಗ್ಯಾರೆಂಟಿಯಿಲ್ಲ ಎಂದರು.

ಮೈಸೂರಿನಲ್ಲೊಂದು ಹಳ್ಳಿ ಹಕ್ಕಿ ಇಲ್ಲೊಬ್ಬ ಸ್ವಾತಂತ್ರ್ಯದ ಹಕ್ಕಿ ಎಂದು ಯತ್ನಾಳ್ ಗುಡುಗಿದ್ದಾರೆ. ತಮಗೆ ರಾಜ್ಯ ಬಿಜೆಪಿಯಲ್ಲಿ ತಮಗೆ ಸ್ಥಾನಮಾನ ಸಿಗದೆ ಇರುವ ಬಗ್ಗೆ ಯತ್ನಾಳ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾರತಮ್ಯವೇ ಸೃಷ್ಠಿ ನಿಯಮವೆಂದು ವೇದಾಂತಿಯಂತೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ ಮಹಾಭಾರದಲ್ಲಿ ಅಪ್ರತಿಮ ವೀರ ಕರ್ಣ ಇದ್ದ ಆತನನ್ನ ಗುರುತಿಸಿರಲಿಲ್ಲ.

ಹಾಗೇ ಅಪ್ರತಿಮ‌ ಬಿಲ್ಲುವಿದ್ಯೆ ಕಲಿತ ಏಕಲವ್ಯ ಇದ್ದ ಅರ್ಜುನನ್ನ ಬಿಂಬಿಸಲಾಯಿತು. ತ್ಯಾಗಕ್ಕಾಗಿ ಸಿದ್ದರಾಗಿದ್ದೇವೆ ಎಂದು ವೈರಾಘಯದ ಮಾತನಾಡಿದ್ದಾರೆ. ಕೇಂದ್ರ ಸಚಿವ ಜ್ಯೋಷಿಯವರ ಮನೆಯಲ್ಲಿ ಸಭೆ ನಡೆದಿಲ್ಲ. ಅವರ‌ಕಪ್ ನಲ್ಲಿ ಅವರು ಚಹ ಕುಡಿದಿದ್ದಾರೆ. ನನ್ನ ಕಪ್ ನಲ್ಲಿ ನಾನು ಚಹ ಕುಡಿದಿರುವೆ ಎಂದಿದ್ದಾರೆ. ಜೋಷಿ ಮನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರನ ಜೊತೆಯ ಸಭೆಯ ಕುಎಇತು ಯತ್ನಾಳ್ ಪ್ರತಿಕ್ರಿಯೆ ಹೀಗಿತ್ತು.

ಯಾವ ಚಾನೆಲ್ ನವರು ಏನು ಹೇಳಿದರೂ ತಲೆ ಕೆಡಿಸಿಕೊಳ್ಳುವವನು ನಾನು‌ಅಲ್ಲ. 2024 ರಲ್ಲಿ ಪ್ರಧಾನಿ ಮೋದಿ ಪ್ರಧಾನಿ ಆಗಬೇಕು. ಭಾರತ ಒಂದಾಗಿ ಇರಬೇಕು. ಅಯೋಧ್ಯ ರಾಮಮಂದಿರ ನಿರ್ಮಾಣವಾಗಿದೆ. ರಾಂಂದಿರದ ಉಳಿವಿಗಾಗಿ ರಾಜ್ಯದಲ್ಲಿ 28 ಕ್ಕೆ 28 ಲೋಕ ಸಭಾ ಸ್ಥಾನ ಗೆಲ್ಲಲೊಲಿದ್ದೇವೆ ಎಂದರು.

ರಾಹುಲ್ ಗಾಂಧಿ ಟೈಂ ಪಾಸ್ ನಾಯಕ

ಮೋದಿ ಒಬಿಸಿಗೆ ಸೇರಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ. ಅವರನ್ನ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಟೈಂ ಪಾದ್ ಗೆ ಒಬ್ಬ ಬೇಕು ಅಂತವರು ಒಬ್ಬಬೇಕು ಮಾತಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/8957

Related Articles

Leave a Reply

Your email address will not be published. Required fields are marked *

Back to top button